ಭಾರತ-ಪಾಕ್ ಏಷ್ಯಾಕಪ್ ಸೂಪರ್ 4 ಪಂದ್ಯ ರದ್ದು, ಮೀಸಲು ದಿನದಲ್ಲಿ ಪಂದ್ಯ ಪುನರ್ ಆರಂಭ!

By Suvarna News  |  First Published Sep 10, 2023, 8:57 PM IST

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಎರಡನೇ ಬಾರಿಗೆ ರದ್ದಾಗಿದೆ.  ಸೂಪರ್ 4 ಪಂದ್ಯದಲ್ಲಿ 2ನೇ ಬಾರಿಗೆ ಮುಖಾಮುಖಿಯಲ್ಲೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಇಂದು ಪಂದ್ಯ ರದ್ದು ಮಾಡಲಾಗಿದ್ದು, ಮೀಸಲು ದಿನವಾದ ನಾಳೆ ಪಂದ್ಯ ಪುನರ್ ಆರಂಭಗೊಳ್ಳಲಿದೆ.


ಕೊಲೊಂಬೊ(ಸೆ.10) ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಂಟಕ ಎದುರಾಗಿದೆ. ಲೀಗ್ ಹಂತದಲ್ಲಿ ಪಂದ್ಯ ಮಳೆಯಿಂದ ಸಂಪೂರ್ಣ ರದ್ದಾಗಿತ್ತು. ಇದೀಗ ಸೂಪರ್ 4 ಹಂತದ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಎರಡನೇ ಬಾರಿಗೆ ಇಂಡೋ-ಪಾಕ್ ಪಂದ್ಯ ಮಳೆಯಿಂದ ರದ್ದಾಗಿದೆ.  ಆದರೆ ಈ ಬಾರಿ ಅಭಿಮಾನಿಗಳು ನಿರಾಸೆ ಪಡಬೇಕಿಲ್ಲ. ಮೀಸಲು ದಿನವಾದ ನಾಳೆ(ಸೆ.12) ಪಂದ್ಯ ಪುನರ್ ಆರಂಭಗೊಳ್ಳಲಿದೆ. ಯಾವುದೇ ಓವರ್ ಕಡಿತ ಇಲ್ಲ. ಟೀಂ ಇಂಡಿಯಾ 24.1 ಓವರ್ ಇಂದು ಆಡಿದೆ. ಈ ಮೂಲಕ 2 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿದೆ. ನಾಳೆ 24.1 ಓವರ್‌ನಿಂದಲೇ ಪಂದ್ಯ ಪುನರ್ ಆರಂಭಗೊಳ್ಳಲಿದೆ.

ಸೆಪ್ಟೆಂಬರ್ 12ರಂದು ಭಾರತ ಪಾಕಿಸ್ತಾನ ಸೂಪರ್ ಪಂದ್ಯ ಪುನರ್ ಆರಂಭಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ನಾಳೆಯೂ ಮಳೆಗೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಸಂಕಷ್ಟ ಎದುರಾಗಲಿದೆ.  ಪಲ್ಲಕೆಲೆಯಲ್ಲಿ ಆಯೋಜಿಸಿದ್ದ ಭಾರತ ಹಾಗೂ ಪಾಕಿಸ್ತಾನ ಲೀಗ್ ಹಂತದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಸೂಪರ್ 4 ಹಂತದ ಪಂದ್ಯಗಳನ್ನು ಪಲ್ಲಕೆಲೆಯಿಂದ ಕೊಲೊಂಬೊಗೆ ಸ್ಥಳಾಂತರಿಸಲಾಗಿತ್ತು.  ಇದೀಗ ಕೊಲೊಂಬೊದಲ್ಲೂ ಮಳೆ ಅಡ್ಡಿಯಾಗಿದೆ. 

Latest Videos

undefined

"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಇಂದು ಪಂದ್ಯ ಆರಂಭಗೊಂಡಾಗ ಪಾಕಿಸ್ತಾನ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಳೆ ಮುನ್ಸೂಚನೆ ಇದ್ದ ಕಾರಣ ಟೀಂ ಇಂಡಿಯಾ ಕೂಡ ದಿಟ್ಟ ಆರಂಭಕ್ಕೆ ಸಜ್ಜಾಗಿತ್ತು. ಇದರಂತೆ ನಾಯಕ ರೋಹಿತ್ ಶರ್ಮಾ  ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಟೀಂ ಇಂಡಿಯಾಗೆ ನೆರವಾಯಿತು. ರೋಹಿತ್ ಹಾಗೂ ಗಿಲ್ ಶತಕದ ಜೊತೆಯಾಟ ನೀಡಿದರು. ಆರಂಭಿಕರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

ರೋಹಿತ್ ಹಾಗೂ ಶುಭಮನ್ ಗಿಲ್ ಬೌಂಡರಿ ಸಿಕ್ಸರ್ ಆಟಕ್ಕೆ ಪಾಕಿಸ್ತಾನ ತಂಡವನ್ನು ಬೆಚ್ಚಿ ಬೀಳಿಸಿತ್ತು.  ರೋಹಿತ್ ಶರ್ಮಾ 49 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 56 ರನ್ ಚಚ್ಚಿದರು.  ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ  ಗಿಲ್ ಪೆವಿಲಿಯನ್ ಸೇರಿದರು.  ಗಿಲ್ 52 ಎಸೆತದಲ್ಲಿ 10 ಬೌಂಡರಿ ಮೂಲಕ 58 ರನ್ ಸಿಡಿಸಿ ಔಟಾದರು.

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಆಟ ಆರಂಭಗೊಂಡಿತು. ಅಷ್ಟರಲ್ಲೇ ಮಳೆ ವಕ್ಕರಿಸಿತು. 24.1 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತ್ತು. ಆದರೆ ನಿರಂತರ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು.  
 

click me!