
ಮುಂಬೈ(ಅ.27): ನಿಜ ಜೀವನದಲ್ಲಿ ‘ನನ್ನ ತಂದೆಯೇ ನನ್ನ ‘ಸೂಪರ್ ಹೀರೋ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮಾಧ್ಯಮಗಳು ಕೊಹ್ಲಿ ಅವರನ್ನು ನಿಮ್ಮ ‘ಸೂಪರ್ ಹೀರೋ’ ಯಾರೆಂಬ ಕೇಳಿದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದರು. ‘ಹಲವು ವ್ಯಕ್ತಿಗಳು ಪ್ರೇರಣೆ ತುಂಬುತ್ತಾರೆ. ಆದರೆ ತಂದೆ ತೆಗೆದುಕೊಂಡ ನಿರ್ಧಾರಗಳಿಂದ ನನ್ನ ಕ್ರಿಕೆಟ್ ಯಶಸ್ಸಿನ ಹಾದಿ ಸರಳವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ಕಾರು ಡ್ರೈವ್ ಅಂದ್ರೆ ವಿರಾಟ್ ಕೊಹ್ಲಿಗೆ ಇಷ್ಟ!
ತಂದೆಯ ವ್ಯಕ್ತಿತ್ವ ಹಾಗೂ ನನ್ನ ಪರಿಶ್ರಮದಿಂದಲೇ ವೃತ್ತಿಜೀವನ ಕಟ್ಟಲು ಸಾಧ್ಯವಾಯಿತು’ ಎಂದು ಕೊಹ್ಲಿ ತಿಳಿಸಿದರು. ವಿರಾಟ್ ಜೀವನಾಧಾರಿತ ‘ಸೂಪರ್ ವಿ’ ಸೂಪರ್ ಹೀರೋ ಅನಿಮೇಷನ್ ಕತೆಯನ್ನು ಸ್ಟಾರ್ ಸ್ಪೋರ್ಟ್ಸ್ ಹಾಗೂ ಡಿಸ್ನಿ ಜಂಟಿಯಾಗಿ ಪರಿಚಯಿಸುತ್ತಿವೆ. ನ.5ರಂದು ಕೊಹ್ಲಿ ಜನ್ಮದಿನಕ್ಕೆ ‘ಸೂಪರ್ ವಿ’ ತೆರೆ ಮೇಲೆ ಬರಲಿದೆ.
ಇದನ್ನೂ ಓದಿ: ಹಗಲು-ರಾತ್ರಿ ಟೆಸ್ಟ್‌ಗೆ ಕೊಹ್ಲಿಗೂ ಸಹಮತವಿದೆ ಎಂದ ದಾದಾ
ವಿರಾಟ್ ಕೊಹ್ಲಿ 18 ವರ್ಷವಿದ್ದಾಗ ತಂದೆಯನ್ನು ಕಳೆದುಕೊಂಡರು. ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಕರ್ನಾಟಕ ವಿರುದ್ಧ ರಣಜಿ ಪಂದ್ಯ ಆಡುತ್ತಿದ್ದ ಕೊಹ್ಲಿಗೆ ಆಘಾತಕಾರಿ ಸುದ್ದಿ ತಲುಪಿತ್ತು. ದಿನದಾಟದ ಅಂತ್ಯಕ್ಕೆ ಕೊಹ್ಲಿ 40 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಬಳಿಕ ಮನೆಗೆ ತೆರಳಿ ಅಪ್ಪನ ಶವವನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ರಾತ್ರಿಯಿಡಿ ನಿದ್ದೆಗೆಟ್ಟು ಕೂತಿದ್ದರು.
ಮರುದಿನ ಬೆಳೆಗಿನ ಕ್ರಿಯಾವಿಧಾನಗಳನ್ನು ಪೂರೈಸಿದ ಕೊಹ್ಲಿ ಪಂದ್ಯ ಆರಂಭದ ವೇಳೆ ಮೈದಾನದಲ್ಲಿ ಹಾಜರಿದ್ದರು. ಬಳಿಕ 90 ರನ್ ದೆಹಲಿ ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದ್ದರು. ಬಳಿಕ ಕೊಹ್ಲಿ ಮನೆಗೆ ತೆರಳಿ ತಂದೆಯ ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡರು. ಚಿಕ್ಕ ವಯಸ್ಸಿನಲ್ಲೇ ಕೊಹ್ಲಿ ಅತೀ ದೊಡ್ಡ ಜವಾಬ್ದಾರಿಗಳನ್ನು ಪೂರೈಸಿದ್ದಾರೆ. ಕೊಹ್ಲಿಗೆ ಜೀವನದ ಪಾಠಗಳನ್ನು ಕಲಿಸಿದ ತಂದೆಯೇ ಸೂಪರ್ ಹೀರೋ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.