ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಮಹತ್ವದ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. ಕೊಹ್ಲಿ, ಅಯ್ಯರ್, ಕಿಶನ್ ಕ್ಯಾಚ್ ಕೈಚೆಲ್ಲಿದರೆ, ಕಳಪೆ ಫೀಲ್ಡಿಂಗ್ ಟ್ರೋಲ್‌ಗೆ ಗುರಿಯಾಗಿದೆ.
ಪಲ್ಲಕೆಲೆ(ಸೆ.04) ಏಷ್ಯಾಕಪ್ 2023 ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಹಲವು ಸವಾಲು ಎದುರಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಇದೀಗ ನೇಪಾಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವಿನ ಅಗತ್ಯವಿದೆ. ಆದರೆ ನೇಪಾಳ ವಿರುದ್ಧ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಪ್ರಮುಖ ಕ್ಯಾಚ್ ಕೈಚೆಲ್ಲಿದ್ದಾರೆ. ಇನ್ನು ಒಟ್ಟಾರೆ ಭಾರತದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಇದರ ವಿರುದ್ಧ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಲಗಾನ್ ಚಿತ್ರದ ಫೀಲ್ಡಿಂಗ್ ಹೋಲಿಸಿ ಟ್ರೋಲ್ ಮಾಡಿದ್ದಾರೆ.
ಒಂದೆಡೆ ಮಳೆ ಮತ್ತೊಂದೆಡೆ ಕಳಪೆ ಫೀಲ್ಡಿಂಗ್ ಟೀಂ ಇಂಡಿಯಾದ ಏಷ್ಯಾಕಪ್ ಅಭಿಯಾನಕ್ಕೆ ಅಡ್ಡಿಯಾಗಿದೆ. ನೇಪಾಳ ಓಪನರ್ ಭರ್ಟೆಲ್ ಮೊದಲ ಓವರ್‌ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಶ್ರೇಯಸ್ ಅಯ್ಯರ್ ಕ್ಯಾಚ್ ಕೈಚೆಲ್ಲಿ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಸುಲಭ ಕ್ಯಾಚ್ ಕೈಚೆಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಬಂದ ಸಿಟ್ಟರ್ ಕ್ಯಾಚ್ ಕೈಚೆಲ್ಲಿದರು.
undefined
ತಂದೆಯಾದ ವೇಗಿ ಜಸ್ಪ್ರೀತ್ ಬುಮ್ರಾ; ಮಗುವಿನ ಮುದ್ದಾದ ಹೆಸರಿಟ್ಟ ಟೀಂ ಇಂಡಿಯಾ ವೇಗಿ.
ಭರ್ಟೆಲ್ ಮತ್ತೊಮ್ಮೆ ಸುಲಭ ಕ್ಯಾಚ್ ನೀಡಿದರೆ ಈ ಬಾರಿ ಇಶಾನ್ ಕಿಶನ್ ನಿರಾಸೆಗೊಳಿಸಿದರು. ಆರಂಭಿಕ 4 ಓವರ್‌ಗಳಲ್ಲಿ ಭಾರತ ಪ್ರಮುಖ 3 ಕ್ಯಾಚ್ ಕೈಚೆಲ್ಲಿತು. ಇನ್ನು ಮಳೆಯಿಂದ ಒದ್ದೆಯಾಗಿರುವ ಮೈದಾನದಲ್ಲಿ ಫೀಲ್ಡಿಂಗ್ ಕೂಡ ಸಮರ್ಪಕವಾಗಿರಲಿಲ್ಲ.
ಭಾರತ ಕಳಪೆ ಫೀಲ್ಡಿಂಗ್‌ನಿಂದ ನೇಪಾಳ ಆರಂಭಿಕರು ಉತ್ತಮ ಜೊತೆಯಾಟ ನೀಡುವಲ್ಲಿ ಯಶಸ್ವಿಯಾಯಿತು. ಕುಶಾಲ್ ಭರ್ಟೆಲ್ 38 ರನ್ ಕಾಣಿಕೆ ನೀಡಿದರೆ, ಆಸೀಫ್ ಶೇಕ್ 58 ರನ್ ಕಾಣಿಕೆ ನೀಡಿದರು. ಇದರಿಂದ ನೇಪಾಳ ಉತ್ತಮ ಸ್ಥಿತಿ ತಲುಪಿತು.
