ಆಸ್ಟ್ರೇಲಿಯಾ ಎದುರು ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ..!

By Naveen Kodase  |  First Published Nov 7, 2023, 1:41 PM IST

ಆಫ್ಘಾನಿಸ್ತಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಫಜಲ್‌ಹಕ್ ಫಾರೂಕಿ ಬದಲಿಗೆ ನವೀನ್ ಉಲ್ ಹಕ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಗ್ರೀನ್ ಬದಲಿಗೆ ಮಿಚೆಲ್ ಮಾರ್ಷ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಂಡ ಕೂಡಿಕೊಂಡಿದ್ದಾರೆ.


ಮುಂಬೈ: 2023ರ ಐಸಿಸಿ ಏಕದಿನ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಹಸ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ.

ಆಫ್ಘಾನಿಸ್ತಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಫಜಲ್‌ಹಕ್ ಫಾರೂಕಿ ಬದಲಿಗೆ ನವೀನ್ ಉಲ್ ಹಕ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಗ್ರೀನ್ ಬದಲಿಗೆ ಮಿಚೆಲ್ ಮಾರ್ಷ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಂಡ ಕೂಡಿಕೊಂಡಿದ್ದಾರೆ.

Latest Videos

undefined

ಸತತ 5 ಗೆಲುವುಗಳೊಂದಿಗೆ ಭರ್ಜರಿ ಲಯದಲ್ಲಿರುವ ಆಸ್ಟ್ರೇಲಿಯಾ, ಇಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಆಸೀಸ್‌ಗೆ ಇದಾದ ಮೇಲೆ ಇನ್ನೂ ಒಂದು ಪಂದ್ಯ ಬಾಕಿ ಇದ್ದರೂ, ಕೊನೆಯ ಪಂದ್ಯದ ವರೆಗೂ ಕಾಯದೆ ಈ ಪಂದ್ಯದಲ್ಲೇ ಅಗ್ರ-4ರಲ್ಲಿ ಸ್ಥಾನವನ್ನು ಅಧಿಕೃತಗೊಳಿಸಿಕೊಳ್ಳುವ ಉತ್ಸಾಹದಲ್ಲಿದೆ.

ಇನ್ನೊಂದೆಡೆ ಅಫ್ಘಾನಿಸ್ತಾನ ಸಹ ಸತತ 3 ಸೇರಿ ಒಟ್ಟು 4 ಪಂದ್ಯಗಳನ್ನು ಗೆದ್ದಿದ್ದು, ಸೆಮೀಸ್ ರೇಸ್‌ನಲ್ಲಿ ಉಳಿದಿದೆ. ಆಸೀಸ್‌ಗೆ ಸೋಲುಣಿಸಿದರೆ ತಂಡದ ಸೆಮೀಸ್ ಆಸೆ ಜೀವಂತವಾಗಿ ಉಳಿಯಲಿದ್ದು, ಆಗ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳಿಗೆ ಆತಂಕ ಶುರುವಾಗಲಿದೆ. ಆಫ್ಘನ್ ತಂಡವು ನಾಲ್ವರು ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿದ್ದು, ಸ್ಪಿನ್ ದಾಳಿ ಎದುರಿಸುವುದು ಆಸ್ಟ್ರೇಲಿಯಾದ ಪ್ರಮುಖ ದೌರ್ಬಲ್ಯಗಳಲ್ಲಿ ಒಂದಾದರೂ, ವಾಂಖೇಡೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಪಾಲಿನ ಸ್ವರ್ಗ ಎನಿಸಿದೆ.

ಇಲ್ಲಿ ಈ ಟೂರ್ನಿಯಲ್ಲಿ ನಡೆದಿರುವ 3 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 399, 382 ಹಾಗೂ 357 ರನ್ ದಾಖಲಾಗಿದ್ದು, ಈ ಪಂದ್ಯದಲ್ಲಿ ಆಸೀಸ್ ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಬ್ಯಾಟರ್ ಗಳು ಗಮನಾರ್ಹ ಪ್ರದರ್ಶನ ನೀಡಿದ್ದರೂ, ತಂಡ ಒಮ್ಮೆಯೂ 300 ರನ್ ದಾಟಿಲ್ಲ. 
 

click me!