Asia cup 2022 ಪಾಕ್ ವಿರುದ್ಧ ಆಫ್ಘಾನ್ ಗೆದ್ದರೆ ಭಾರತಕ್ಕಿದೆಯಾ ಫೈನಲ್ ಅವಕಾಶ?

Published : Sep 07, 2022, 08:22 PM IST
Asia cup 2022 ಪಾಕ್ ವಿರುದ್ಧ ಆಫ್ಘಾನ್ ಗೆದ್ದರೆ ಭಾರತಕ್ಕಿದೆಯಾ ಫೈನಲ್ ಅವಕಾಶ?

ಸಾರಾಂಶ

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸತತ ಪಂದ್ಯಗಳನ್ನು ಸೋತು ತೀವ್ರ ಹಿನ್ನಡೆ ಅನುಭವಿಸಿದೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಬಾಗಿಲು ಮುಚ್ಚಿಲ್ಲ.  ಕೊನೆಯ ಅವಕಾಶದ ಮೂಲಕ ಫೈನಲ್ ಪ್ರವೇಶಲು ಟೀಂ ಇಂಡಿಯಾಗೆ ಅವಕಾಶವಿದೆ. ಪಾಕಿಸ್ತಾನ ವಿರುದ್ದ ಆಫ್ಘಾನಿಸ್ತಾನ ಗೆಲುವು ದಾಖಲಿಸಿದರೆ ಭಾರತ ಫೈನಲ್ ಪ್ರವೇಶಿಸುತ್ತಾ? ಟೀಂ ಇಂಡಿಯಾ ಚಾನ್ಸ್ ಕುರಿತು ಮಾಹಿತಿ ಇಲ್ಲಿದೆ.  

ದುಬೈ(ಸೆ.07): ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿಯಾಗಿ ಆರಂಭ ಪಡೆದು ಬಳಿಕ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ ಇದೀಗ ಫೈನಲ್ ಪ್ರವೇಶದ ಹಾದಿಯನ್ನು ಎದುರ ನೋಡುತ್ತಾ ಕುಳಿತಿದೆ. ಇನ್ನುಳಿದಿರುವ ಪಂದ್ಯ ಹಾಗೂ ಇತರ ತಂಡಗಳ ಮೇಲಿನ ಫಲಿತಾಂಶ ಲೆಕ್ಕಾಚಾರ ಹಾಕುತ್ತಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಫೈನಲ್ ಹಾದಿ ಸಂಪೂರ್ಣವಾಗಿ ಮುಚ್ಚಿಲ್ಲ. ಹಾಗಂತ ಹೆದ್ದಾರಿ ರೀತಿ ತೆರೆದುಕೊಂಡಿಲ್ಲ. ಇದಕ್ಕಾಗಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಬೇಕು, ಜೊತೆಗೆ ಇತರ ತಂಡದ ಫಲಿತಾಂಶವೂ ಭಾರತಕ್ಕೆ ವರವಾಗಬೇಕಿದೆ. ಈ ಲೆಕ್ಕಾಚಾರದ ಮೊದಲ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ತಾನ ಗೆಲುವು ದಾಖಲಿಸಬೇಕು. ಇದು ಮೊದಲನೇ ಹಾಗೂ ಅತ್ಯಂತ ಮಹತ್ವದ ವಿಚಾರ. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲುವು ದಾಖಲಿಸಿದರೆ, ಭಾರತದ ಫೈನಲ್ ಪ್ರವೇಶದ ಅವಕಾಶ ತೆರೆದುಕೊಳ್ಳಲಿದೆ. ಒಂದು ವೇಳೆ ಪಾಕಿಸ್ತಾನ ಗೆಲುವು ದಾಖಲಿಸಿದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ. ಇಷ್ಟೇ ಅಲ್ಲ ಭಾರತದ ಜೊತೆಗೆ ಆಫ್ಘಾನಿಸ್ತಾನವೂ ಮನೆಗೆ ಟಿಕೆಟ್ ಬುಕ್ ಮಾಡಬೇಕಿದೆ.

ಭಾರತಕ್ಕೆ ಚಾನ್ಸ್‌ ಹೇಗಿದೆ?
1. ಇಂದು ಪಾಕಿಸ್ತಾನ ವಿರುದ್ಧ ಆಫ್ಘನ್‌ ಗೆಲ್ಲಬೇಕು.
2. ಆಫ್ಘನ್‌ ವಿರುದ್ಧ ಭಾರತ ಗೆಲ್ಲಬೇಕು.
3. ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಗೆಲ್ಲಬೇಕು.
4. ಆಫ್ಘನ್‌, ಪಾಕ್‌ಗಿಂತ ಭಾರತ ಉತ್ತಮ ನೆಟ್‌ ರನ್‌ರೇಟ್‌ ಹೊಂದಬೇಕು.

