
ದುಬೈ (ಸೆ.21) ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ತಂಡ, ಅಂಪೈರ್ ವಿರುದ್ಧ ಆಕ್ರೋಶಗೊಂಡಿದೆ. ಫಕರ್ ಜಮಾನ್‌ಗೆ ನೀಡಿದ ಔಟ್ ತೀರ್ಪಿನ ಕುರಿತ ವಿವಾದ ಶುರುವಾಗಿದೆ. ನಾಟೌಟ್ ಇದ್ದರೂ ಭಾರತದ ಪರ ತೀರ್ಪು ನೀಡಲಾಗಿದೆ ಅನ್ನೋದು ಪಾಕಿಸ್ತಾನ ಅಭಿಮಾನಿಗಳ ವಾದ, ಇತ್ತ ಫಕರ್ ಜಮಾನ್ ಕೂಡ ತೀರ್ಪಿಗೆ ಆಕ್ರೋಶ ಹೊರಹಾಕಿದ್ದಾರೆ.
ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ಆರಂಭದಲ್ಲೇ ಫಕರ್ ಜಮಾನ್ ವಿಕೆಟ್ ಕಳೆದುಕಂಡಿತು. ಫಕರ್ ಜಮಾನ್ 15 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಎಸತದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಆದರೆ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯುವಾಗ ಬಾಲ್ ನೆಲಕ್ಕೆ ಬಿದ್ದಿದೆ ಅನ್ನೋದು ಫಕರ್ ಜಮಾನ್ ವಾದ. ಸಂಜು ಸ್ಯಾಮ್ಸನ್ ಕ್ಯಾಚ್ ಸರಿಯಾಗಿ ಸ್ವೀಕರಿಸಿರುವುದಾಗಿ ಖಚಿತಪಡಿಸಿದ್ದಾರೆ. ಕ್ಯಾಚ್ ಕುರಿತು ಸ್ಪಷ್ಟತೆ ಪಡೆಯಲು ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ಮೊರೆ ಹೋಗಿದ್ದಾರೆ.
ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸದ ಅದೃಷ್ಠ
ಸಂಜು ಸ್ಯಾಮ್ಸನ್ ಪಡೆದ ಕ್ಯಾಚ್ ಕುರಿತು ಥರ್ಡ್ ಅಂಪೈರ್ ಹಲವು ಬಾರಿ ಪರಿಶೀಲಿಸಿದ್ದಾರೆ. ಬಾಲ್ ಪಡೆದುಕೊಂಡ ರೀತಿ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಔಟ್ ತೀರ್ಪು ನೀಡಿದ್ದಾರೆ. ಇದು ಫಕರ್ ಜಮಾನ್ ಆಕ್ರೋಶಕ್ಕೆ ಕಾರಣವಾಗಿದೆ. ಬಾಲ್ ನೆಲಕ್ಕೆ ಬಿದ್ದರೂ ಔಟ್ ತೀರ್ಪ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಾ ಪೆವಿಲಿಯನ್‌ನತ್ತ ಸಾಗಿದ್ದಾರೆ. ಪೆವಿಲಿಯನ್‌ನಲ್ಲೂ ಕೋಚ್ ಮೈಕ್ ಹಸನ್ ಜೊತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪಾಕಿಸ್ತಾನ ಮಾಜಿ ಕ್ರಿಕೆಟಿಗರೂ ಈ ಕ್ಯಾಚ್ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್, ಕ್ಯಾಚ್ ಪ್ರಶ್ನಿಸಿದ್ದಾರೆ. ಸರಿಯಾಗಿ ಈ ಕ್ಯಾಚ್ ಪಡೆದುಕೊಳ್ಳಲಾಗಿದೆಯಾ, ಇದು ಸ್ಪಷ್ಟವಾಗಿಲ್ಲ. ಬೇರೆ ರಿಪ್ಲೇ ವಿಡಿಯೋ ನೋಡಿ ತೀರ್ಪು ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಪಾಕಿಸ್ತಾನ ಅಬ್ಬರಿಸಿದೆ. ಕ್ಯಾಚ್ ಡ್ರಾಪ್ ಮೂಲಕ ಜೀವದಾನ ಪಡೆದಿದ್ದ ಸಾಹೀಬ್‌ಜಾದ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಫರ್ಹಾನ್ ಅರ್ಧಶತಕ ಪೂರೈಸಿದರು. ಇತ್ತ ಸಯೀಮ್ ಅಯೂಬ್ ಉತ್ತಮ ಸಾಥ್ ನೀಡಿದರು. ಈ ಮೂಲಕ ಪಾಕಿಸ್ತಾನ ಚೇತರಿಸಿಕೊಂಡಿತು.
ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಏಷ್ಯಾಕಪ್‌ನಲ್ಲಿ ಮತ್ತೆ ಶತ್ರು ರಾಷ್ಟ್ರಕ್ಕೆ ಮುಖಭಂಗ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.