ಭಾರತ 493 ರನ್‌ಗೆ ಡಿಕ್ಲೇರ್; ಸಂಕಷ್ಟದಲ್ಲಿ ಬಾಂಗ್ಲಾದೇಶ!

By Web DeskFirst Published Nov 16, 2019, 9:54 AM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಸಂಪೂರ್ಣ 5 ದಿನ ನಡೆಯುವ ಯಾವುದೇ ಲಕ್ಷಣಗಳಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 343 ರನ್ ಹಿನ್ನಡೆಯಲಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಇಂದೋರ್(ನ.16): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಬಾಂಗ್ಲಾ ತಂಡಲವನ್ನು 150 ರನ್‌ಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್ ಆಡಿದ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಶತಕದಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ. 3ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ ಆರಂಭದಲ್ಲೇ ಇಮ್ರುಲ್ ಕೈಸ್ ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್

2ನೇ ದಿನದಾಟದಲ್ಲಿ ಭಾರತ 493 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 3ನೇ ದಿನದಾಟದಲ್ಲಿ ಬಾಂಗ್ಲಾದೇಶ 2ನೇ ಇನಿಂಗ್ಸ್ ಆರಂಭಿಸಿದೆ . ಇಮ್ರುಲ್ ಕೈಸ್ 6 ರನ್ ಸಿಡಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.  ಭಾರತ 3ನೇ  ದಿನಕ್ಕೆ ಪಂದ್ಯ ಮುಗಿಸುವು ಲೆಕ್ಕಾಚಾರದಲ್ಲಿದೆ.  

ಇದನ್ನೂ ಓದಿ: ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!

ಬಾಂಗ್ಲಾದೇಶ ಮೊದಲ ಇನಿಂಗ್ಸ್:
ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ ಮುಶ್ಫಿಕರ್ ರಹೀಮ್ 43, ಮೊಮಿನಲ್ ಹಕ್ 37 ಹಾಗೂ ಲಿಟ್ಟನ್ ದಾಸ್ 21 ರನ್ ಸಿಡಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾದರು. ಹೀಗಾಗಿ ಬಾಂಗ್ಲಾದೇಸ 150 ರನ್‌ಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ 3, ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರು.

ಭಾರತ ಮೊದಲ ಇನಿಂಗ್ಸ್:
ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 243, ಚೇತೇಶ್ವರ್ ಪೂಜಾರ 54, ಅಜಿಂಕ್ಯ ರಹಾನೆ 86 ಹಾಗೂ ರವೀಂದ್ರ ಜಡೇಜಾ ಅಜೇಯ 60 ರನ್ ಸಿಡಿಸೋ ಮೂಲಕ 6 ವಿಕೆಟ್ ನಷ್ಟಕ್ಕೆ 493 ರನ್ ಸಿಡಿಸಿತು. 

click me!