ವಿಶ್ವಕಪ್ ಫೈನಲ್‌ನಲ್ಲಿ 1.3 ಲಕ್ಷ ಜನರ ಮುಂದೆ ಭಾರತವನ್ನು ಎದುರಿಸುವ ಸವಾಲನ್ನು ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಅಹಮದಾಬಾದ್ (ನ.18): ಟೂರ್ನಿಯ ಅತ್ಯಂತ ಬೆಸ್ಟ್ ಟೀಮ್ ಆಗಿರುವ ಭಾರತವನ್ನು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎದುರಿಸುವ ಸವಾಲಿನೊಂದಿಗೆ ಆಸೀಸ್ ತಂಡಕ್ಕೆ ಮತ್ತೊಂದು ಬೃಹತ್ ಚಾಲೆಂಜ್ ಇದೆ. ಅದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇರುವ 1.3 ಲಕ್ಷ ಕ್ರಿಕೆಟ್ ಅಭಿಮಾನಿಗಳನ್ನು ಎದುರಿಸುವುದು. ವಿಶ್ವದ ಅತಿದೊದ್ದ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಸ್ಟೇಡಿಯಂ ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಮುಖಾಮುಖಿ ವೇಳೆಯಲ್ಲಿಯೇ ಸಂಪೂರ್ಣವಾಗಿ ಫುಲ್‌ಹೌಸ್ ಆಗಿತ್ತು. ಆದರೆ, ಭಾನುವಾರದ ಫೈನಲ್ ವೇಳೆ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಸ್ಟೇಡಿಯಂ ಭರ್ತಿಯಾಗುವ ನಿರೀಕ್ಷೆ ಇದೆ. ಭಾರತದಲ್ಲಿ ಭಾರತ ತಂಡವನ್ನು ಎದುರಿಸಲು ಬಹಳ ಕಷ್ಟಸಾಧ್ಯವಾದ ಸದ್ಯದ ಕ್ರಿಕೆಟ್ ಸ್ಟೇಡಿಯಂ ಇದ್ದರೆ ಅದು ಅಹಮದಾಬಾದ್ ಸ್ಟೇಡಿಯಂ ಮಾತ್ರ. 1.3 ಲಕ್ಷ ಕ್ರಿಕೆಟ್ ಅಭಿಮಾನಿಗಳು ಹೆಚ್ಚೂಕಡಿಮೆ ಸಂಪೂರ್ಣವಾಗಿ ನೀಲಿ ಬಣ್ಣದ ಜೆರ್ಸಿ ಧರಿಸಿ ಸ್ಡೇಡಿಯಂಗೆ ಆಗಮಿಸಿರುತ್ತಾರೆ. ವಿರಾಟ್ ಕೊಹ್ಲಿಯ ಪ್ರತಿ ಶಾಟ್ ಹಾಗೂ ಬುಮ್ರಾ ಅವರ ಪ್ರತಿ ಬೌನ್ಸರ್‌ಗೆ ಇವರು ಮೆಚ್ಚುಗೆ ಸೂಚಿಸುವಾಗ ಎದುರಾಳಿ ಪಾಳಯಕ್ಕೆ ಇದನ್ನು ಎದುರಿಸುವುದೇ ಕಷ್ಟವಾಗಲಿದೆ.
ಆದರೆ, ಆಸ್ಟ್ರೇಲಿಯಾ ಪಾಲಿಗೆ ಇಂಥ ವಾತಾವರಣ ಹೊಸದೇನಲ್ಲ. ತನ್ನದೇ ತವರಿನಲ್ಲಿ ಆಡುವಾಗಲು ಸಾಕಷ್ಟು ಬಾರಿ ಯೆಲ್ಲೋ ಜರ್ಸಿಗಿಂತ ಬ್ಲ್ಯೂ ಜೆರ್ಸಿ ಧರಿಸಿದ್ದ ಫ್ಯಾನ್ಸ್‌ಗಳೇ ಹೆಚ್ಚಾಗಿದ್ದಂತ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಆದರೆ, ಭಾನುವಾರ ಪಣಕ್ಕಿರುವುದು ಕೇವಲ ಯಾವುದೋ ದ್ವಪಕ್ಷೀಯ ಸರಣಿಯಲ್ಲಿ ಕ್ರಿಕೆಟ್‌ನ ಅತ್ಯುನ್ನತ ಟ್ರೋಫಿ. ಆದರೆ, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಈ ಎಲ್ಲಾ ಸವಾಲುಗಳನ್ನು ಎದುರಿಸಲು ತಂಡ ಸಿದ್ಧ ಎಂದಿದ್ದಾರೆ.
