ನೇಪಾಳ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಟೀಂ ಇಂಡಿಯಾ ಫಲಿಸಿಲ್ಲ. ಕಳಪೆ ಫೀಲ್ಡಿಂಗ್ ಭಾರತಕ್ಕೆ ದುಬಾರಿಯಾಗಿದೆ. ಇದೀಗ ನೇಪಾಳ ತಂಡ ಟೀಂ ಇಂಡಿಯಾಗೆ 231 ರನ್ ಟಾರ್ಗೆಟ್ ನೀಡಿದೆ.
ಪಲ್ಲಕೆಲೆ(ಸೆ.04) ಟೀಂ ಇಂಡಿಯಾ ವಿರುದ್ಧ ಆರಂಭಿಕರ ಉತ್ತಮ ಜೊತೆಯಾಟದ ಬಳಿಕ ಸೋಂಪಾಲ್ ಕಾಮಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ನೇಪಾಳ ತಂಡ 230 ರನ್ ಸಿಡಿಸಿದೆ. ಭಾರತದ ಕರಾರುವಕ್ ದಾಳಿ ನಡುವೆ ನೇಪಾಳ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ಕ್ಯಾಚ್ ಕೈಚೆಲ್ಲಿದ ಭಾರತ ದುಬಾರಿ ಬೆಲೆ ತೆತ್ತಿದೆ. ಆದರೆ ಬೌಲರ್‌ಗಳ ಪರಾಕ್ರಮದಿಂದ ನೇಪಾಳ ತಂಡವನ್ನು 48.2 ಓವರ್‌ಗಳಲ್ಲಿ 230 ರನ್‌ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ನೇಪಾಳ ಆರಂಭಿಕ 4 ಓವರ್‌ಗಳಲ್ಲಿ 3 ಕ್ಯಾಚ್ ನೀಡಿತ್ತು. ಆದರೆ ಮೂರು ಕ್ಯಾಚ್‌ಗಳನ್ನು ಭಾರಕ ಕೈಚೆಲ್ಲಿತು. ಕುಶಾಲ್ ಭರ್ಟೆಲ್ ಹಾಗೂ ಆಸಿಫ್ ಶೇಕ್ ಜೊತೆಯಾಟ ನೇಪಾಳ ತಂಡಕ್ಕೆ ಉತ್ತಮ ಆರಂಭ ನೀಡಿತು. ಕುಶಾಲ್ ಭರ್ಟೆಲ್ 25 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ದಗಗೆ ಈ ಜೋಡಿ 65 ರನ್ ಜೊತೆಯಾಟ ನೀಡಿತು. ಇತ್ತ ಆಸೀಫ್ ಶೇಕ್ 58 ರನ್ ಸಿಡಿಸಿ ಔಟಾದರು.
undefined
ಆರಂಭಿಕರ ವಿಕೆಟ್ ಪತನದ ಬಳಿಕ ನೇಪಾಳ ದಿಢೀರ್ ಕುಸಿತ ಕಂಡಿತು. ಭೀಮ್ ಶರ್ಕಿ 7, ನಾಯಕ ರೋಹಿತ್ ಪೌದೆಲ್ 5 ಹಾಗೂ ಕುಶಾಲ್ ಮಲ್ಲಾ 2 ರನ್ ಸಿಡಿಸಿ ಔಟಾದರು. ಗುಲ್ಶನ್ ಜಾ ಹಾಗೂ ದೀಪೇಂದ್ರ ಸಿಂಗ್ ಜೊತೆಯಾಟದಿಂದ ನೇಪಾಳ ಮತ್ತೆ ಚೇತರಿಸಿಕೊಂಡಿತು. ಗುಲ್ಶನ್ ಜಾ 23 ರನ್ ಕಾಣಿಕೆ ನೀಡಿದರು. ದೀಪೇಂದ್ರ ಸಿಂಗ್ 29 ರನ್ ಸಿಡಿಸಿದರು.
ಅಂತಿಮ ಹಂತದಲ್ಲಿ ಸೋಂಪಾಲ್ ಕಮಿ ಹೋರಾಟ ನೇಪಾಳ ತಂಡವನ್ನು 200ರ ಗಡಿ ದಾಟಿಸಿತು. ಸೋಂಪಾಲ್ 48 ರನ್ ಕಾಣಿಕೆ ನೀಡಿದರು. ಆದರೆ ಸಂದೀಪ್ ಲಮಿಚಾನೆ, ಕರನ್ ಕೆಸಿ ಹಾಗೂ ಲಲಿತ್ ರಾಜಬನ್ಶಿ ಹೋರಾಟ ನೀಡಲಿಲ್ಲ. ಹೀಗಾಗಿ ನೇಪಾಳ 48.2 ಓವರ್‌ಗಳಲ್ಲಿ 230 ರನ್ ಸಿಡಿಸಿ ಆಲೌಟ್ ಆಯಿತು.