
ದುಬೈ (ಸೆ.21) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯ ಸ್ಲೆಡ್ಜಿಂಗ್‌ಗೆ ವೇದಿಕೆಯಾಗಿದೆ. ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ ಹಾಗೂ ಪಾಕಿಸ್ತಾನದ ಹ್ಯಾರಿಸ್ ರೌಫ್ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಬ್ಯಾಟಿಂಗ್ ವೇಳೆ ಶಾಹೀಬ್‌ಜಾದ್ ಫರ್ಹಾನ್ ಸಂಭ್ರಮಾಚರಣೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪೆಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬಲಿಯಾದ 26 ಮಂದಿ, ಅವರ ಕುಟುಂಬ ಹಾಗೂ ಸಮಸ್ತ ಭಾರತೀಯರನ್ನು ಅಣಕಿಸಿದ್ರಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಹೀಬ್‌ಜಾದ್ ಫರ್ಹಾನ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸಿದ ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹಾಫ್ ಸೆಂಚುರಿ ಸಂಭ್ರಮವನ್ನು ಶಾಹೀಬ್‌ಜಾದ್ ಫರ್ಹಾನ್, ಭಾರತೀಯ ತಂಡದ ಡೌಗ್‌ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದ್ದಾರೆ. ಬ್ಯಾಟನ್ನೇ ಏಕೆ 47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
Asia Cup ಭಾರತ ಪಾಕಿಸ್ತಾನ ಪಂದ್ಯದಲ್ಲಿ ವಿವಾದ, ಅಂಪೈರ್ ವಿರುದ್ಧ ಸಿಡಿದೆದ್ದ ಫಕಾರ್, ವಿಡಿಯೋ
ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಂಭ್ರಮಾಚರಣೆ, ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯ ಸಂಭ್ರಮಕ್ಕೂ ಹೆಚ್ಚಿನ ವ್ಯತ್ಯಾಸಗಳು ಕಾಣುತ್ತಿಲ್ಲ. ಪೆಹಲ್ಗಾಂನಲ್ಲಿ ಉಗ್ರರು ಗನ್ ಹಿಡಿದು ಪ್ರವಾಸಕ್ಕೆ ತೆರಳಿದ್ದ ಅಮಾಯಕರ ಮೇಲೆ ಹಲವು ಸುತ್ತಿನ ಗುಂಡು ಹಾರಿಸಿದ್ದರು. ಪತ್ನಿ, ಮಕ್ಕಳು, ಕುಟುಂಬ ಮುಂದೆ ಪುರುಷರ ಮೇಲೆ ಗುಂಡು ಹಾರಿಸಿದ್ದರು. ಇದರ ವಿಡಿಯೋದಲ್ಲಿರುವ ಇದೇ ರೀತಿಯ ಸಂಭ್ರಮಾಚರಣೆಯನ್ನು ಇದೀಗ ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಬಳಿಕ ಮಾಡಿದ್ದಾರೆ. ಪೆಹಲ್ಗಾಂ ದಾಳಿ ಹಿಂದೂಗಳ ಗುರಿಯಾಗಿಸಿ ನಡೆದ ದಾಳಿಯಾಗಿತ್ತು. ಇದೀಗ ಶಾಹೀಬ್‌ಜಾದ್ ಫರ್ಹಾನ್, ಹಿಂದೂಸ್ತಾನ ತಂಡದ ಡಕೌಟ್ ಕಡೆ ಬ್ಯಾಟನ್ನು ಗನ್ ರೀತಿ ತೋರಿಸಿ ಗುಂಡಿನ ಮಳೆ ಸುರಿಸುವ ಸೆಲೆಬ್ರೇಷನ್ ಮಾಡಿದ್ದಾರೆ.
ಶಾಹೀಬ್‌ಜಾದ್ ಫರ್ಹಾನ್ ಸಂಭ್ರಮಾಚರಣೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಲ್ಲಿಸುವಂತೆ ಹಲವರು ಆಗ್ರಹಿಸಿದ್ದಾರೆ. ಭಯೋತ್ಪಾದಕ ದೇಶದ ಎಲ್ಲರೂ ಭಯೋತ್ಪಾದಕರ ರೀತಿಯೇ ವರ್ತಿಸುತ್ತಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹೆಜ್ಜೆ ಹೆಜ್ಜೆಗೂ ಭಾರತದಿಂದ ಮುಖಭಂಗ ಅನುಭವಿಸುತ್ತಿದೆ. ಟೀಂ ಇಂಡಿಯಾ , ಪಾಕಿಸ್ತಾನ ಕ್ರಿಕೆಟಿಗರ ಜೊತೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದೆ. ಪಾಕಿಸ್ತಾನವನ್ನು ಸಾಧ್ಯವಾದ ಕಡೆಯಲ್ಲಾ ಮುಖಭಂಗಗೊಳಿಸಿದೆ. ಇವೆಲ್ಲವೂ ಪಾಕಿಸ್ತಾನ ಕ್ರಿಕೆಟಿಗರನ್ನು ಕೆರಳಿಸಿದೆ. ಆದರೆ ಭಾರತ ಪಂದ್ಯದ ಮೂಲಕ ಹಾಗೂ ಇತರ ನಡೆ ಮೂಲಕ ತಕ್ಕ ತಿರುಗೇಟು ನೀಡುತ್ತಿದೆ.
INDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.