undefined
ನನ್ನ ಪ್ರಕಾರ ನಾವು ಇಂಥ ಪರಿಸ್ಥಿತಿಯನ್ನು ಸ್ವೀಕರಿಸಬೇಕು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯ ವೇಳೆ ಹೇಳಿದ್ದಾರೆ. ಆಸೀಸ್ ಮಾಜಿ ನಾಯಕರಾದ ಸ್ಟೀವ್ ವಾ ಹಾಗೂ ರಿಕಿ ಪಾಂಟಿಂಗ್ ಅವರ ಧಾಟಿಯಲ್ಲಿಯೇ ಮಾತನಾಡಿದ ಪ್ಯಾಟ್ ಕಮಿನ್ಸ್, ಅಹಮದಾಬಾದ್‌ನ ಫುಲ್ ಜಾಮ್ ಪ್ಯಾಕ್ ಆಗಿರುವ ಪ್ರೇಕ್ಷಕರನ್ನು ಸೈಲೆಂಟ್ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ. 'ಪ್ರೇಕ್ಷಕರು ಖಂಡಿತವಾಗಿ ಭಾನುವಾರ ಒಂದೇ ತಂಡಕ್ಕೆ ಬೆಂಬಲ ನೀಡಲಿದ್ದಾರೆ. ಆದರೆ, ಕ್ರೀಡೆಯಲ್ಲಿ ಇಂಥ ಜಾಮ್ ಪ್ಯಾಕ್ ಆಗಿರುವ ಕ್ರಿಕೆಟ್ ಅಭಿಮಾನಿಗಳು ಸೈಲೆಂಟ್ ಮಾಡುವುದು ಕೂಡ ಖುಷಿ ನೀಡುತ್ತದೆ. ನಾಳೆ ನಮ್ಮ ಗುರಿ ಕೂಡ ಇದೇ ಆಗಿರುತ್ತದೆ. ಫೈನಲ್ ಪಂದ್ಯದ ಪ್ರತಿ ಕ್ಷಣ ಪ್ರತಿ ಹಂತ ಕೂಡ ಕರತಾಡನದಿಂದ ಕೂಡಿರುತ್ತದೆ. ಇದೆಲ್ಲವನ್ನೂ ಸ್ವೀಕರಿಸಲು ನಾವು ಸಿದ್ಧವಾಗಿರಬೇಕು. ಆದರೆ, ಯಾವುದೇ ವಿಷಾದವಿಲ್ಲದೆ ಆ ದಿನವನ್ನು ಮುಗಿಸುವ ಇರಾದೆ ಇರಬೇಕು' ಎಂದು ಹೇಳಿದ್ದಾರೆ.
ವಿಶ್ವಕಪ್ ಫೈನಲ್ ಕ್ರೀಡೆ, ಸಂಸ್ಕೃತಿ ಮನರಂಜನೆಯ ಭವ್ಯ ಸಮ್ಮಿಲನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದ ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಉಪಪ್ರಧಾನಿ ಈ ಸಂದರ್ಭವನ್ನು ಅಲಂಕರಿಸುವ ನಿರೀಕ್ಷೆಯಿದೆ. ಪಂದ್ಯದ ಪ್ರತಿ ವಿರಾಮದ ಸಮಯದಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ರಂಜಿಸಲು ಬಿಸಿಸಿಐ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿದೆ.
ವಿಶ್ವಕಪ್ ಫೈನಲ್ ಪಂದ್ಯದ ದಿನ ಮದ್ಯದಂಗಡಿ ಬಂದ್, ಡ್ರೈ ಡೇ ಘೋಷಿಸಿದ ದೆಹಲಿ ಅಬಕಾರಿ ಆಯುಕ್ತ!
ಲೀಗ್ ಹಂತದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಚೆನ್ನೈನಲ್ಲಿ ಎದುರಿಸಿದ್ದ ಭಾರತ ತಂಡ ಉತ್ತಮ ನಿರ್ವಹಣೆ ತೋರಿತ್ತು. ಭಾರತ ತಂಡ ಆಸ್ಟ್ರೇಲಿಯಾವನ್ನು 199 ರನ್‌ಗೆ ಆಲೌಟ್ ಮಾಡಿತ್ತು. ಬ್ಯಾಟಿಂಗ್ ಬೇಳೆ ಮೊದಲ ಮೂರು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡರೂ, ಕೊನೆಗೆ ಆರು ವಿಕೆಟ್‌ಗಳ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು. 'ಅವರು ಖಂಡಿತವಾಗಿಯೂ ಈ ವಿಶ್ವಕಪ್ ಅನ್ನು ಚೆನ್ನಾಗಿ ಆಡಿದ್ದಾರೆ. ನಮ್ಮ ಆಟ ಉತ್ತಮವಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ನಾವು ಉತ್ತಮ ಸ್ಕೋರ್ ದಾಖಲು ಮಾಡಿದ್ದೆವು ಎಂದು ನಾನು ಭಾವಿಸೋದಿಲ್ಲ. ಆದರೆ ಇದಕ್ಕೂ ಮುನ್ನ ಈ ವರ್ಷದ ಆರಂಭದಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ್ದೇವೆ. ಭಾರತದಂಥ ಉತ್ತಮ ತಂಡದ ವಿರುದ್ಧ ನಮ್ಮ ನಿರ್ವಹಣೆ ಅಮೋಘವಾಗಿಯೇ ಇದೆ' ಎಂದು ಹೇಳಿದರು.
'ಕ್ರಿಕೆಟ್ ಟೀಮ್ ಜೆರ್ಸಿಯಲ್ಲಿ ಬಿಜೆಪಿ ಬಣ್ಣ ಬಳಿಯಲಾಗುತ್ತಿದೆ..' ಮಮತಾ ಬ್ಯಾನರ್ಜಿ ಆಕ್ರೋಶ!