"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

By Naveen KodaseFirst Published Sep 10, 2023, 6:41 PM IST
Highlights

ಶೊಯೆಬ್ ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿ ಸುಮಾರು ಒಂದು ದಶಕವೇ ಕಳೆದರೂ ಇಂದಿಗೂ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತಿ ಗಂಟೆಗೆ 161.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ನಿಕ್‌ ನೈಟ್‌ ಎದುರು ಮೇಡನ್ ಸಹಿತ ವಿಶ್ವದಾಖಲೆಯ ವೇಗದ ಬೌಲಿಂಗ್ ಮಾಡಿ ಅಖ್ತರ್ ಗಮನ ಸೆಳೆದಿದ್ದರು.

ಕರಾಚಿ(ಸೆ.10): ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್, ತಾವು ಆಡುವ ಕಾಲಘಟ್ಟದಲ್ಲಿ ವಿಶ್ವ ಕ್ರಿಕೆಟ್‌ನ ಮಾರಕ ವೇಗಿಯಾಗಿ ತನ್ನದೇ ಆದ ಛಾಪು ಮೂಡಿಸಿದ್ದರು. ರಾವುಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ತಮ್ಮ ಮಾರಕ ಬೌನ್ಸರ್ ಮೂಲಕ ಎರಡು ದಶಕಗಳ ಕಾಲ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಸಚಿನ್‌ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಕೂಡಾ ಅಖ್ತರ್ ಅವರನ್ನು ಎದುರಿಸುವುದು ಸುಲಭದ ಮಾತಾಗಿರಲಿಲ್ಲ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ಒಪ್ಪಿಕೊಂಡಿದ್ದಾರೆ. ಇದೀಗ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಶೋಯೆಬ್ ಅಖ್ತರ್‌ ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟರ್‌ ಬ್ರೆಂಡನ್ ಮೆಕ್ಕಲಂ ನನ್ನು ಹೇಗೆ ಹೆದರಿಸಿದ್ದೆ ಎನ್ನುವ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಯಲು ಮಾಡಿದ್ದಾರೆ.

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

"ನನ್ನ ಎದುರು ಬ್ಯಾಟಿಂಗ್ ಮಾಡಲು ಬ್ರೆಂಡನ್ ಮೆಕ್ಕಲಂ ಪಿಚ್‌ನತ್ತ ಬಂದರು. ನಾನು ಆಗ ಅವರ ಬಳಿ ಹೋಗಿ, 'ಹೇ, ನಿಮಗೆ ಚೆನ್ನಾಗಿ ಕಣ್ಣು ಕಾಣುತ್ತಾ? ಎಂದು ಕೇಳಿದೆ. ಆಗ ಅದಕ್ಕೆ ಮೆಕ್ಕಲಂ, 'ಹೌದು. ಅದನ್ನೇಕೆ ಕೇಳುತ್ತಿದ್ದೀರಾ? ಎಂದರು. ನಾನು ನಿಮಗೇನಾದರೂ ಶೋಯೆಬ್ ಮಲಿಕ್ ಅವರಂತೆ ಕಾಣುತ್ತಿದ್ದೇನಾ? ಎಂದು ನಗುತ್ತಾ ಕೇಳಿದೆ. ನಂತರ, "ನೀವು ನನ್ನ ಎದುರು ಮುನ್ನುಗ್ಗಿ ಆಡಲು ಹೋಗಬೇಡಿ. ನಾನು ನಿಮ್ಮ ಮೇಲೆ ಬೀಮರ್ ಎಸೆಯುತ್ತೇನೆ. ನಾನು ನಿಮ್ಮನ್ನು ಕೊಲ್ಲುತ್ತೇನೆ. ಒಂದು ವೇಳೆ ಇಲ್ಲಿ ಸಾಧ್ಯವಾಗಿಲ್ಲ ಅಂದ್ರೆ, ಖಂಡಿತವಾಗಿಯೂ ಹೋಟೆಲ್‌ನಲ್ಲಾದರೂ ನಿಮ್ಮನ್ನು ಕೊಲ್ಲುತ್ತೇನೆ" ಎಂದು ನಗುತ್ತಲೇ ಮೆಕ್ಕಲಂ ಅವರನ್ನು ಹೆದರಿಸಿದ್ದೆ ಎಂದು ಅಖ್ತರ್, ವೇಕ್ ಅಪ್‌ ವಿತ್ ಶೋರಬ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

"ನಾನು ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಎನಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಮೊಣಕಾಲುಗಳು ನನಗೆ ಸಾಥ್ ನೀಡಲಿಲ್ಲ. ನನ್ನ ಫಿಸಿಕಲ್ ಫಿಟ್ನೆಸ್‌ ನನ್ನನ್ನು ಕಾಡಲಾರಂಭಿಸಿತು. ಕಳೆದ ವರ್ಷ ನಾನು ಮಾಡಿಸಿಕೊಂಡ ಮೊಣಕಾಲು ರೀಪ್ಲೇಸ್‌ಮೆಂಟ್ ಸೇರಿದಂತೆ ಒಟ್ಟು 12 ಶಸ್ತ್ರಚಿಕಿತ್ಸೆಗಳಿಗೆ ನಾನು ಒಳಗಾಗಿದ್ದೇನೆ. ನಾನು ಯಾರು ಎನ್ನುವುದನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳಲಿದ್ದಾರೆ ಎನ್ನುವುದನ್ನು ನಂಬಿದ್ದೇನೆ" ಎಂದು ಅಖ್ತರ್ ಹೇಳಿದ್ದಾರೆ.

ಈ MNC ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ ದಾದಾ ಮಗಳು ಸನಾ ಗಂಗೂಲಿ..! ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ?

ಶೊಯೆಬ್ ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿ ಸುಮಾರು ಒಂದು ದಶಕವೇ ಕಳೆದರೂ ಇಂದಿಗೂ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತಿ ಗಂಟೆಗೆ 161.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ನಿಕ್‌ ನೈಟ್‌ ಎದುರು ಮೇಡನ್ ಸಹಿತ ವಿಶ್ವದಾಖಲೆಯ ವೇಗದ ಬೌಲಿಂಗ್ ಮಾಡಿ ಅಖ್ತರ್ ಗಮನ ಸೆಳೆದಿದ್ದರು.

ಶೋಯೆಬ್‌ ಅಖ್ತರ್‌ ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನಾಡಿ 247 ವಿಕೆಟ್ ಕಬಳಿಸಿದ್ದಾರೆ. ಇನ್ನು 46 ಟೆಸ್ಟ್ ಪಂದ್ಯಗಳನ್ನಾಡಿ 178 ವಿಕೆಟ್ ಪಡೆದಿದ್ದಾರೆ. 15 ಟಿ20 ಪಂದ್ಯಗಳಲ್ಲಿ 19 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗೆ ಅಟ್ಟಿದ್ದಾರೆ.

click me!