50 ರನ್‌ಗೆ ಶ್ರೀಲಂಕಾ ಆಲೌಟ್ ಮಾಡಿ 23 ವರ್ಷಗಳ ಹಳೇ ಸೇಡು ತೀರಿಸಿದ ಭಾರತ!

By Suvarna NewsFirst Published Sep 17, 2023, 5:57 PM IST
Highlights

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ 23 ವರ್ಷಗಳ ಹಳೇ ಸೇಡನ್ನು ಬಡ್ಡಿ ಸಮೇತ ತೀರಿಸಿದೆ. ಕಾರಣ 23 ವರ್ಷಗಳ ಹಿಂದೆ ಭಾರತವನ್ನು 54 ರನ್‌‌ಗೆ ಲಂಕಾ ಆಲೌಟ್ ಮಾಡಿತ್ತು.

ಕೊಲೊಂಬೊ(ಸೆ.17) ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಾಳಿಗೆ ಶ್ರೀಲಂಕಾ ಕೇವಲ 50 ರನ್‌ಗೆ ಆಲೌಟ್ ಆಗಿದೆ.  ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದರು. ಕೇವಲ 15.2 ಓವರ್‌ಗಳಲ್ಲಿ ಶ್ರೀಲಂಕಾ 50 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ 23 ವರ್ಷದ ಹಳೇ ಸೇಡನ್ನು ಟೀಂ ಇಂಡಿಯಾ ತೀರಿಸಿಕೊಂಡಿದೆ. 23 ವರ್ಷಗಳ ಹಿಂದೆ ಭಾರತ ತಂಡವನ್ನು ಶ್ರೀಲಂಕಾ 54 ರನ್‌ಗೆ ಆಲೌಟ್ ಮಾಡಿ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಟೀಂ ಇಂಡಿಯಾಗೆ ಏಷ್ಯಾಕಪ್ ಟ್ರೋಫಿ ಗೆಲ್ಲುವ ಸುವರ್ಣ ಅವಕಾಶ ಒಲಿದಿದೆ.

ಅದು 2000ನೇ ಇಸವಿ. ಶಾರ್ಜಾದಲ್ಲಿ ಆಯೋಜನೆಗೊಂಡಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ. ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಟ್ರೋಫಿ ಗೆಲುವಿಗೆ ಸಜ್ಜಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾಗೆ ಸನತ್ ಜಯಸೂರ್ಯ ನೆರವಾದರು. ಜಯಸೂರ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ 161 ಎಸೆತದಲ್ಲಿ 189 ರನ್ ಸಿಡಿಸಿದ್ದರು. 21 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಜಯಸೂರ್ಯ ಅಬ್ಬರ ಟೀಂ ಇಂಡಿಯಾ ಚಿಂತೆ ಹೆಚ್ಚಿಸಿತು. ಅಂತಿಮ ಹಂತದಲ್ಲಿ ರಸೆಲ್ ಅರ್ನಾಲ್ಡ್ 52 ರನ್ ಸಿಡಿಸಿದ್ದರು. ಇದರೊಂದಿಗೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 299 ರನ್ ಸಿಡಿಸಿತ್ತು. 

Asia Cup Final ಸಿರಾಜ್ ಬಿರುಗಾಳಿಗೆ ಮಂಕಾದ ಲಂಕಾ, ಕೇವಲ 50 ರನ್‌ಗೆ ಆಲೌಟ್!

ಟೀಂ ಇಂಡಿಯಾಗೆ 300 ರನ್ ಟಾರ್ಗೆಟ ನೀಡಲಾಗಿತ್ತು. ಈ ರನ್ ಚೇಸ್ ಮಾಡುವ ತಾಖತ್ತು ಟೀಂ ಇಂಡಿಯಾ ಬಳಿ ಇತ್ತು. ಕಾರಣ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ವಿನೋದ್ ಕಾಂಬ್ಳಿ, ಹೇಮಂಗ್ ಬದಾನಿ, ರೋಬಿನ್ ಸಿಂಗ್, ವಿಜಯ್ ದಹಿಯಾ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್ ದಂಡೇ ಭಾರತದಲ್ಲಿತ್ತು. ಆದರೆ ಶ್ರೀಲಂಕಾದ ಚಾಮಿಂಡಾ ವಾಸ್ ದಾಳಿಗೆ ಭಾರತ ತತ್ತರಿಸಿತ್ತು. ಚಮಿಂಡ ವಾಸ್ 5 ವಿಕೆಟ್ ಕಬಳಿಸಿದರೆ, ಮುತ್ತಯ್ಯ ಮರಳೀಧರನ್ 3 ವಿಕೆಟ್ ಕಬಳಿಸಿದ್ದರು. ಭಾರತ 26.3 ಓವರ್‌ಗಳಲ್ಲಿ 54 ರನ್ ಸಿಡಿಸಿ ಆಲೌಟ್ ಆಗಿತ್ತು. ಶ್ರೀಲಂಕಾ 245 ರನ್ ಗೆಲುವು ದಾಖಲಿಸಿ ಟ್ರೋಫಿ ಗೆದ್ದುಕೊಂಡಿತ್ತು. ಅಂದು ಭಾರತವನ್ನು 54 ರನ್‌ಗೆ ಆಲೌಟ್ ಮಾಡಿದ್ದ ಶ್ರೀಲಂಕಾ ತಂಡವನ್ನು ಇಂದು ಭಾರತ 50 ರನ್‌ಗೆ ಆಲೌಟ್ ಮಾಡಿ ಸೇಡು ತೀರಿಸಿಕೊಂಡಿದೆ.

MOHAMMED SIRAJ ಲಂಕೆಗೆ ಬೆಂಕಿಯಿಟ್ಟ ಸಿರಾಜ್..! ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್

ಶ್ರೀಲಂಕಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಏರಡನೇ ಕನಿಷ್ಠ ಮೊತ್ತ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.
ಏಕದಿನದಲ್ಲಿ ಶ್ರೀಲಂಕಾದ ಕನಿಷ್ಠ ಮೊತ್ತ ಮುಖಭಂಗ
43 ರನ್ vs ಸೌತ್ ಆಫ್ರಿಕಾ(2012)
50 ರನ್ vs ಭಾರತ (2023)
55 ರನ್ vs ವೆಸ್ಟ್ ಇಂಡೀಸ್( 1986)
67 ರನ್ vs ಇಂಗ್ಲೆಂಡ್  (2014)
73 ರನ್ vs ಭಾರತ( 2023)

click me!