
ಪಲ್ಲಕೆಲೆ(ಸೆ.02) ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಪಂದ್ಯಕ್ಕೆ ಎರಡನೇ ಬಾರಿ ಮಳೆ ಅಡ್ಡಿಯಾಗಿದೆ. ಭಾರತ ಬ್ಯಾಟಿಂಗ್ ವೇಳೆ ಮಳೆ ವಕ್ಕರಿಸಿದ ಕಾರಣ ಕೆಲ ಕಾಲ ಪಂದ್ಯ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪಂದ್ಯ ಆರಂಭಗೊಂಡಿತ್ತು. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟದಿಂದ ಭಾರತ 266 ರನ್ ಸಿಡಿಸಿ ಆಲೌಟ್ ಆಗಿದೆ. 267 ರನ್ ಟಾರ್ಗೆಟ್ ಚೇಸ್ ಮಾಡಲು ಮಳೆ ಅಡ್ಡಿಯಾಗಿದೆ. ಭಾರತದ ಇನ್ನಿಂಗ್ಸ್ ಅಂತ್ಯಗೊಂಡ ಬೆನ್ನಲ್ಲೇ ಮಳೆ ಆಗಮನವಾಗಿದೆ. ಹೀಗಾಗಿ ಪಾಕಿಸ್ತಾನ ಇನ್ನಿಂಗ್ಸ್ ವಿಳಂಬವಾಗಲಿದೆ.
ಸದ್ಯ ಮಳೆ ಜೋರಾಗಿ ಸುರಿಯುತ್ತಿದೆ. ಪಿಚ್ ಹಾಗೂ ಮೈದಾನವನ್ನು ಕವರ್ ಹಾಕಿ ಮುಚ್ಚಲಾಗಿದೆ. ಹೀಗಾಗಿ ಕೆಲ ಹೊತ್ತು ಪಂದ್ಯ ಸ್ಥಗಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ನಿರ್ಧಾರ ತೆಗೆದುಕೊಂಡಿತ್ತು. ಆದರೆ 30 ರಿಂದ 35 ರನ್ ಕಡಿಮೆಯಾಗಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಕಾರಣ ಮಳೆಯಿಂದ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯಿಸಿದರೆ ಓವರ್ ಕಡಿತಗೊಳ್ಳಲಿದೆ. ಟಾರ್ಗೆಟ್ ಪರಿಷ್ಕರಣೆಯಾಗಲಿದೆ.
ಪಾಕ್ ಮಾರಕ ದಾಳಿ ನಡುವೆ ಪಾಂಡ್ಯ-ಕಿಶನ್ ಹೋರಾಟ, 267 ರನ್ ಟಾರ್ಗೆಟ್ ನೀಡಿ ಗೆಲ್ಲುತ್ತಾ ಭಾರತ?
ಪಲ್ಲೆಕೆಲೆ ಕ್ರೀಡಾಂಗಣ ಸಿಬ್ಬಂದಿ ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸಲು ಸಜ್ಜಾಗಿದ್ದಾರೆ. ಆದರೆ ಮಳೆ ಮಾತ್ರ ಬಿಡುವು ನೀಡುತ್ತಿಲ್ಲ. ಮಳೆಯಿಂದಾಗಿ ಇದೀಗ ಸೆಕೆಂಡ್ ಬ್ಯಾಟಿಂಗ್ ಸವಾಲಿನಿಂದ ಕೂಡಿರಲಿದೆ. ಭಾರತದ ದಾಳಿಗೆ ಪಾಕಿಸ್ತಾನ ದಿಟ್ಟ ಹೋರಾಟ ನೀಡುವ ವಿಶ್ವಾಸದಲ್ಲಿದೆ. ಪಾಕಿಸ್ತಾನ ಗೆಲುವಿಗೆ 267 ರನ್ ಸಿಡಿಸಬೇಕಿದೆ. ಇದೀಗ ಮಳೆ ಹಾಗೂ ಭಾರತ ಬೌಲಿಂಗ್ ದಾಳಿಗೆ ಈ ಮೊತ್ತ ಸವಾಲಾಗಿ ಪರಿಣಮಿಸಲಿದೆ.
ಸದ್ಯ ಮಳೆ ನಿಂತಿದೆ. ಮೈದಾನ ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಪಂದ್ಯ ಆರಂಭಗೊಳ್ಳುವ ಲಕ್ಷಣ ಗೋಚರಿಸಿದೆ. ಹೀಗಾಗಿ ಓವರ್ ಕಡಿತಗೊಳ್ಳುವ ಸಾಧ್ಯತೆಗಳು ಕಡಿಮೆ.
ಭಾರತ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಪಾಕ್ ವಿರುದ್ಧ ಭಾರತದ ಕಳಪೆ ಆಟ ಟ್ರೋಲ್ ನಡುವೆ ದಾಖಲೆ ಬರೆದ ಪಾಂಡ್ಯ-ಕಿಶನ್!
ಪಾಕಿಸ್ತಾನ ಪ್ಲೇಯಿಂಗ್ 11
ಫಕರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್, ಅಘಾ ಸಲ್ಮಾನ್, ಇಫ್ತಿಕಾರ್ ಅಹಮ್ಮದ್, ಶದಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್
ಪಾಕಿಸ್ತಾನ ಬ್ಯಾಟಿಂಗ್‌ನಲ್ಲೂ ಉತ್ತಮ ಲಯ ಕಂಡುಕೊಂಡಿದೆ. ಫಕರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಹೀಗಾಗಿ ಭಾರತಕ್ಕೂ ಕಠಿಣ ಸವಾಲು ಎದುರಾಗಲಿದೆ. ಒತ್ತಡವನ್ನು ನಿಭಾಯಿಸಿ ದಿಟ್ಟ ಹೋರಾಟ ನೀಡುವ ತಂಡ ಗೆಲುವಿನ ದಡ ಸೇರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.