ಕೊನೇ ಓವರ್‌ನಲ್ಲಿ ಡೈರೆಕ್ಟ್‌ ಹಿಟ್‌ ಮಿಸ್‌ ಮಾಡಿದ ಪಂತ್‌, ಟ್ವಿಟರ್‌ನಲ್ಲಿ Miss You MS Dhoni ಟ್ರೆಂಡ್‌!

ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ತಾನ(Pakistan vs Afghanistan) ಗೆಲುವು ಸಾಧಿಸಲೇ ಬೇಕು. ಹಾಗಂತ ಆಫ್ಘಾನಿಸ್ತಾನ ಭಾರಿ ಅಂತರದ ಗೆಲುವು ಸಾಧಿಸಿದರೂ ಕಷ್ಟ. ಇನ್ನು ಸೂಪರ್ 4 ಹಂತದಲ್ಲಿ ಭಾರತಕ್ಕೆ(Team India) ಕೊನೆಯ ಪಂದ್ಯ ಒಂದು ಉಳಿದಿದೆ. ಆಫ್ಘಾನಿಸ್ತಾನ ವಿರುದ್ದ ಭಾರತ ಕೊನೆಯ ಸೂಪರ್ 4 ಹಂತದ(Supre 4) ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಭಾರತ ಭಾರೀ ಅಂತರದ ಗೆಲುವು ಸಾಧಿಸಬೇಕು. ಇಷ್ಟಕ್ಕೆ ಭಾರತದ ಹಾದಿ ಸುಗಮವಾಗಲ್ಲ. ಇನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ(Sri Lanka) ನಡುವಿನ ಸೂಪರ್ 4 ಹಂತದ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಬೇಕು. ಭಾರತದ ಫೈನಲ್ ಪ್ರವೇಶಕ್ಕೆ ಇನ್ನೊಂದು ಒಂದು ಹಂತ ಬಾಕಿ ಇದೆ. ಅದೇನೆಂದರೆ ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನಕ್ಕಿಂತ ಭಾರತ ಉತ್ತಮ ನೆಟ್ ರನ್‌ರೇಟ್(Net runrate) ಹೊಂದಿರಬೇಕು. ಇವಿಷ್ಟು ಲೆಕ್ಕಾಚಾರಗಳು ಅಂದುಕೊಂಡಂತೆ ನಡೆದರೆ ಭಾರತ ಫೈನಲ್ ಪ್ರವೇಶಿಸಲಿದೆ. 

ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಫೈನಲ್ ಪ್ರವೇಶ ಲೆಕ್ಕಾಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾ ಕೊನೆಯ ಅವಕಾಶವನ್ನು ಬಳಸಿಕೊಂಡು ಫೈನಲ್ ಪ್ರವೇಶಿಸಲಿ ಎಂದು ಹಲವರು ಹಾರೈಸಿದ್ದಾರೆ. ಆದರೆ ಮತ್ತೆ ಕೆಲವರು ಇಷ್ಟು ಕಸರತ್ತು ಮಾಡಿ ಫೈನಲ್ ಪ್ರವೇಶಕ್ಕಿಂತ ಕ್ರಿಕೆಟಿಗರಿಗೆ ವಿಮಾನದ ಟಿಕೆಟ್ ಫೈನಲ್ ಮಾಡಿಕೊಡಿ ಎಂದಿದ್ದಾರೆ.  

 ಸುಮ್ನೆ ಟೆನ್ಶನ್‌ ತಗೋಬೇಡಿ, ಫೈನಲ್‌ಗೆ ಹೋಗ್ತೇವೆ: ರೋಹಿತ್ ಶರ್ಮ

ಟೀಂ ಇಂಡಿಯಾ(Team India) ಕ್ರಿಕೆಟಿಗರು ಫೈನಲ್(Asia Cup Final) ಪ್ರವೇಶಕ್ಕೆ ಹೋರಾಡುವುದಕ್ಕಿಂತ ಏರ್ ಇಂಡಿಯಾದ ಕಿಟಕಿ ಸೀಟಿಗಾಗಿ ಹೋರಾಡಿದ್ದೇ ಹೆಚ್ಚಾಗಿದೆ. ಹೀಗಾಗಿ ಫೈನಲ್ ಪ್ರವೇಶಿಸಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಸತತ ಎರಡು ಪಂದ್ಯದಲ್ಲಿ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಸೋಲು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಈ ಎರಡು ಸೋಲಿನಿಂದ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಿಂದ ನಿರ್ಗಮಿಸುವ ಹಂತದಲ್ಲಿದೆ. ಇದೀಗ ಇತರರ ಫಲಿತಾಂಶದ ಮೇಲೆ ಅವಲಂಬಿಸಿ ಆಕಾಶ ನೋಡುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?