
ದುಬೈ: 2025ರ ಏಷ್ಯಾಕಪ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದೆ. ಏಷ್ಯಾದ 8 ತಂಡಗಳು ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದೆ. ಇದೀಗ ಏಷ್ಯಾಕಪ್ ಟ್ರೋಫಿ ಗೆಲ್ಲುವ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗಗೊಂಡಿದೆ.
ಹೌದು, ಪಿಟಿಐ ವರದಿಯ ಪ್ರಕಾರ, 2025ರ ಏಷ್ಯಾಕಪ್ ಟ್ರೋಫಿ ಜಯಿಸುವ ತಂಡವು ಬರೋಬ್ಬರಿ 2.6 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ಇದೇ ವೇಳೆ ಫೈನಲ್‌ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ತಂಡವು 1.3 ಕೋಟಿ ರುಪಾಯಿ ರುಪಾಯಿ ನಗದು ಬಹುಮಾನವನ್ನು ಜೇಬಿಗಿಳಿಸಿಕೊಳ್ಳಲಿದೆ. ಐಪಿಎಲ್ ಟ್ರೋಫಿ ಗೆಲ್ಲುವ ತಂಡಕ್ಕೆ ಹೋಲಿಸಿದರೆ ಈ ಏಷ್ಯಾಕಪ್ ಟ್ರೋಫಿ ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನ ಕಮ್ಮಿ. ಆದರೆ ಇಲ್ಲಿ ನಗದು ಬಹುಮಾನಕ್ಕಿಂತ ಏಷ್ಯಾದ ಸಾಮ್ರಾಟನಾಗಿ ಹೊರಹೊಮ್ಮಲು ಒಂದೊಳ್ಳೆಯ ವೇದಿಕೆ ಇದಾಗಿದೆ. ಹೀಗಾಗಿ ಈ ಪ್ರತಿಷ್ಠಿತ ಟ್ರೋಫಿಗಾಗಿ ಏಷ್ಯಾದ 8 ತಂಡಗಳು ಈ ಬಾರಿ ಕಾದಾಡಲಿವೆ.
ಸರಣಿಶ್ರೇಷ್ಠ ಆಟಗಾರನಿಗೂ ಸಿಗಲಿದೆ ಲಕ್ಷ ಲಕ್ಷ ನಗದು ಬಹುಮಾನ:
ಹೌದು, ಈ ಬಾರಿಯ ಏಷ್ಯಾಕಪ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಆಟಗಾರನಿಗೂ ಈ ಬಾರಿ ಭರ್ಜರಿ ನಗದು ಬಹುಮಾನ ಸಿಗಲಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುವ ಆಟಗಾರನಿಗೆ ಈ ಬಾರಿ ಆಕರ್ಷಕ ಟ್ರೋಫಿ ಜತೆಗೆ 12.5 ಲಕ್ಷ ರುಪಾಯಿ ನಗದು ಬಹುಮಾನ ಸಿಗಲಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳುತ್ತಿದ್ದು, ಹಾಲಿ ಚಾಂಪಿಯನ್ ಭಾರತ ತಂಡ ಬುಧವಾರ ಯುಎಇ ವಿರುದ್ದ ತನ್ನ ಮೊದಲ ಪಂದ್ಯವಾಡಲಿದೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ 'ಎ' ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್ 'ಬಿ' ಗುಂಪಿನಲ್ಲಿವೆ. ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್ -4 ಹಂತ ಪ್ರವೇಶಿಸಲಿವೆ. ಸೂಪರ್ -4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಏಷ್ಯಾಕಪ್ 2025 ವೇಳಾಪಟ್ಟಿ ಗುಂಪು ಹಂತ
ಸೆಪ್ಟೆಂಬರ್ 9 (ಮಂಗಳವಾರ): ಅಫ್ಘಾನಿಸ್ತಾನ vs ಹಾಂಗ್ ಕಾಂಗ್
ಸೆಪ್ಟೆಂಬರ್ 10 (ಬುಧವಾರ): ಭಾರತ vs ಯುಎಇ
ಸೆಪ್ಟೆಂಬರ್ 11 (ಗುರುವಾರ): ಬಾಂಗ್ಲಾದೇಶ vs ಹಾಂಗ್ ಕಾಂಗ್
ಸೆಪ್ಟೆಂಬರ್ 12 (ಶುಕ್ರವಾರ): ಪಾಕಿಸ್ತಾನ vs ಓಮನ್
ಸೆಪ್ಟೆಂಬರ್ 13 (ಶನಿವಾರ): ಬಾಂಗ್ಲಾದೇಶ vs ಶ್ರೀಲಂಕಾ
ಸೆಪ್ಟೆಂಬರ್ 14 (ಭಾನುವಾರ): ಭಾರತ vs ಪಾಕಿಸ್ತಾನ
ಸೆಪ್ಟೆಂಬರ್ 15 (ಸೋಮವಾರ): ಶ್ರೀಲಂಕಾ vs ಹಾಂಗ್ ಕಾಂಗ್
ಸೆಪ್ಟೆಂಬರ್ 16 (ಮಂಗಳವಾರ): ಬಾಂಗ್ಲಾದೇಶ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 17 (ಬುಧವಾರ): ಪಾಕಿಸ್ತಾನ vs ಯುಎಇ
ಸೆಪ್ಟೆಂಬರ್ 18 (ಗುರುವಾರ): ಶ್ರೀಲಂಕಾ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 19 (ಶುಕ್ರವಾರ): ಭಾರತ vs ಓಮನ್
ಸೂಪರ್ 4 ಹಂತ
ಸೆಪ್ಟೆಂಬರ್ 20 (ಶನಿವಾರ): ಗುಂಪು B ಅರ್ಹತೆ 1 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 21 (ಭಾನುವಾರ): ಗುಂಪು A ಅರ್ಹತೆ 1 vs ಗುಂಪು A ಅರ್ಹತೆ 2
ಸೆಪ್ಟೆಂಬರ್ 23 (ಮಂಗಳವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 24 (ಬುಧವಾರ): ಗುಂಪು B ಅರ್ಹತೆ 1 vs ಗುಂಪು A ಅರ್ಹತೆ 2
ಸೆಪ್ಟೆಂಬರ್ 25 (ಗುರುವಾರ): ಗುಂಪು A ಅರ್ಹತೆ 2 vs ಗುಂಪು B ಅರ್ಹತೆ 2
ಸೆಪ್ಟೆಂಬರ್ 26 (ಶುಕ್ರವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 1
ಫೈನಲ್: ಸೆಪ್ಟೆಂಬರ್ 28 (ಭಾನುವಾರ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.