ಭಾರತ ವಿರುದ್ಧದ ಸರಣಿಗಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸಿದೆ. ನವದೆಹಲಿಗೆ ಬಂದಿಳಿದ ಬಾಂಗ್ಲಾ ತಂಡಕ್ಕೆ ದೆಹಲಿ ವಾಯು ಮಾಲಿನ್ಯದ ಬಿಸಿ ತಟ್ಟಿದೆ. ಹೀಗಾಗಿ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದೆ.
ನವದೆಹಲಿ(ಅ.31): ಭಾರತ ವಿರುದ್ಧ ಟಿ20 ಸರಣಿಗಾಗಿ 15 ಸದಸ್ಯರ ಬಾಂಗ್ಲಾದೇಶ ತಂಡ ಬುಧವಾರ ನವದೆಹಲಿಗೆ ಬಂದಿಳಿಯಿತು. ಭಾರತ ಹಾಗೂ ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಟಿ20 ಸರಣಿ ನ.3ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿದೆ.
ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!
undefined
ದೆಹಲಿಯಲ್ಲಿ ಪಂದ್ಯ ಆಯೋಜಿಸುವುದು ಬಿಸಿಸಿಐಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಯು ಮಾಲಿನ್ಯದಿಂದಾಗಿ ನವದೆಹಲಿ ಸಂಪೂರ್ಣ ಧೂಳು ಮಿಶ್ರಿತ ಮಂಜಿನಿಂದ ಮುಸುಕಿ ಹೋಗಿದೆ. ಹಲವರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ದೆಹಲಿ ಟಿ20 ಪಂದ್ಯವನ್ನು ಸ್ಥಳಾಂತರಗೊಳಿಸುವ ಕೂಗು ಕೇಳಿ ಬರುತ್ತಿದೆ. ಆದರೆ ಹಗಲು-ರಾತ್ರಿ ಪಂದ್ಯ ನಡೆಯುವುದರಿದಂ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂದು ಬಿಸಿಸಿಐ ನಂಬಿಕೊಂಡಿದೆ.
ಇದನ್ನೂ ಓದಿ: ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್ ಬಾಲ್!
ದೆಹಲಿ ಪಂದ್ಯದ ಬಳಿಕ 2ನೇ ಟಿ20 ಪಂದ್ಯ ನ.7ರಂದು ರಾಜ್‌ಕೋಟ್ ಹಾಗೂ 3ನೇ ಪಂದ್ಯ ನ.10ರಂದು ನಾಗ್ಪುರದಲ್ಲಿ ನಡೆಯಲಿದೆ. ಟಿ20 ಬಳಿಕ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಗುರುವಾರ ಭಾರತ ತಂಡ ದೆಹಲಿ ತಲುಪಲಿದೆ. ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಉಭಯ ತಂಡಗಳು ಒಳಾಂಗಣ ಅಭ್ಯಾಸಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ.