ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯಕ್ಕೆ ಪ್ರತಿಭಟನೆ ಬಿಸಿ, ಸ್ಥಳ ಬದಲಾವಣೆ!

By Suvarna NewsFirst Published Nov 24, 2022, 9:18 PM IST
Highlights

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ ನೇರವಾಗಿ ಬಾಂಗ್ಲಾದೇಶ ಪ್ರಯಾಣ ಬೆಳೆಸಲಿದೆ. ಬಾಂಗ್ಲಾದೇಶ ವಿರುದ್ಧ 3 ಏಕದಿನ ಸರಣಿ ಆಡಲಿದೆ. ಆದರೆ ಪ್ರತಿಭಟನೆ ಕಾರಣದಿಂದ ಪಂದ್ಯದ ಸ್ಥಳ ಬದಲಾಯಿಸಲಾಗಿದೆ.

ಮುಂಬೈ(ನ.24):  ಭಾರತ ಹಾಗೂ ಬಾಂಗ್ಲಾದೇಶ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಬಳಿಕ ಬಾಂಗ್ಲಾದೇಶ ಪ್ರವಾಸ ಮಾಡಲಿದೆ. ಬಾಂಗ್ಲಾದೇಶ ವಿರುದ್ಧ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯ ಆಡಲಿದೆ. ಡಿಸೆಂಬರ್ 4 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳನ್ನು ಢಾಕಾದಲ್ಲಿ ಆಯೋಜಿಸಲಾಗಿದೆ. ಆದರೆ ಮೂರನೇ ಏಕದಿನ ಪಂದ್ಯವನ್ನು ಇದೀಗ ಢಾಕಾದಿಂದ ಚಿತ್ತಗೊಂಗ್‌ಗೆ ಸ್ಥಳಾಂತರಿಸಲಾಗಿದೆ. ಡಿಸೆಂಬರ್ 10 ರಂದು ಢಾಕಾದಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಡಿಸೆಂಬರ್ 10 ರಂದು ಬಾಂಗ್ಲಾದೇಶದ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಿಂದ ಆಟಗಾರರ ಭದ್ರತೆ ಹಾಗೂ ಪಂದ್ಯಕ್ಕೂ ಅಡಚಣೆಯಾಗಲಿದೆ. ಮುನ್ನಚ್ಚರಿಕಾ ಕ್ರಮವಾಗಿ ಪಂದ್ಯವನ್ನು ಚಿತ್ತಗೊಂಗ್‌ಗೆ ಸ್ಥಳಾಂತರಿಸಲಾಗಿದೆ.

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡಿದ ಬಿಸಿಸಿಐ!

3ನೇ ಹಾಗೂ ಅಂತಿಮ ಏಕದಿನ ಬಳಿಕ ಅದೆ ಚಿತ್ತಗೊಂಗ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಎರಡನೇ ಟೆಸ್ಟ್ ಪಂದ್ಯ ಢಾಕಾದಲ್ಲೇ ನಡೆಯಲಿದೆ.  ಬಾಂಗ್ಲಾದೇಶ ಸ್ಥಳ ಬದಲಾವಣೆ ಮಾಡಿದರೆ, ಇತ್ತ ಟೀಂ ಇಂಡಿಯಾ ತಂಡದಲ್ಲಿ ಎರಡು ಬದಲಾವಣೆಯನ್ನು ಬಿಸಿಸಿಐ ಮಾಡಿದೆ. ಬಾಂಗ್ಲಾದೇಶ ಏಕದಿನ ಸರಣಿಗೆ ಆಯ್ಕೆಯಾಗಿದ್ದ ರವೀಂದ್ರ ಜಡೇಜಾ ಹಾಗೂ ಯಶ್ ದಯಾಳ್ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಇವರ ಬದಲು ಕುಲ್ದೀಪ್ ಸೇನ್ ಹಾಗೂ ಶಹಬಾಜ್ ಅಹಮ್ಮದ್ ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ಶಹಬಾಜ್ ಅಹಮ್ಮದ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲ್ದೀಪ್ ಸೇನ್

ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಉಮ್ರಾನ್ ಮಲಿಕ್‌ಗೆ ಸಿಗುತ್ತಾ ಸ್ಥಾನ?

ಟೆಸ್ಟ್‌ ತಂಡ
ರೋಹಿತ್‌(ನಾಯಕ), ರಾಹುಲ್‌, ಗಿಲ್‌, ಪೂಜಾರ, ಕೊಹ್ಲಿ, ಶ್ರೇಯಸ್‌, ಪಂತ್‌, ಕೆ.ಎಸ್‌ ಭರತ್‌, ಅಶ್ವಿನ್‌, ಜಡೇಜಾ, ಅಕ್ಷರ್‌, ಕುಲ್ದೀಪ್‌ ಯಾದವ್‌, ಶಾರ್ದೂಲ್‌, ಶಮಿ, ಸಿರಾಜ್‌, ಉಮೇಶ್‌ ಯಾದವ್‌.

ಭಾರತದ ಮಡಿಲಿಗೆ ಕಿವೀಸ್‌ ಟಿ20 ಸರಣಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಅಪರೂಪದ ಫಲಿತಾಂಶಕ್ಕೆ ಮಂಗಳವಾರ ಭಾರತ-ನ್ಯೂಜಿಲೆಂಡ್‌ 3ನೇ ಟಿ20 ಪಂದ್ಯ ಸಾಕ್ಷಿಯಾಗಿದೆ. ಮಳೆಪೀಡಿತ ಪಂದ್ಯದಲ್ಲಿ ಡಕ್ವತ್‌ರ್‍ ಲೂಯಿಸ್‌ ನಿಯಮ(ಡಿಆರ್‌ಎಸ್‌)ದ ಅನ್ವಯ ಟೈ ಆಗಿದ್ದು, 2ನೇ ಪಂದ್ಯದಲ್ಲಿ ಜಯಗಳಿಸಿದ್ದ ಭಾರತ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.
 

click me!