ODI Captaincy: ಕೊಹ್ಲಿ, ರೋಹಿತ್ ಜೊತೆ ಚರ್ಚಿಸಿ ಏಕದಿನ ತಂಡದ ನಾಯಕತ್ವ ನಿರ್ಧಾರ

By Suvarna NewsFirst Published Dec 8, 2021, 2:11 PM IST
Highlights

ಏಕದಿನ ತಂಡದ ನಾಯಕ ಸ್ಥಾನದಿಂದಲೂ ಕೊಹ್ಲಿ ಔಟ್?
ವಿಚಾರ ಬಹಳ "ಸೂಕ್ಷ್ಮ" ಎಂದ ಬಿಸಿಸಿಐ ಮೂಲಗಳು
ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಜೊತೆ ಚರ್ಚೆ

ಬೆಂಗಳೂರು (ಡಿ.08): ಕ್ರಿಕೆಟ್ ನ ಭಿನ್ನ ಮಾದರಿಗಳಿಗೆ ಭಿನ್ನ ನಾಯಕರನ್ನು ಆರಿಸುವುದು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಲ್ಲಿ (Indian cricket) ಸಾಮಾನ್ಯವಾಗಿದೆ. ಇತ್ತೀಚೆಗೆ ವಿರಾಟ್ ಕೊಹ್ಲಿ (Virat Kohli ) ಭಾರತ ಟಿ20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮ (Rohit Sharma ) ತಂಡದ ನಾಯಕರಾಗಿ ನೇಮಕವಾಗಿದ್ದರು. ನ್ಯೂಜಿಲೆಂಡ್ (New Zealand
) ವಿರುದ್ಧದ ಟಿ20 (T20) ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರೋಹಿತ್ ಶರ್ಮ ಅವರನ್ನೇ ಏಕದಿನ ತಂಡಕ್ಕೂ ನಾಯಕರನ್ನಾಗಿ ಘೋಷಣೆ ಮಾಡಬೇಕು ಎನ್ನುವ ಒಲವು ವ್ಯಕ್ತವಾಗಿದೆ.

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ನ ಎರಡು ಭಿನ್ನ ಮಾದರಿಗೆ ಎರಡು ನಾಯಕರು ಇರುವುದು ತೀರಾ ಅಪರೂಪ. 2021ರ ಟಿ20 ವಿಶ್ವಕಪ್ ಟೂರ್ನಿಯ (T20 World Cup 2021) ಬಳಿಕ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರೆ, ರೋಹಿತ್ ಶರ್ಮ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (South Africa) ಟೀಮ್ ಇಂಡಿಯಾಗೆ ಟೆಸ್ಟ್, ಏಕದಿನ ಮಾದರಿಯಲ್ಲಿ ಸರಣಿಗಳಿವೆ. ಏಕದಿನ ಹಾಗೂ ಟಿ20 ಮಾದರಿಗೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಬೇಕು ಎನ್ನುವ ಗುರಿಯಲ್ಲಿರುವ ಆಯ್ಕೆ ಸಮಿತಿ, ಏಕದಿನ ತಂಡದ ನಾಯಕತ್ವ ವಿಚಾರವನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಜೊತೆ ಚರ್ಚೆ ಮಾಡಲು ಮುಂದಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ತಂಡದ ನಾಯಕತ್ವ ವಿಚಾರ ಸಾಕಷ್ಟು ಚರ್ಚೆಯಲ್ಲಿರುವ ಕಾರಣ, ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ತಮ್ಮದೇ ಆದ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. 

ಮೂಲಗಳ ಪ್ರಕಾರ, ಆಯ್ಕೆ ಸಮಿತಿ (Selection Committee) ಅಧ್ಯಕ್ಷ ಚೇತನ್ ಶರ್ಮ (Chetan Sharma) ಇದನ್ನು ಬಹಳ ಸೂಕ್ಷ್ಮ ವಿಚಾರ ಎಂದು ಹೇಳಿದ್ದು, ನಿರ್ಧಾರ ತೆಗೆದುಕೊಳ್ಳಲು ಸಮಿತಿ ಆತುರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಟಿ20 ತಂಡದದ ನಾಯಕ ರೋಹಿತ್ ಶರ್ಮ ಜೊತೆ ಸೂಕ್ತ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ತಂಡದ ಆಯ್ಕೆ ವಿಳಂಬವಾಗಬಹುದು ಎಂದು ಅಂದಾಜು ಮಾಡಲಾಗಿದೆ.

