ದುಬೈ (ಸೆ.21) ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡವನ್ನು ರನ್‌ಗೆ ಕಟ್ಟಿಹಾಕಿದೆ. ಶಾಹೀಬ್‌ಜಾದ ಫರ್ಹಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿ ಬೃಹತ್ ಮೊತ್ತದ ಸೂಚನೆ ನೀಡಿದ್ದರು. ಇತ್ತ ನಾಲ್ಕು ಪ್ರಮುಖ ಕ್ಯಾಚ್ ಕೈಚೆಲ್ಲಿ ಭಾರತ ದುಬಾರಿಯಾಗಿತ್ತು. ಇದರ ನಡುವೆ ಸಂಘಟಿತ ದಾಳಿ ನಡೆಸಿದರೂ ಪಾಕಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಹೋರಾಟ ನೀಡಿದ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 171 ರನ್ ಸಿಡಿಸಿತು. ಈ ಮೂಲಕ ಭಾರತ ಕಠಿಣ ಟಾರ್ಗೆಟ್ ನೀಡಿದೆ.
ಪಾಕಿಸ್ತಾನ ಮೊದಲು ಬ್ಯಾಟಿಂಗ್ ಇಳಿದು ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಆದರೆ ಭಾರತ ಶಾಹೀಬ್‌ಜಾದ ಫರ್ಹಾನ್ ಕ್ಯಾಚ್ ಡ್ರಾಪ್ ಮಾಡಿ ನಿರಾಸೆ ಅನುಭವಿಸಿತ್ತು. ಇದರ ಲಾಭ ಪಡೆದ ಫರ್ಹಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದರ ನಡುವೆ ಮತ್ತೊಬ್ಬ ಆರಂಭಿಕ ಫಕರ್ ಜಮಾನ್ ವಿಕೆಟ್ ಕಳೆದುಕೊಂಡರೂ ಫರ್ಹಾನ್ ಅಬ್ಬರಕ್ಕೆ ಬ್ರೇಕ್ ಬೀಳಲಿಲ್ಲ. ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆರಂಭದಲ್ಲೇ ಕುಸಿತ ಕಂಡಿದ್ದ ಪಾಕಿಸ್ತಾನಕ್ಕೆ ಫರ್ಹಾನ್ ಬ್ಯಾಟಿಂಗ್ ನೆರವಾಯಿತು. ಇದರೊಂದಿಗೆ ಚೇತರಿಕೆ ಕಂಡಿತು.
ಫಕರ್ ಜಮಾನ್ 15 ರನ್ ಸಿಡಿಸಿ ಅಬ್ಬರಿಸುತ್ತಿದ್ದತೆ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಆದರೆ ಸಂಜು ಸ್ಯಾಮ್ಸನ್ ಈ ಕ್ಯಾಚ್ ಸರಿಯಾಗಿ ಪಡೆದಿಲ್ಲ, ಬಾಲ್ ನೆಲಕ್ಕೆ ಬಿದ್ದಿದೆ ಅನ್ನೋ ವಾದವೂ ಎದ್ದಿದೆ.ಥರ್ಡ್ ಅಂಪೈರ್ ಹಲವು ಬಾರಿ ಚೆಕ್ ಮಾಡಿ ಔಟ್ ತೀರ್ಪು ನೀಡಿದ್ದರು. ಇದು ಫಕರ್ ಜಮಾನ್ ಆಕ್ರೋಶಕ್ಕೆ ಕಾರಣವಾಗಿತ್ತು.
ಒಂದೆಡೆ ಫರ್ಹಾನ್ ಅಬ್ಬರ ಮುಂದುವರಿದಿತ್ತು.ಇತ್ತ ಸೈಮ್ ಆಯೂಬ್ ಉತ್ತಮ ಸಾಥ್ ನೀಡಿದ್ದರು. ಆದರೆ ಆಯೂಬ್ 21 ರನ್ ಸಿಡಿಸಿ ಔಟಾದರು. ಇತ್ತ ಹುಸೈನ್ ತಲಾಟ್ 10 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ಫರ್ಹಾನ್ 58 ರನ್ ಸಿಡಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಪಾಕಿಸ್ತಾನದ ರನ್ ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅಂತಿಮ ಹಂತದಲ್ಲಿ ಮೊಹಮ್ಮದ್ ನವಾಜ್ ಹಾಗೂ ಾಯಕ ಸಲ್ಮಾನ್ ಆಘಾ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಮೊಹಮ್ಮದ್ ನವಾಜ್ 19 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆದರೆ ಫಹೀಮ್ ಆಸೀಮ್ ಸಿಕ್ಸರ್ ಮೂಲಕ ಖಾತೆ ಆರಂಭಿಸಿದರು. ಇದರೊಂದಿಗೆ ಪಾಕಿಸ್ತಾನ 150 ರನ್ ಗಡಿ ದಾಟಿತು. ಫಾಹೀಮ್ ಅಶ್ರಪ್ 8 ಎಸೆತದಲ್ಲಿ ಅಜೇಯ 20 ರನ್ ಸಿಡಿದರೆ ಸಲ್ಮಾನ್, ಅಜೇಯ 17 ರನ್ ಸಿಡಿಸಿದರು. ಭಾರತಕ್ಕೆ 172 ರನ್ ಟಾರ್ಗೆಟ್ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.