ಅನುಷ್ಕಾ ಶರ್ಮಾ ಫೋಟೋಗೆ ಕಾಮೆಂಟ್ ಮಾಡಿದ ಡೇವಿಡ್ ವಾರ್ನರ್ ಟ್ರೋಲ್..! ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವೈರಲ್

By Naveen KodaseFirst Published Sep 4, 2022, 1:35 PM IST
Highlights

ಅನುಷ್ಕಾ ಶರ್ಮಾ ಪಡೆದ ನೀನೇ ಅದೃಷ್ಟವಂತನೆಂದ ಡೇವಿಡ್ ವಾರ್ನರ್
ಡೇವಿಡ್ ವಾರ್ನರ್ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌
ಕೊನೆಗೆ ವಾರ್ನರ್‌ ಕಾಮೆಂಟ್ ಮೆಚ್ಚಿಕೊಂಡ ಮಾಜಿ ನಾಯಕ ವಿರಾಟ್ ಕೊಹ್ಲಿ

ನವದೆಹಲಿ(ಸೆ.04): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಶುಕ್ರವಾರ(ಸೆ.02)ದಂದು ತಮ್ಮ ಮುದ್ದಾದ ಮಡದಿ ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದರ ಜತೆಗೆ ನನ್ನ ಪ್ರೀತಿಯ ಜಗತ್ತು ಎಂದು ಕ್ಯಾಪ್ಷ್ಯನ್‌ ಕೂಡಾ ಬರೆದುಕೊಂಡಿದ್ದರು. ವಿರಾಟ್ ಕೊಹ್ಲಿಯವರು ಹಂಚಿಕೊಂಡ ಪೋಸ್ಟ್‌ಗೆ ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್‌ ಕಾಮೆಂಟ್‌ ಮಾಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ರಿಪ್ಲೇ ನೀಡಿದ್ದು, ಮಾಜಿ ನಾಯಕ ರಿಪ್ಲೇ ಕಾಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ವಿರಾಟ್ ಕೊಹ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ನೀನೇ ಅದೃಷ್ಟವಂತ ವ್ಯಕ್ತಿಯೆಂದು ಡೇವಿಡ್ ವಾರ್ನರ್‌ ಕಾಮೆಂಟ್ ಮಾಡಿದ್ದರು. ಹಲವು ಅಭಿಮಾನಿಗಳು ಡೇವಿಡ್ ವಾರ್ನರ್ ಅವರ ಕಾಮೆಂಟ್‌ ಅನ್ನು ಇಷ್ಟಪಟ್ಟರೆ, ಮತ್ತೆ ಕೆಲವರು ವಾರ್ನರ್ ಕಾಮೆಂಟ್ ಟ್ರೋಲ್ ಮಾಡಿದ್ದಾರೆ. ಆದರೆ ಡೇವಿಡ್ ವಾರ್ನರ್‌ ಯಾವೊಂದು ಕಾಮೆಂಟ್‌ಗೂ ಪ್ರತಿಕ್ರಿಯೆ ನೀಡಿಲ್ಲ ಹಾಗೂ ತಾಳ್ಮೆಯನ್ನು ಕಳೆದುಕೊಂಡಿಲ್ಲ. ಕೆಲ ಸಮಯದ ಬಳಿಕ ಎಲ್ಲವನ್ನು ಗಮನಿಸಿದ ಡೇವಿಡ್ ವಾರ್ನರ್‌, ತಾವು ಮಾಡಿದ ಕಾಮೆಂಟ್ ಅರ್ಥವೇನು ಎನ್ನುವುದನ್ನು ಸರಳವಾಗಿ ವಿವರಿಸಿದ್ದಾರೆ. ಇದು ಅಭಿಮಾನಿಗಳಿಗೆ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)

ಓರ್ವ ನೆಟ್ಟಿಗ, ನಿಮ್ಮ ಪ್ರಕಾರ ಇಲ್ಲಿ ಲಕ್ಕಿ ಎಂದು ಹೇಳಿರುವುದರ ಅರ್ಥವೇನು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೇವಿಡ್ ವಾರ್ನರ್‌, ಆಸ್ಟ್ರೇಲಿಯಾದಲ್ಲಿ ನಾವು ಕ್ಯಾಂಡಿ ವಾರ್ನರ್‌(ಡೇವಿಡ್ ವಾರ್ನರ್ ಪತ್ನಿ) ಅವರನ್ನು ಪಡೆದ ನಾನೇ ಅದೃಷ್ಟವಂತ ಎಂದು ಹೇಳುತ್ತೇವೆ. ಅದೇ ರೀತಿ, ಬೇರೊಬ್ಬರನ್ನು ಉದ್ದೇಶಿಸಿ ಹೇಳಿದಾಗ ನೀನು ಅದೃಷ್ಟವಂತ ಬಿಡು ಎನ್ನುತ್ತೇವೆ. ಅರ್ಥೈಸುವಿಕೆ ಯಾವಾಗಲೂ ವಿಭಿನ್ನವಾಗಿರುತ್ತದೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

Asia Cup 2022: ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ವಿಶೇಷ ಮಾಸ್ಕ್ ಧರಿಸಿ ಪ್ರಾಕ್ಟೀಸ್ ಮಾಡಿದ ಕೊಹ್ಲಿ..!

ಇನ್ನು ಡೇವಿಡ್ ವಾರ್ನರ್ ಅವರ, "lucky man" ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ನನಗದು ಗೊತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಮೆಂಟ್ ಕೂಡಾ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಕಷ್ಟು ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್‌ ಮೈದಾನದಲ್ಲಿ ಮುಖಾಮುಖಿಯಾದಾಗ ಸಾಕಷ್ಟು ತುರುಸಿನ ಮಾತುಕತೆಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಅದೇ ರೀತಿ ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಮೈದಾನದಾಚೆಗೆ ಈ ಇಬ್ಬರು ಆಟಗಾರರ ನಡುವೆ ಉತ್ತಮ ಗೆಳೆತನ ಕೂಡಾ ಬೆಳೆದಿದೆ. ಆಗಾಗ ವಿರಾಟ್ ಕೊಹ್ಲಿ ಬೆಂಬಲಕ್ಕೆ ಡೇವಿಡ್‌ ವಾರ್ನರ್ ಹಾಗೂ ವಾರ್ನರ್ ಅವರ ಬೆಂಬಲಕ್ಕೆ ವಿರಾಟ್ ಕೊಹ್ಲಿ ಮುಂದಾಗಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗೆ ಡೇವಿಡ್‌ ವಾರ್ನರ್‌ಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ತಂಡವು ಭಾರತ ನೆಲದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.  ಹೀಗಾಗಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ಮುಖಾಮುಖಿಯಾಗುವುದು ಬಹುತೇಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾತ್ರ ಎನ್ನುವಂತಾಗಿದೆ. 

ಅಕ್ಟೋಬರ್ 16ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಟೂರ್ನಿಗೆ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾ ತಂಡವು ತಮ್ಮ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲು ರಣತಂತ್ರ ಹೆಣೆಯುತ್ತಿದ್ದರೆ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2007ರ ಬಳಿಕ ಮತ್ತೊಮ್ಮೆ ಚುಟುಕು ಕ್ರಿಕೆಟ್‌ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.

click me!