 ಆರ್‌ಸಿಬಿ ಮುಂದಿನ ನಾಯಕ ಯಾರು? ಮ್ಯಾಕ್ಸ್‌ವೆಲ್‌ಗೆ ಮಣೆಹಾಕಿದ ಡೆನಿಯಲ್ ವೆಟ್ಟೋರಿ!
"ಏಕದಿನ ತಂಡದ ನಾಯಕತ್ವ ವಿಚಾರ ಬಹಳ ಸೂಕ್ಷ್ಮ. ಟಿ20 ತಂಡದ ನಾಯಕನಾಗಿರುವ ಕಾರಣ, ಸೀಮಿತ ಓವರ್ ಗಳ ಕ್ರಿಕೆಟ್ ನ ನಾಯಕತ್ವ ಜವಾಬ್ದಾರಿಯನ್ನು ಸಂಪೂರ್ಣವಾಗಿ ರೋಹಿತ್ ಶರ್ಮಗೆ ನೀಡಬೇಕು ಎನ್ನುವ ಅಭಿಪ್ರಾಯವೂ ಒಂದೆಡೆಯಿಂದ ವ್ಯಕ್ತವಾಗಿದೆ. ಆದರೆ, ಆಯ್ಕೆ ಸಮಿತಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿರಾಟ್ ಕೊಹ್ಲಿ ಜೊತೆ ಗಹನವಾದ ಚರ್ಚೆ ನಡೆಸಲಿದೆ. ಏಕದಿನ ತಂಡದಲ್ಲಿ ಅವರ ಎಲ್ಲಾ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ. ಬಳಿಕ ರೋಹಿತ್ ಶರ್ಮ ಜೊತೆಗೂ ಚರ್ಚೆ ನಡೆಸಿ ತಂಡದಲ್ಲಿ ಅವರ ಜವಾಬ್ದಾರಿ ಏನಿರಲಿದೆ ಎನ್ನುವುದನ್ನು ತಿಳಿಸಲಿದ್ದಾರೆ" ಎಂದು ಆಯ್ಕೆ ಸಮಿತಿಯ ಆಪ್ತ ಮೂಲಗಳು ತಿಳಿಸಿವೆ.

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!
ಇನ್ನು ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡುವುದು ಜನವರಿ 19 ರಿಂದ. 1 ತಿಂಗಳಿಗಿಂತ ಹೆಚ್ಚಿನ ಸಮಯವಿದೆ. ಇದರ ನಡುವೆ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ನಡೆಯುತ್ತಿದ್ದು, ಕೆಲ ಪ್ರತಿಭೆಗಳ ಪ್ರದರ್ಶನವನ್ನು ಆಯ್ಕೆ ಸಮಿತಿ ಗಮನಿಸಲಿದೆ ಎಂದು ಹೇಳಿದ್ದಾರೆ. ಟಿ20 ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ವೇಳೆ ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. 2023ರ ಏಕದಿನ ವಿಶ್ವಕಪ್ ಟೂರ್ನಿ (2023 ODI World Cup) ಭಾರತದಲ್ಲಿಯೇ ನಡೆಯಲಿರುವ ಕಾರಣ ಅಲ್ಲಿಯವರೆಗೂ ಕೊಹ್ಲಿ ನಾಯಕತ್ವದಲ್ಲಿ ಉಳಿಯಬೇಕು ಎನ್ನುವ ಆಸೆ ವ್ಯಕ್ತಪಡಿಸುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್ ಬಳಿಕ ನಾಯಕ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಕೊಹ್ಲಿ ಯೋಚನೆ ಮಾಡಬಹುದು. 

click me!