ವಿಶ್ವಕಪ್ ಟೂರ್ನಿ ಬಳಿಕ ಭಾರತೀಯ ಸೇನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಧೋನಿ ಮತ್ತೆ ಕ್ರಿಕೆಟ್ ಮೈದಾನದಕ್ಕೆ ಮರಳಿದ್ದಾರೆ. ಮೈದಾನದಲ್ಲಿ ಧೋನಿಯನ್ನು ನೋಡಿದ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ನವದೆಹಲಿ(ನ.16) : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ನಾಲ್ಕು ತಿಂಗಳ ಬಳಿಕ ನೆಟ್ಸ್‌ಗೆ ಮರಳಿದ್ದಾರೆ. ಆದರೂ ಅವರು ಡಿ.6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸಿದರು.
Dhoni back in nets after a long break 😍❤️ pic.twitter.com/wLjugLUTUv
— DHONIsm™ ❤️ (@DHONIism)ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಇಬ್ಬರು ವಿಕೆಟ್ ಕೀಪರ್ ಯಾರು..?.
2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವಕಪ್ ಸರಣಿ ಮುಗಿದ ಬೆನ್ನಲ್ಲೇ ದೇಶ ಸೇವೆಗಾಗಿ ಸೈನ್ಯಕ್ಕೇ ಸೇರಿದ್ದ ಧೋನಿ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದ ಧೋನಿ, ಬಾಂಗ್ಲಾದೇಶ ಸರಣಿಗ ಲಭ್ಯವಿದ್ದರೂ ಆಯ್ಕೆಯಾಗಿಲ್ಲ.
ಇದನ್ನೂ ಓದಿ: ಧೋನಿ ಮಾಡಿದ 5 ಅದ್ಭುತ ಟ್ವೀಟ್: ಮಿಸ್ ಮಾಡದೇ ನೋಡಿ
ಸದ್ಯ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಸರಣಿ ಬಳಿಕ ಭಾರತ ಹಾಗೂ ವಿಂಡೀಸ್ ನಡುವೆ 3 ಟಿ20, 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗೂ ಧೋನಿ ಅಲಭ್ಯ ಎನ್ನಲಾಗುತ್ತಿದೆ. ಆದರೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಧೋನಿಯನ್ನು ಕಡೆಗಣಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.