
ಪಲ್ಲಕೆಲೆ(ಸೆ.04) ಟೀಂ ಇಂಡಿಯಾ ಸದ್ಯ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಆಡುತ್ತಿದೆ. ಈ ಪಂದ್ಯದ ವಿಶ್ಲೇಷಣೆ, ಕಮೆಂಟರಿಗಾಗಿ ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು ಲಂಕಾದಲ್ಲಿದ್ದಾರೆ. ಈ ಪೈಕಿ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಕೂಡ ಪಲ್ಲಕೆಲೆಯಲ್ಲಿ ಹಾಜರಿದ್ದಾರೆ. ಇದೀಗ ಗೌತಮ್ ಗಂಭೀರ್ ಮತ್ತೆ ಮಧ್ಯದ ಬೆರಳು ತೋರಿಸಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಪಲ್ಲಕೆಲೆ ಕ್ರೀಡಾಂಗಣದ ಅಭಿಮಾನಿಗಳು ಗಂಭೀರ್ ನೋಡಿದ ತಕ್ಷಣ ಕೊಹ್ಲಿ ಕೊಹ್ಲಿ ಘೋಷಣೆ ಕೂಗಿದ್ದಾರೆ. ಇದರಿಂದ ಉರಿದು ಬಿದ್ದ ಗಂಭೀರ್ ಮಧ್ಯದ ಬೆರಳು ತೋರಿಸಿ ಅಸಭ್ಯತೆ ಪ್ರದರ್ಶಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಗೌತಮ್ ಗಂಭೀರ್ ತಾವೊಬ್ಬ ಸಂಸದ ಅನ್ನೋದನ್ನು ಹಲವು ಬಾರಿ ಮರೆತಿದ್ದಾರೆ. ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಗಂಭೀರ್ ಈ ನಡೆ ವಿವಾದಕ್ಕೆ ಕಾರಣಾಗಿದೆ. ಬಿಜೆಪಿ ಸಂಸದನೊಬ್ಬ ಈ ರೀತಿಯ ಅಸಭ್ಯ ವರ್ತನೆ ತೋರುತ್ತಿರುವುದು ಶೋಭೆಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಗೌತಮ್ ಗಂಭೀರ್ ಕ್ರಿಕೆಟ್ ವಿಶ್ಲೇಷಕರಾಗಿ ಪಲ್ಲಕೆಲೆಯಲ್ಲಿ ಹಾಜರಿದ್ದಾರೆ. ಟೀಂ ಇಂಡಿಯಾ ಪಂದ್ಯಗಳ ವೀಕ್ಷಕ ವಿವರಣೆ, ವಿಶ್ಲೇಷಣೆ ಮಾಡುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ತಮ್ಮ ಖಡಕ್ ಪ್ರತಿಕ್ರಿಯೆಗಳಿಂದಲೂ ಜನಪ್ರಿಯರಾಗಿದ್ದಾರೆ. ಕ್ರೀಡಾಂಗಣ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಂಭೀರ್ ನೋಡಿದ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಘೋಷಣೆ ಕೂಗಿದ್ದಾರೆ.
ಟೀಂ ಇಂಡಿಯಾಗೆ ಸಾಧ್ಯವೇ ಇಲ್ಲ, 4 ಪದದಲ್ಲಿ 4 ವಿಕೆಟ್ ಪತನ ತಿವಿದ ಪಾಕಿಸ್ತಾನ ಪ್ರಧಾನಿ!
ಗಂಭೀರ್‌ಗೆ ಕೊಹ್ಲಿ ಹೆಸರು ಕೇಳಿದರೆ ಎಲ್ಲಿಲ್ಲದ ಉರಿ. ಇದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಐಪಿಎಲ್ ಟೂರ್ನಿಯ ಹಲವು ಆವೃತ್ತಿಗಳಲ್ಲಿ ಇದು ಸಾಬೀತಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲೂ ಕೊಹ್ಲಿ ಹಾಗೂ ಗಂಭೀರ್ ನಡುವೆ ಭಾರಿ ಜಿದ್ದಾಜಿದ್ದಿ ನಡೆದಿತ್ತು. ಇತ್ತ ಅಭಿಮಾನಿಗಳು ಕೊಹ್ಲಿ ಘೋಷಣೆ ಕೂಗುತ್ತಿದ್ದಂತೆ ಮಧ್ಯದ ಬೆರಳು ತೋರಿಸಿ ಅಸಭ್ಯತೆ ಪ್ರದರ್ಶಿಸಿದ್ದಾರೆ.
2023ರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೌತಮ್ ಗಂಭೀರ್, ಆರ್‌ಸಿಬಿ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿ ವಿವಾದ ಸೃಷ್ಟಿಸಿದ್ದರು. ಇದೀಗ ಮತ್ತೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿ ಅಸಭ್ಯತೆ ಪ್ರದರ್ಶಿಸಿದ್ದಾರೆ.
ನೆರೆಹೊರೆಯವರನ್ನು ಪ್ರೀತಿಸಿದರೆ ತಪ್ಪೇನಲ್ಲ..! ಕೊಹ್ಲಿ ಮೇಲಿನ ಅಭಿಮಾನ ತೋರಿದ ಪಾಕ್ ಮಹಿಳಾ ಅಭಿಮಾನಿ
ಈ ವಿಡಿಯೋ ವೈರಲ್ ಆಗಿದೆ. ಹಲವರು ಗಂಭೀರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಸದನಾಗಿ ಸಭ್ಯ ನಡೆ ಅಗತ್ಯ. ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿದ್ದಾರೆ. ಕೊಹ್ಲಿ ಹೆಸರು ಇಷ್ಟವಿಲ್ಲದೇ ಇದ್ದರೆ ಸುಮ್ಮನಿರಿ, ಇದರ ಬದಲು ಭಾರತಕ್ಕೆ, ಭಾರತೀಯ ಅಭಿಮಾನಿಗಳಿಗೆ ಅಪಮಾನ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.