2022ರ ಭಾರತ ಪ್ರವಾಸಕ್ಕೆ ಆಸ್ಪ್ರೇ​ಲಿಯಾ ತಂಡ ಸಿದ್ಧ​ತೆ!

Published : Nov 16, 2019, 10:19 AM IST
2022ರ ಭಾರತ ಪ್ರವಾಸಕ್ಕೆ ಆಸ್ಪ್ರೇ​ಲಿಯಾ ತಂಡ ಸಿದ್ಧ​ತೆ!

ಸಾರಾಂಶ

ಪ್ರತಿ ತಂಡ 2020ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ನಡೆಸುತ್ತಿದೆ. ಆದರೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಸಿದ್ಧತೆ ಜೊತೆಗೆ 2022ರ ಭಾರತ ಪ್ರವಾಸಕ್ಕೆ ತಯಾರಿ ಆರಂಭಿಸಿದೆ.  

ಮೆಲ್ಬರ್ನ್‌(ನ.16) : ಭಾರತ ಪ್ರವಾಸಕ್ಕೆ ಇನ್ನು 2 ವರ್ಷಕ್ಕೂ ಹೆಚ್ಚಿಗೆ ಸಮ​ಯ ಬಾಕಿ ಇದ್ದರೂ, ತಂಡ ಈಗಾ​ಗಲೇ ಅಭ್ಯಾಸ ಆರಂಭಿ​ಸಿ​ರು​ವು​ದಾಗಿ ಆಸ್ಪ್ರೇ​ಲಿಯಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿ​ದ್ದಾರೆ. 2022ರಲ್ಲಿ ಆಸ್ಪ್ರೇ​ಲಿಯಾ ತಂಡ ಭಾರತಕ್ಕೆ ಆಗ​ಮಿ​ಸ​ಲಿದ್ದು 4 ಪಂದ್ಯ​ಗಳ ಟೆಸ್ಟ್‌ ಸರಣಿಯನ್ನು ಆಡ​ಲಿದೆ. ಇದಕ್ಕಾಗಿ ಈಗಿನಿಂದಲೇ ಅಭ್ಯಾಸ ನಡೆಸುವುದಾಗಿ  ಕೋಚ್ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟರ್ ಆಸೋಸಿಯೇಶನ್‌ಗೆ ವ್ಯಾಟ್ಸನ್ ಅಧ್ಯಕ್ಷ!

ತವ​ರಿ​ನಲ್ಲಿ ಭಾರತ ತಂಡ ಅತ್ಯಂತ ಬಲಿ​ಷ್ಠ​ವಾ​ಗಿದ್ದು, ಪ್ರತಿ ಎದು​ರಾ​ಳಿಯನ್ನು ಬಗ್ಗು​ಬ​ಡಿ​ಯು​ತ್ತಿದೆ. ಹಲವು ವರ್ಷಗಳಿಂದ ಭಾರ​ತ​ದಲ್ಲಿ ಟೆಸ್ಟ್‌ ಸರಣಿ ಗೆಲ್ಲದ ಆಸ್ಪ್ರೇ​ಲಿಯಾ, ಕಳೆದ ಬಾರಿ ಭಾರತ ತಂಡ ಪ್ರವಾಸ ಕೈಗೊಂಡಿದ್ದಾಗಲೂ ಸರಣಿ ಕೈಚೆ​ಲ್ಲಿತ್ತು. ‘ಭಾ​ರತದಲ್ಲಿ ಗೆಲ್ಲು​ವುದು ಯಾವಾ​ಗಲೂ ಕಷ್ಟ. ಆದರೆ ನಾವು ನಿರೀಕ್ಷೆಯೊಂದಿಗೆ ಸಿದ್ಧತೆ ಆರಂಭಿ​ಸಿ​ದ್ದೇವೆ. ಇನ್ನು 2 ವರ್ಷ ಸಮ​ಯ​ವಿದೆ. ಆ ವೇಳೆಗೆ ಯುದ್ಧಗೆ ಸಂಪೂರ್ಣ ಸಿದ್ಧ​ರಾ​ಗು​ವ ಭರ​ವಸೆ ಇದೆ’ ಎಂದು ಲ್ಯಾಂಗರ್‌ ಹೇಳಿ​ದ್ದಾರೆ.

ಇದನ್ನೂ ಓದಿ: ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!

2 ವರ್ಷಕ್ಕೂ ಮೊದಲು ದ್ವಿಪಕ್ಷೀಯ ಸರಣಿಗೆ ಸಿದ್ದತೆ ನಡೆಸುತ್ತಿರುವ ಮೊದಲ ತಂಡ ಆಸ್ಟ್ರೇಲಿಯಾ.  ವಿಶ್ವಕಪ್ ಸರಣಿ, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿ ಮಹತ್ವದ ಸರಣಿಗಳಿ ಪ್ರತಿ ತಂಡ ವರ್ಷಕ್ಕೂ ಮೊದಲೇ ಸಿದ್ಧತ ಆರಂಭಿಸುವುದು ವಾಡಿಕೆ. ಆದರೆ ದ್ವಿಪಕ್ಷೀಯ ಸರಣಿಗೆ ಇದೇ ಮೊದಲು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