Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್ ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ ಪ್ಯಾಟ್ ಕಮ್ಮಿನ್ಸ್

Suvarna News   | Asianet News
Published : Dec 08, 2021, 04:42 PM ISTUpdated : Dec 09, 2021, 11:42 AM IST
Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್  ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ  ಪ್ಯಾಟ್ ಕಮ್ಮಿನ್ಸ್

ಸಾರಾಂಶ

ಆಸೀಸ್ ಟೆಸ್ಟ್ ತಂಡದ ನಾಯಕನಾಗಿ ಕಮ್ಮಿನ್ಸ್ ಭರ್ಜರಿ ಪಾದಾರ್ಪಣೆ ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ಮೊದಲ ಟೆಸ್ಟ್ ಬಾಬ್ ವಿಲ್ಲೀಸ್ ಬಳಿಕ ಆಶಸ್ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ ಮೊದಲ ನಾಯಕ

ಬ್ರಿಸ್ಬೇನ್ (ಡಿ.08): ಆಸ್ಟ್ರೇಲಿಯಾ (Australia) ಟೆಸ್ಟ್ ತಂಡದ ನೂತನ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ತಮ್ಮ ನಾಯಕತ್ವದ ದಿನಗಳನ್ನು ಭರ್ಜರಿ ನಿರ್ವಹಣೆಯ ಮೂಲಕ ಆರಂಭಿಸಿದ್ದಾರೆ. ಬ್ರಿಸ್ಬೇನ್ ನಲ್ಲಿ (Brisbane) ಬುಧವಾರ ಆರಂಭಗೊಂಡ ಪ್ರತಿಷ್ಠಿತ ಅಶಸ್ ಟೆಸ್ಟ್ ಸರಣಿಯ (Ashes Test Series) ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ (England) ತಂಡದ ಐದು ಪ್ರಮುಖ ವಿಕೆಟ್ ಗಳನ್ನು ಉರುಳಿಸಿದ ಪ್ಯಾಟ್ ಕಮ್ಮಿನ್ಸ್, ಪ್ರವಾಸಿ ತಂಡವನ್ನು ಕೇವಲ 147 ರನ್ ಗೆ ಆಲೌಟ್‌ ಮಾಡುವಲ್ಲಿ ಯಶ ಕಂಡಿದ್ದಾರೆ. ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಪ್ಯಾಟ್ ಕಮ್ಮಿನ್ಸ್ ಹಲವು ಅಪರೂಪದ ದಾಖಲೆಗಳನ್ನು ಈ ಹಾದಿಯಲ್ಲಿ ಮಾಡಿದ್ದಾರೆ. ಕಳೆದ ನವೆಂಬರ್ ನಲ್ಲಿ ಟಿಮ್ ಪೈನ್ (Tim Paine) ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ಆಸೀಸ್ ತಂಡದ ನೂತನ ಟೆಸ್ಟ್ ನಾಯಕನಾಗಿ ಪ್ಯಾಟ್ ಕಮ್ಮಿನ್ಸ್ ನೇಮಕವಾಗಿದ್ದರು.

ಬೌಲರ್-ಕ್ಯಾಪ್ಟನ್ (Bowler-Captains) ಆಗಿ 5 ವಿಕೆಟ್ ಉರುಳಿಸಿದ ಎಲೈಟ್ ಲಿಸ್ಟ್ ನಲ್ಲಿ ಭಾರತದ ಅನಿಲ್ ಕುಂಬ್ಳೆ (Anil Kumble), ವೆಸ್ಟ್ ಇಂಡೀಸ್ ನ ಕರ್ಟ್ನಿ ವಾಲ್ಶ್ (Courtney Walsh) ಹಾಗೂ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ (Daniel Vettori ) ಇರುವ ಪಟ್ಟಿಗೆ ಸೇರ್ಪಡೆಗೊಂಡರು. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (Joe Root)ಕೂಡ ಭಾರತ ವಿರುದ್ಧ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಈ ಪಟ್ಟಿಗೆ ಸೇರಿದ್ದರು.

Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ನೇಮಕ
ಅದಲ್ಲದೇ, ಅನಿಲ್ ಕುಂಬ್ಳೆ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ನಾಯಕನಾಗಿ ಆಡಿದ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಮೊದಲ ಪ್ಲೇಯರ್ ಆಗಿ ಪ್ಯಾಟ್ ಕಮ್ಮಿನ್ಸ್ ಗುರುತಿಸಿಕೊಂಡಿದ್ದಾರೆ. 2007ರ ಮೆಲ್ಬೋರ್ನ್  ಟೆಸ್ಟ್ (Melbourne Test) ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಅದರೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಪಾದಾರ್ಪಣಾ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ 2ನೇ ಬೌಲರ್ ಪ್ಯಾಟ್ ಕಮ್ಮಿನ್ಸ್,. 127 ವರ್ಷಗಳ ಹಿಂದೆ, ಅಂದರೆ 1894ರಲ್ಲಿ ಜಾರ್ಜ್ ಗಿಫಿನ್ (George Giffen ) ಇಂಗ್ಲೆಂಡ್ ವಿರುದ್ಧ ಮೆಲ್ಬೋರ್ನ್ ನಲ್ಲಿ ತಮ್ಮ ನಾಯಕತ್ವದ ಮೊಟ್ಟಮೊದಲ ಪಂದ್ಯದಲ್ಲಿಯೇ 155 ರನ್ ಗೆ 6 ವಿಕೆಟ್ ಉರುಳಿಸಿ ಗಮನಸೆಳೆದಿದ್ದರು. 1982ರಲ್ಲಿ ಬಾಬ್ ವಿಲ್ಲೀಸ್ (Bob Willis ) ಬಳಿಕ ಪುರುಷರ ಆಶಸ್ ಟೆಸ್ಟ್ ನಲ್ಲಿ5 ವಿಕೆಟ್ ಸಾಧನೆ ಮಾಡಿದ ಮೊದಲ ನಾಯಕ ಎನಿಸಿದ್ದಾರೆ. ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕತ್ವದ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಐದು ವಿಕೆಟ್ ಸಾಧನೆ ಮಾಡಿದ 14ನೇ ಪ್ಲೇಯರ್ ಎನಿಸಿಕೊಂಡಿದ್ದಾರೆ ಪ್ಯಾಟ್ ಕಮ್ಮಿನ್ಸ್. ಇದಕ್ಕೂ ಮುನ್ನ 2019ರಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ (Rashid Khan), ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲಿಯೇ ಐದು ವಿಕೆಟ್ ಸಾಧನೆ ಮಾಡಿದ್ದರು.

ಮನೆ ಸೇರಿದ ಆಸೀಸ್‌ ಕ್ರಿಕೆಟಿಗರು; ಆತ್ಮೀಯವಾಗಿ ಕಮಿನ್ಸ್‌ ಬರಮಾಡಿಕೊಂಡ ಪತ್ನಿ
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ, ಆಸೀಸ್ ಭರ್ಜರಿ ಬೌಲಿಂಗ್ ದಾಳಿಯ ಮೂಲಕ ಇಂಗ್ಲೆಂಡ್ ತಂಡದ ಬೆವರಿಳಿಸಿತು. ಮಿಚೆಲ್ ಸ್ಟಾರ್ಕ್ (Mitchell Starc) ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿಯೇ ರೋರಿ ಬರ್ನ್ಸ್ ( Rory Burns) ಅವರ ವಿಕೆಟ್ ಉರುಳಿಸುವ ಮೂಲಕ ಘಾತಕ ಪೆಟ್ಟು ನೀಡಿದ್ದರು. ಆರಂಭದಲ್ಲಿಯೇ ಆಘಾತ ಎದುರಿಸಿದ ಇಂಗ್ಲೆಂಡ್ 2ನೇ ಅವಧಿಯ ಆಟದಲ್ಲಿ ಆಲೌಟ್ ಆಯಿತು. ಪ್ಯಾಟ್ ಕಮ್ಮಿನ್ಸ್ 38 ರನ್ 5 ವಿಕೆಟ್ ಸಾಧನೆ ಮಾಡಿದರೆ, ಮಿಚೆಲ್ ಸ್ಟಾರ್ಕ್ (35ಕ್ಕೆ 2) ಹಾಗೂ ಜೋಶ್ ಹ್ಯಾಸಲ್ ವುಡ್ (42ಕ್ಕೆ 2) ಕೂಡ ಮಿಂಚಿನ ದಾಳಿ ನಡೆಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