ಇನ್ನು ಮೊದಲ ಪಂದ್ಯದಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸಿತ್ತು. ಆದರೆ ಮಳೆರಾಯನಿಂದ ಪಂದ್ಯ ರದ್ದಾಗಿತ್ತು. ಟೀಂ ಇಂಡಿಯಾ ಬ್ಯಾಟಿಂಗ್ ನಡೆಸಿದರೂ ನಿರೀಕ್ಷಿತ ಅಬ್ಬರ ಇರಲಿಲ್ಲ. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟದಿಂದ 266 ರನ್ ಸಿಡಿಸಿ ಆಲೌಟ್ ಆಗಿತ್ತು. 4 ವರ್ಷ ಬಳಿಕ ಏಕದಿನ ಮಾದರಿಯಲ್ಲಿ ಮುಖಾಮುಖಿಯಾದ ಬದ್ಧವೈರಿಗಳ ನಡುವೆ ನಿರೀಕ್ಷೆಯಂತೆಯೇ ಭರ್ಜರಿ ಸ್ಪರ್ಧೆ ಏರ್ಪಟ್ಟಿತ್ತು. ಆಗಾಗ ಮಳೆ ಸುರಿದ ಹೊರತಾಗಿಯೂ ಮೊದಲ ಇನ್ನಿಂಗ್ಸ್ ಪೂರ್ತಿಗೊಂಡಿತು. ಆದರೆ ಪಂದ್ಯ ಪೂರ್ತಿಯಾಗಲು ಮಳೆರಾಯ ಅವಕಾಶ ನೀಡಲಿಲ್ಲ.
Asia Cup 2023: ಆಫ್ಘಾನ್ ಮಣಿಸಿ ಸೂಪರ್-4 ರೇಸಲ್ಲಿ ಉಳಿದ ಬಾಂಗ್ಲಾದೇಶ..!
ಆರಂಭಿಕ ಆಘಾತಕ್ಕೆ ಗುರಿಯಾದರೂ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಉತ್ಕೃಷ್ಟ ಗುಣಮಟ್ಟದ ಬ್ಯಾಟಿಂಗ್ ನೆರವಿನಿಂದ ಭಾರತ 48.5 ಓವರಲ್ಲಿ 266 ರನ್‌ಗೆ ಆಲೌಟ್ ಆಯಿತು. ಆದರೆ ನಿರಂತರ ಮಳೆಯಿಂದಾಗಿ ಪಾಕಿಸ್ತಾನದ ಬ್ಯಾಟಿಂಗ್ ಆರಂಭಗೊಳ್ಳಲಿಲ್ಲ. ಪಂದ್ಯ ರದ್ದುಗೊಂಡ ಪರಿಣಾಮ, ಎರಡೂ ತಂಡಗಳಿಗೆ ಅಂಕ ಹಂಚಲಾಯಿತು. ಮೊದಲ ಪಂದ್ಯದಲ್ಲಿ ನೇಪಾಳವನ್ನು ಸುಲಭವಾಗಿ ಸೋಲಿಸಿದ್ದ ಪಾಕಿಸ್ತಾನ ಮತ್ತೊಂದು ಅಂಕ ಸೇರ್ಪಡೆಯೊಂದಿಗೆ ಸೂಪರ್-4 ಹಂತಕ್ಕೆ ಪ್ರವೇಶಿಸಿತು. ನೇಪಾಳ ವಿರುದ್ಧ ಭಾರತ ಗೆದ್ದರೆ ಸೂಪರ್-4ಗೇರಲಿದೆ.
Indian Cricket team today 😭 pic.twitter.com/Qb85zVRZsq
— Context (@rostanalmeida27)