
ದುಬೈ (ಸೆ.21) ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿ ಭಾರಿ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ಲೀಗ್ ಹಂತದಲ್ಲಿನ ಪಂದ್ಯ ಸಪ್ಪೆಯಾಗಿದ್ದರೆ, ಸೂಪರ್ 4 ಹಂತದ ಪಂದ್ಯ ಸ್ಲೆಡ್ಜಿಂಗ್, ಮಾತಿನ ಚಕಮಕಿ, ಸಂಭ್ರಮಾಚರಣೆ ವಿವಾದಗಳಿಗೆ ಕಾರಣವಾಗಿದೆ. ಟೀಂ ಇಂಡಿಯಾ ರನ್ ಚೇಸ್ ವೇಳೆ ಅಭಿಶೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪಾಕಿಸ್ತಾನ ಬೌಲರ್‌ಗಳನ್ನು ಕೆರಳಿಸಿದೆ. ಸ್ಲೆಡ್ಜಿಂಗ್ ಮಾಡುತ್ತಿದ್ದ ಪಾಕಿಸ್ತಾನ ಬೌಲರ್‌ಗಳಿಗೆ ಅಭಿಶೇಕ್ ಶರ್ಮಾ ಬ್ಯಾಟ್ ಮೂಲಕ ಮಾತ್ರವಲ್ಲ, ಅವರದ್ದೇ ಭಾಷೆಯಲ್ಲಿ ಸ್ಲೆಡ್ಜಿಂಗ್ ಮೂಲಕವೂ ಉತ್ತರ ನೀಡಿದ್ದಾರೆ.
ಮೊದಲ ಎಸೆತದಲ್ಲೇ ಅಭಿಶೇಕ್ ಶರ್ಮಾ ಸಿಕ್ಸರ್ ಸಿಡಿಸಿ ಪಾಕಿಸ್ತಾನ ಬೌಲರ್‌ಗಳ ಕೆರಳಿಸಿದ್ದರು.ಬಳಿಕ ಸ್ಫೋಟಕ ಇನ್ನಿಂಗ್ಸ್ ಮೂಲಕ ಅಭಿಶೇಕ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇದರ ನಡುವೆ ಶಾಹೀನ್ ಆಫ್ರಿದಿ ಹಾಗೂ ಹ್ಯಾರಿಸ್ ರೌಫ್ ಪ್ರತಿ ಎಸತದಲ್ಲೂ ಅಬ್ಬರಿಸಿದ್ದರು. ಇದರಿಂದ ಕೆರಳಿದ ಬೌಲರ್ಸ್ ಶರ್ಮಾ ವಿರುದ್ದ ಸ್ಲೆಡ್ಜಿಂಗ್ ನಡೆಸಿದ್ದಾರೆ. ಇದಕ್ಕೂ ಜಗ್ಗದ ಅಭಿಶೇಕ್ ಶರ್ಮಾ, ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.
ಹ್ಯಾರಿಸ್ ರೌಫ್ ಪ್ರತಿ ಎಸೆತದಲ್ಲೂ ಅಭಿಶೇಕ್ ಶರ್ಮಾ ಸ್ಲೆಡ್ಜಿಂಗ್ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಬ್ಯಾಟ್ ಮೂಲಕ ಉತ್ತರ ನೀಡಿದ ಬಳಿಕ ಅಭಿಶೇಕ್ ಶರ್ಮಾ ಮಾತಿನ ಮೂಲಕವೂ ತಿರುಗೇಟು ನೀಡಿದ್ದಾರೆ. ನೇರಾ ನೇರ ನಿಂತ ಅಭಿಶೇಕ್ ಶರ್ಮಾ ಅಷ್ಟೇ ಖಾರವಾಗಿ ಉತ್ತರಿಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿದ ಅಂಪೈರ್ ಇಬ್ಬರ ಜಗಳ ಬಿಡಿಸಿದ್ದಾರೆ.
ಇತ್ತ ಶುಬಮನ್ ಗಿಲ್ ಕೂಡ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸತದಲ್ಲಿ ಬೌಂಡರಿ ಸಿಡಿಸಿ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ಹೆಕ್ಕಿ ತೆಗೆದುಕೊಂಡು ಬಾ ಎಂದಿದ್ದಾರೆ. ಟೀಂ ಇಂಡಿಯಾ ಆರಂಭಿಕರ ಅಬ್ಬರಕ್ಕೆ ಪಾಕಿಸ್ತಾನ ಬೌಲರ್‌ಗಳು ತಾಳ್ಮೆ ಕಳೆದುಕೊಂಡಿದ್ದಾರೆ. ಹೇಗಾದರು ಮಾಡಿ ಔಟ್ ಮಾಡುವ ಎಲ್ಲಾ ಪ್ರಯತ್ನ ಮಾಡಿದ್ದರು.
ಅಭಿಶೇಕ್ ಶರ್ಮಾ ಅಬ್ಬರಕ್ಕೆ ಪಾಕಿಸ್ತಾನ ತತ್ತರಿಸಿತ್ತು. 6 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 39 ಎಸತದಲ್ಲಿ ಅಭಿಶೇಕ್ ಶರ್ಮಾ 74 ರನ್ ಸಿಡಿಸಿದ್ದರು. ಆಕ್ರಮಣಕಾರಿ ಆಟವಾಡಿದ ಅಭಿಶೇಕ್ ಶರ್ಮಾ, ಪಾಕಿಸ್ತಾನದ ತಲೆನೋವು ಹೆಚ್ಚಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.