ICC player of the month: ಡೇವಿಡ್ ವಾರ್ನರ್‌, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!

Suvarna News   | Asianet News
Published : Dec 08, 2021, 02:41 PM ISTUpdated : Dec 08, 2021, 02:43 PM IST
ICC player of the month: ಡೇವಿಡ್ ವಾರ್ನರ್‌, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!

ಸಾರಾಂಶ

* ನವೆಂಬರ್‌ ತಿಂಗಳ ಐಸಿಸಿ ಕ್ರಿಕೆಟಿಗ ಪ್ರಶಸ್ತಿಗೆ ಮೂವರ ಹೆಸರು ನಾಮನಿರ್ದೇಶನ * ನವೆಂಬರ್‌ ತಿಂಗಳ ಐಸಿಸಿ ಪ್ರಶಸ್ತಿ ಪಡೆಯಲು ವಾರ್ನರ್‌, ಸೌಥಿ ಪೈಪೋಟಿ * ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್‌ ವಾರ್ನರ್

ದುಬೈ(ಡಿ.08): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australia Cricket Team) ಸ್ಪೋಟಕ ಬ್ಯಾಟರ್‌ ಡೇವಿಡ್ ವಾರ್ನರ್‌ (David Warner), ಪಾಕಿಸ್ತಾನದ ಕ್ರಿಕೆಟಿಗ ಆಬಿದ್ ಅಲಿ (Abid Ali) ಹಾಗೂ ನ್ಯೂಜಿಲೆಂಡ್‌ ವೇಗದ ಬೌಲರ್ ಟಿಮ್ ಸೌಥಿ (Tim Southee) ಅವರನ್ನು ನವೆಂಬರ್ ತಿಂಗಳ ಐಸಿಸಿ ಪುರಷರ ಕ್ರಿಕೆಟಿಗ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇನ್ನು ಮಹಿಳಾ ವಿಭಾಗದಿಂದ ಪಾಕಿಸ್ತಾನದ ಎಡಗೈ ಸ್ಪಿನ್ನರ್‌ ಅನಾಮ್ ಅಮಿನ್, ಬಾಂಗ್ಲಾದೇಶದ ನಾಹಿದಾ ಅಖ್ತರ್ ಹಾಗೂ ವೆಸ್ಟ್ ಇಂಡೀಸ್‌ನ ಹ್ಯಾಲೆ ಮ್ಯಾಥ್ಯೂಸ್‌ ಅವರ ಹೆಸರು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ.

ಇತ್ತೀಚೆಗಷ್ಟೇ ಯುಎಇ ಹಾಗೂ ಒಮಾನ್‌ನಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಹಾಗೂ ಇದಾದ ಬಳಿಕ ವಿವಿದ ಮಾದರಿಯ ಕ್ರಿಕೆಟ್‌ ಸರಣಿಯಲ್ಲಿ ಆಟಗಾರರು ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಟಗಾರರ ಹೆಸರನ್ನು ನವೆಂಬರ್ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಈ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ಸ್ವತಂತ್ರ ಐಸಿಸಿ ವೋಟಿಂಗ್ ಅಕಾಡಮಿ ಹಾಗೂ ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ತಮ್ಮ ಮತ ಚಲಾಯಿಸುವ ಮೂಲಕ ನವೆಂಬರ್ ತಿಂಗಳ ಶ್ರೇಷ್ಠ ಕ್ರಿಕೆಟಿಗರನ್ನು ಆಯ್ಕೆ ಮಾಡಲಿದ್ದಾರೆ. ಬರುವ ಭಾನುವಾರ(ಡಿ.12)ದ ವರೆಗೆ ಅಭಿಮಾನಿಗಳಿಗೆ ಮತ ಚಲಾಯಿಸಲು ಅವಕಾಶ ಇರಲಿದೆ. ಮುಂದಿನ ವಾರ ನವೆಂಬರ್ ತಿಂಗಳ ಆಟಗಾರನ ಹೆಸರು ಘೋಷಣೆಯಾಗಲಿದೆ. 

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಡೇವಿಡ್‌ ವಾರ್ನರ್‌ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರಲ್ಲೂ ಎಡಗೈ ಬ್ಯಾಟರ್‌ ವಾರ್ನರ್‌, ಪಾಕಿಸ್ತಾನ ವಿರುದ್ದ ಸೆಮಿಫೈನಲ್‌ನಲ್ಲಿ 49 ರನ್ ಹಾಗೂ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ 53 ರನ್ ಚಚ್ಚಿದ್ದರು. ಇದರೊಂದಿಗೆ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವು ಐಸಿಸಿ ಟಿ20 ಟ್ರೋಫಿ ಜಯಿಸಿತ್ತು. ನವೆಂಬರ್ ತಿಂಗಳಿನಲ್ಲಿ 4 ಟಿ20 ಪಂದ್ಯಗಳನ್ನಾಡಿದ್ದ ವಾರ್ನರ್‌ 69.66ರ ಬ್ಯಾಟಿಂಗ್ ಸರಾಸರಿಯಲ್ಲಿ 209 ರನ್‌ ಸಿಡಿಸಿದ್ದರು. 
 
ಇನ್ನು ಪಾಕಿಸ್ತಾನದ ಆರಂಭಿಕ ಬ್ಯಾಟರ್‌ ಆಬಿದ್ ಅಲಿ, ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ 133 ಹಾಗೂ 91 ರನ್‌ ಸಿಡಿಸಿದ್ದರು. ಈ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಪಾಕ್‌ ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. 

India Tour of South Africa: ಭಾರತ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ..!

ಇನ್ನು ನ್ಯೂಜಿಲೆಂಡ್ ತಂಡದ ಅನುಭವಿ ವೇಗಿ ಟಿಮ್ ಸೌಥಿ, ಭಾರತ ವಿರುದ್ದ ಕಾನ್ಪುರದಲ್ಲಿ (Kanpur Test) ನಡೆದ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಸೌಥಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದಷ್ಟೇ ಅಲ್ಲದೇ ನವೆಂಬರ್ ತಿಂಗಳಿನಲ್ಲೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೌಥಿ 7 ವಿಕೆಟ್ ಕಬಳಿಸಿದ್ದರು. ಈ ಮೂಲಕ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಜತೆಗೆ ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಸೌಥಿ 3 ವಿಕೆಟ್ ಪಡೆದಿದ್ದರು.

ಇನ್ನು ಮಹಿಳಾ ಕ್ರಿಕೆಟ್‌ ವಿಭಾಗದಲ್ಲಿ ಬಾಂಗ್ಲಾದೇಶದ ನಾಹಿದಾ ಅಖ್ತರ್ ನಾಲ್ಕು ಏಕದಿನ ಪಂದ್ಯಗಳಿಂದ 13 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಪಾಕಿಸ್ತಾನದ ಅನಾಮ್ ಅಮಿನ್ 13 ವಿಕೆಟ್ ಪಡೆದಿದ್ದರೇ, ವೆಸ್ಟ್ ಇಂಡೀಸ್‌ ಆಲ್ರೌಂಡರ್ ಹ್ಯಾಲೆ ಮ್ಯಾಥ್ಯೂಸ್‌ ಬ್ಯಾಟಿಂಗ್‌ನಲ್ಲಿ 141 ರನ್ ಹಾಗೂ ಬೌಲಿಂಗ್‌ನಲ್ಲಿ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?