ಕೇವಲ 6.1 ಓವರ್‌ನಲ್ಲಿ ಗುರಿ ತಲುಪಿ ದಾಖಲೆ, 8ನೇ ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ!
ಅಭೂತಪೂರ್ವ ಪ್ರದರ್ಶನದ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿದೆ. ಶ್ರೀಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿದ್ದ ಭಾರತ, ಕೇವಲ 6.1 ಓವರ್‌ಗಳಲ್ಲಿ ಗುರಿ ತಲುಪಿದೆ.
ಕೊಲೊಂಬೊ(ಸೆ.17) ಟೀಂ ಇಂಡಿಯಾ ಅದ್ಭುತ ಪ್ರದರ್ಶನಕ್ಕೆ ಏಷ್ಯಾಕಪ್ ಟ್ರೋಫಿ ಕೈಸೇರಿದೆ. ಶ್ರೀಲಂಕಾ ವಿರುದ್ದಧ ಫೈನಲ್ ಪಂದ್ಯದಲ್ಲಿ ಭಾರತ ಕೇವಲ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿದೆ. ಈ ಮೂಲಕ 8ನೇ ಏಷ್ಯಾಕಪ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಶ್ರೀಲಂಕಾ ತಂಡವನ್ನು 50 ರನ್‌ಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ 51 ರನ್ ಟಾರ್ಗೆಟ್ ಪಡೆದಿತ್ತು. ಈ ಗುರಿಯನ್ನು 6.1 ಓವರ್‌ಗಳಲ್ಲಿ ಚೇಸ್ ಮಾಡಿ ಟ್ರೋಫಿ ಗೆದ್ದುಕೊಂಡಿದೆ.
ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಜೊತೆಯಾಟಕ್ಕೆ ಭಾರತ ನಿರಾಯಾಸವಾಗಿ ಟ್ರೋಫಿ ಗೆದ್ದುಕೊಂಡಿತು. ಗಿಲ್ ಅಜೇಯ 27 ರನ್ ಸಿಡಿಸಿದರೆ, ಕಿಶನ್ ಅಜೇಯ 23 ರನ್ ಸಿಡಿಸಿದರು. ಈ ಮೂಲಕ ಭಾರತ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚಿನ ಬಾಲ್ ಉಳಿಸಿ ಗೆದ್ದ ದಾಖಲೆ ಬರೆದಿದೆ.
50 ರನ್‌ಗೆ ಶ್ರೀಲಂಕಾ ಆಲೌಟ್ ಮಾಡಿ 23 ವರ್ಷಗಳ ಹಳೇ ಸೇಡು ತೀರಿಸಿದ ಭಾರತ!
ಟೀಂ ಇಂಡಿಯಾ ಏಕದಿನದಲ್ಲಿ ಅತೀ ಹೆಚ್ಚು ಬಾಲ್ ಉಳಿಸಿ ಗೆದ್ದ ದಾಖಲೆ!
263 ಎಸೆತ ಬಾಕಿ vs ಶ್ರೀಲಂಕಾ (2023 ) ಏಷ್ಯಾಕಪ್ ಫೈನಲ್
231 ಎಸೆತ ಬಾಕಿ vs ಕೀನ್ಯಾ(2001)
211 ಎಸೆತ ಬಾಕಿ vs ವೆಸ್ಟ್ ಇಂಡೀಸ್(2018)
188 ಎಸೆತ ಬಾಕಿ vs ಇಂಗ್ಲೆಂಡ್(2022)
ಏಕದಿನ ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಎಸೆತ ಉಳಿಸಿ ಗೆದ್ದ ತಂಡ
263 ಎಸೆತ ಬಾಕಿ, ಭಾರತ vs ಶ್ರೀಲಂಕಾ (2023) ಏಷ್ಯಾಕಪ್ ಫೈನಲ್
226 ಎಸೆತ ಬಾಕಿ, ಆಸ್ಟ್ರೇಲಿಯಾ vs ಇಂಗ್ಲೆಂಡ್ (2003)
179 ಎಸೆತ ಬಾಕಿ, ಆಸ್ಟ್ರೇಲಿಯಾ vs ಪಾಕಿಸ್ತಾನ( 1999)
Asia Cup Final ಸಿರಾಜ್ ಬಿರುಗಾಳಿಗೆ ಮಂಕಾದ ಲಂಕಾ, ಕೇವಲ 50 ರನ್‌ಗೆ ಆಲೌಟ್!
ಏಕದಿನ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಗೆಲುವು ದಾಖಲೆ
197/0 ಭಾರತ vs ಜಿಂಬಾಬ್ವೆ, ಶಾರ್ಜಾ(1998)
118/0 ಆಸ್ಟ್ರೇಲಿಯಾ vs ಇಂಗ್ಲೆಂಡ್, ಸಿಡ್ನಿ(2003)
51/0 ಭಾರತ vs ಶ್ರೀಲಂಕಾ, ಕೊಲೊಂಬೊ(2023 )
ಟೀಂ ಇಂಡಿಯಾ ಅಭೂತಪೂರ್ವ ಪ್ರದರ್ಶನಕ್ಕೆ ಮೆಚ್ಚುಗ ಸುರಿಮಳೆ ವ್ಯಕ್ತವಾಗಿದೆ. ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇದೇ ರೀತಿ ಪ್ರದರ್ಶನ ನೀಡಿ ತವರಿನಲ್ಲಿ ಮತ್ತೆ ಟ್ರೋಫಿ ಗೆಲ್ಲಲಿ ಎಂದು ಹಲವರು ಹಾರೈಸಿದ್ದಾರೆ.