
ಮೆಲ್ಬೋರ್ನ್(ಜೂ.15): ಆಧುನಿಕ ಕ್ರಿಕೆಟ್ ಬದಲಾಗಿದೆ. ಫಿಟ್ನೆಸ್‌ಗೆ ಮೊದಲ ಆದ್ಯತೆ ಸಿಕ್ಕಿದೆ. ಎಲ್ಲಾ ತಂಡಗಳು ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡಿದೆ. ಎಲ್ಲರೂ ಫಿಟ್ ಆಗಿರುವ ಕಾರಣ ಫೀಲ್ಡಿಂಗ್ ಅತ್ಯುತ್ತಮವಾಗಿದೆ. ಇದರಲ್ಲಿ ಬೆಸ್ಟ್ ಫೀಲ್ಡರ್ ಯಾರು ಅನ್ನೋದನ್ನು ಸ್ಟೀವ್ ಸ್ಮಿತ್ ಬಹಿರಂಗ ಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಪ್ರಕಾರ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ ಬೆಸ್ಟ್ ಫೀಲ್ಡರ್ ಎಂದಿದ್ದಾರೆ.
ರವೀಂದ್ರ ಜಡೇಜಾ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ!...
ರವೀಂದ್ರ ಜಡೇಜಾ ಫೀಲ್ಡಿಂಗನ್ನು ಬಹುತೇಕ ಎಲ್ಲಾ ದಿಗ್ಗಜ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಜಡ್ಡು ಬಳಿ ಬಾಲ್ ಹೋದಾಗ ರನ್ ಓಡಿದರೆ ರನೌಟ್ ಪಕ್ಕಾ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿದೆ. ಅಷ್ಟರ ಮಟ್ಟಿಗೆ ಚುರುಕುತನ ಹಾಗೂ ನಿಖರತೆ ಜಡೇಜಾ ಹೊಂದಿದ್ದಾರೆ. ಇದೀಗ ಸ್ಟೀವ್ ಸ್ಮಿತ್ ಕೂಡ ರವೀಂದ್ರ ಜಡೇಜಾ ಬೆಸ್ಟ್ ಫೀಲ್ಡರ್ ಎಂದಿದ್ದಾರೆ.
ಸಚಿನ್-ಸೆಹ್ವಾಗ್ ಇಬ್ಬರಲ್ಲಿ ಯಾರು ಬೆಸ್ಟ್? ರೋಹಿತ್ ಕೊಟ್ರು ಡಿಫರೆಂಟ್ ಉತ್ರ
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಶ್ನೆಗೆ ಸ್ಟೀವ್ ಸ್ಮಿತ್ ಉತ್ತರಿಸಿತ್ತು ಜಡ್ಡುಗೆ ಬೆಸ್ಟ್ ಫೀಲ್ಡರ್ ಪಟ್ಟ ನೀಡಿದ್ದಾರೆ. ಇನ್ನು ಪ್ರದರ್ಶನದಲ್ಲಿ ನಿಮ್ಮನ್ನು ಆಕರ್ಷಿಸಿದ ಭಾರತೀಯ ಬ್ಯಾಟ್ಸ‌್‌ಮನ್ ಯಾರು ಅನ್ನೋ ಪ್ರಶ್ನೆಗೆ ಸ್ಟೀವ್ ಸ್ಮಿತ್, ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ. ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದಿದ್ದಾರೆ. ಯುವ ಜನರೇಶನ್‌ನಲ್ಲಿ ರಾಹುಲ್ ಬೆಸ್ಟ್ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.