ಟೀಂ ಇಂಡಿಯಾ ಆಟಗಾರರಿಗೆ ಸೆಂಚುರಿ ಫೋಬಿಯಾ..! ಭಾರತೀಯರಿಂದ 9 ಶತಕಗಳು ಮಿಸ್..!

By Suvarna News  |  First Published Nov 7, 2023, 5:03 PM IST

ಭಾರತೀಯರು ಈ ವಿಶ್ವಕಪ್ನಲ್ಲಿ ಕೇವಲ 3 ಶತಕ ಹೊಡೆದಿರಬಹುದು. ಆದ್ರೆ ಭಾರತೀಯರಿಂದ ಬರೋಬ್ಬರಿ 9 ಸೆಂಚುರಿಗಳು ಮಿಸ್ ಆಗಿವೆ. ನಿಮಗೆ ಆಶ್ಚರ್ಯವಾದ್ರೂ ಸತ್ಯ. 8 ಪಂದ್ಯಗಳಿಂದ ಇಂಡಿಯನ್ ಬ್ಯಾಟರ್ಸ್  9 ಶತಕ ಕೈ ಬಿಟ್ಟಿದ್ದಾರೆ. ಈ 9 ಶತಕಗಳು ದಾಖಲಾಗಿದ್ರೆ ಈ ವಿಶ್ವಕಪ್ನಲ್ಲಿ ಭಾರತೀಯರು 12 ಶತಕ ಹೊಡೆದಂತಾಗ್ತಿತ್ತು.


ಬೆಂಗಳೂರು(ನ.07) ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ 49 ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಈ ವಿಶ್ವಕಪ್‌ನಲ್ಲಿ ಭಾರತೀಯ ಆಟಗಾರರು ಹೊಡೆದಿರುವುದು ಜಸ್ಟ್ ಮೂರೇ ಶತಕ. ಆದ್ರೆ ಭಾರತೀಯರ ಕೈಯಿಂದ ಮಿಸ್ ಆಗಿರೋ ಸೆಂಚುರಿಗಳು ಬರೋಬ್ಬರಿ 9. ಯಾರ್ಯಾರು ಶತಕ ವಂಚಿತರಾಗಿದ್ದಾರೆ ಅನ್ನೋದು ಇಲ್ಲಿದೆ ನೋಡಿ.

ದಕ್ಷಿಣ ಆಫ್ರಿಕಾ ಎದುರು ಕೋಲ್ಕತಾದ ಈಡೆನ್ ಗಾರ್ಡನ್ಸ್‌ ಮೈದಾನದಲ್ಲಿ ಭಾನುವಾರ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದ್ರು. ಇದು ಈ ವಿಶ್ವಕಪ್‌ನಲ್ಲಿ ಕಿಂಗ್ ಕೊಹ್ಲಿಯ ಎರಡನೇ ಶತಕ. ಬಾಂಗ್ಲಾ ವಿರುದ್ಧ ಶತಕ ಹೊಡೆದಿದ್ದ ವಿರಾಟ್ ಕೊಹ್ಲಿ, ಆಫ್ರಿಕಾ ವಿರುದ್ಧವೂ ಸೆಂಚುರಿ ಹೊಡೆದ್ರು. ಕೊಹ್ಲಿ ಬಿಟ್ರೆ ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ್ರು. ಈ ವಿಶ್ವಕಪ್ನಲ್ಲಿ ಭಾರತದ ಪರ ಈ ಇಬ್ಬರೇ ಶತಕ ಹೊಡೆದಿರೋದು. 

Tap to resize

Latest Videos

ಭಾರತೀಯರಿಂದ 9 ಶತಕಗಳು ಮಿಸ್..!

ಭಾರತೀಯರು ಈ ವಿಶ್ವಕಪ್ನಲ್ಲಿ ಕೇವಲ 3 ಶತಕ ಹೊಡೆದಿರಬಹುದು. ಆದ್ರೆ ಭಾರತೀಯರಿಂದ ಬರೋಬ್ಬರಿ 9 ಸೆಂಚುರಿಗಳು ಮಿಸ್ ಆಗಿವೆ. ನಿಮಗೆ ಆಶ್ಚರ್ಯವಾದ್ರೂ ಸತ್ಯ. 8 ಪಂದ್ಯಗಳಿಂದ ಇಂಡಿಯನ್ ಬ್ಯಾಟರ್ಸ್  9 ಶತಕ ಕೈ ಬಿಟ್ಟಿದ್ದಾರೆ. ಈ 9 ಶತಕಗಳು ದಾಖಲಾಗಿದ್ರೆ ಈ ವಿಶ್ವಕಪ್ನಲ್ಲಿ ಭಾರತೀಯರು 12 ಶತಕ ಹೊಡೆದಂತಾಗ್ತಿತ್ತು.

ICC World Cup 2023 ರೋಹಿತ್ ಶರ್ಮಾ ಪಡೆಯ ಸಕ್ಸಸ್ ಸೀಕ್ರೇಟ್ ಏನು ಗೊತ್ತಾ..?

80-90ರ ಗಡಿಯಲ್ಲಿ ಔಟಾಗಿದ್ದಾರೆ ಪ್ಲೇಯರ್ಸ್

ವಿರಾಟ್ ಕೊಹ್ಲಿ ಬರೋಬ್ಬರಿ 3 ಸೆಂಚುರಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. 85, 95 ಮತ್ತು 88 ರನ್‌ಗೆ ಔಟಾಗುವ ಮೂಲಕ ಶತಕ ವಂಚಿತರಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೈಯಿಂದ ತಲಾ ಎರಡು ಶತಕಗಳು ಜಾರಿವೆ. ಪಾಕ್, ಇಂಗ್ಲೆಂಡ್ ವಿರುದ್ಧ ರೋಹಿತ್ ಶತಕ ವಂಚಿತರಾದ್ರೆ, ಶ್ರೇಯಸ್ ಲಂಕಾ ಮತ್ತು ಆಫ್ರಿಕಾ ವಿರುದ್ಧ ಸೆಂಚುರಿ ಮಿಚ್ ಮಾಡಿಕೊಂಡ್ರು. ಲಂಕಾ ವಿರುದ್ಧ ಗಿಲ್, ಆಸೀಸ್ ವಿರುದ್ಧ ರಾಹುಲ್ 90ರ ಗಡಿಯಲ್ಲಿ ಎಡವಿದ್ರು.

Timed Out controversy : ‘ನಾವು ಯುದ್ಧದಲ್ಲಿದ್ದೆವು. ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ’

ಸೌತ್ ಆಫ್ರಿಕಾ 8 ಶತಕ

ಯೆಸ್, ಈ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ ಹೊಡೆದಿರುವ ತಂಡ ಅಂದ್ರೆ ಅದು ಸೌತ್ ಆಫ್ರಿಕಾ. ಮೊದಲ 7 ಪಂದ್ಯಗಳಲ್ಲಿ ಆಫ್ರಿಕನ್ನರು 8 ಸೆಂಚುರಿ ಸಿಡಿಸಿದ್ದಾರೆ. ಅದರಲ್ಲಿ ಕ್ವಿಂಟನ್ ಡಿಕಾಕ್ ಒಬ್ಬರೇ ನಾಲ್ಕು ಶತಕ ಬಾರಿಸಿದ್ದಾರೆ. ಒಟ್ನಲ್ಲಿ ಆಫ್ರಿಕನ್ನರಿಗೆ ಇರೋ ಅದೃಷ್ಟ ಭಾರತೀಯರಿಗಿಲ್ಲ. ಉಳಿದ ಪಂದ್ಯಗಳಲ್ಲಾದ್ರೂ ಭಾರತೀಯರು ಶತಕ ವಂಚಿತರಾಗೋದು ನಿಲ್ಲಿಸಲಿ ಎನ್ನುವುದು ಟೀಂ ಇಂಡಿಯಾ ಅಭಿಮಾನಿಗಳ ಹಾರೈಕೆಯಾಗಿದೆ..

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!