BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!

By Naveen Kodase  |  First Published Jul 3, 2023, 2:48 PM IST

* ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್ ತಂಡ ಭಾಗಿ
* ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗಿ
* ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್ ಧವನ್‌ಗೆ ನಾಯಕ ಪಟ್ಟ?


ಬೆಂಗಳೂರು(ಜು.03) ಕೆಲ ವರ್ಷಗಳ ಹಿಂದೆ ಶಿಖರ್ ಧವನ್, ಒನ್​ಡೇ ಫಾರ್ಮ್ಯಾಟ್​ನಲ್ಲಿ ಟೀಂ ಇಂಡಿಯಾದ ಕೀ ಪ್ಲೇಯರ್ ಆಗಿದ್ರು. ಆದ್ರೆ, ಸದ್ಯ ತಂಡದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ಗೆ ಸ್ಥಾನವಿಲ್ಲ. ಅದ್ಭುತ ದಾಖಲೆ, ಫಿಟ್​​ನೆಸ್ ಎಲ್ಲಾ ಇದ್ರು ಧವನ್​ರನ್ನು ಭಾರತ ತಂಡದಿಂದ ಡ್ರಾಪ್ ಮಾಡಲಾಗಿದೆ. ಆದ್ರಿಗ BCCIಗೆ ಮತ್ತೆ ಶಿಖರ್ ಧವನ್ ಬೇಕಾಗಿದ್ದಾರೆ. 

ಯೆಸ್, ಯಾರೂ ಇಲ್ಲದಾಗ ಮಾತ್ರ BCCIಗೆ ಧವನ್ ನೆನಪಾಗ್ತಾರೆ. ಬೇರೆ ಸೀನಿಯರ್ ಆಟಗಾರರು ರೆಸ್ಟ್​​ನಲ್ಲಿದ್ದಾಗ, ಅವರು ಅಲಭ್ಯರಿದ್ದಾಗ ಮಾತ್ರ  ಧವನ್​ ಇದ್ದಾನಲ್ಲ ಅನ್ನೋದು ನೆನಪಾಗುತ್ತೆ. ಕೆಲಸಕ್ಕೆ ಬಾರದ ಟೂರ್ನಿಗಳಲ್ಲಿ ಧವನ್​ಗೆ ಯುವಪಡೆಯನ್ನ ಮುನ್ನಡೆಸೋ ಜವಬ್ದಾರಿ ವಹಿಸುತ್ತೆ. ಅದರಂತೆ ಮತ್ತೊಮ್ಮೆ ಧವನ್​ಗೆ ನಾಯಕನ ಪಟ್ಟ ಕಟ್ಟಲು BCCIಯೋಚಿಸ್ತಿದೆ. 

Latest Videos

undefined

ಏಷ್ಯನ್​ ಗೇಮ್ಸ್​ ತಂಡಕ್ಕೆ ಧವನ್ ಕ್ಯಾಪನ್ಟ್..?

ಯೆಸ್, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ, ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡಯಲಿದೆ. ಇದೇ ಮೊದಲ ಬಾರಿ ಈ ಕ್ರೀಡಾಕೂಟಕ್ಕೆ ಟೀಂ ಇಂಡಿಯಾವನ್ನ ಕಳಿಸಲು BCCI ರೆಡಿಯಾಗಿದೆ. ಆದ್ರೆ, ವಿಶ್ವಕಪ್ ಟೂರ್ನಿ ಇರೋದ್ರಿಂದ ಏಷ್ಯನ್​ ಗೇಮ್ಸ್​​ನಲ್ಲಿ ಯುವಪಡೆಯನ್ನ ಆಯ್ಕೆ ಮಾಡಬೇಕು.  ಆ ತಂಡಕ್ಕೆ ಶಿಖರ್‌ ಧವನ್​ರನ್ನ ಕ್ಯಾಪ್ಟನ್ ಮಾಡ್ಬೇಕು ಅನ್ನೋದು BCCI ಪ್ಲಾನ್ ಆಗಿದೆ. 

Ashes 2023: ಲಾರ್ಡ್ಸ್‌ ಟೆಸ್ಟ್‌ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್‌; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!

ಈ ಹಿಂದೆ ಒಟ್ಟು 3 ಬಾರಿ ಶಿಖರ್ ಧವನ್ ಸೆಕೆಂಡ್ ಸ್ಟ್ರಿಂಗ್ ತಂಡದ ನಾಯಕತ್ವ ವಹಿಸಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಶಿಖರ್‌ ಧವನ್​ಗೆ ಮೊದಲ ಬಾರಿ ತಂಡವನ್ನ ಮುನ್ನಡೆಸಿದ್ರು. ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಧವನ್ ಯುವಪಡೆಯ ನಾಯಕರಾಗಿದ್ರು. 

ಧವನ್ ದಾಖಲೆ, ಸಾಧನೆಗೆ ಬೆಲೆನೇ ಇಲ್ವಾ..? 

ಯೆಸ್, ಸದ್ಯ ಟೀಂ ಇಂಡಿಯಾದಲ್ಲಿ ಎಡಗೈ ಬ್ಯಾಟ್ಸ್​ಮನ್ ಕೊರತೆ ಕಾಡ್ತಿದೆ. ಏಕದಿನ ವಿಶ್ವಕಪ್​ನಲ್ಲಿ ಟಾಪ್ ಆರ್ಡರ್​ನಲ್ಲಿ ಮಿಂಚಬಲ್ಲ ಎಡಗೈ ಬ್ಯಾಟ್ಸ್​​ಮನ್​ಗಾಗಿ ತಂಡಕ್ಕೆ ಬೇಕಾಗಿದ್ದಾನೆ. ಇದಕ್ಕಾಗಿ ಹುಡುಕಾಟ ನಡೆದಿದೆ. ಆದ್ರೆ, ಪ್ಲೇಯರ್ ಆಫ್ ICC ಇವೆಂಟ್ಸ್ ಧವನ್ ಮಾತ್ರ, BCCIಗೆ ಕಣ್ಣಿಗೆ ಕಾಣ್ತಿಲ್ಲ. 

ICC ಟೂರ್ನಿಗಳಲ್ಲಿ ಧವನ್​ ಜಬರ್​ದಸ್ತ್ ಪ್ರದರ್ಶನ ನೀಡಿದ್ದಾರೆ. ಇದಕ್ಕೆ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯೇ ಸಾಕ್ಷಿ. 5 ಇನ್ನಿಂಗ್ಸ್​ಳಲ್ಲಿ ಬ್ಯಾಟ್ ಬೀಸಿದ್ದ ಧವನ್, 90.75ರ ಸರಾಸರಿಯಲ್ಲಿ 363 ರನ್ ಕಲೆಹಾಕಿದ್ರು. ಟೂರ್ನಿಯಲ್ಲಿ ಅತ್ಯಧಿಕ ರನ್​ಗಳಿಸಿದವ್ರ ಪಟ್ಟಿಯಲ್ಲಿ ನಂ.1 ಸ್ಥಾನ ಅಲಂಕರಿಸಿದ್ರು. ಇಷ್ಟು ಅದ್ಭುತ ದಾಖಲೆ ಹೊಂದಿರೋ ಧವನ್​ರನ್ನ ವಯಸ್ಸಿನ ಕಾರಣದಿಂದಾಗಿ ತಂಡದಿಂದ ಕೈ ಬಿಡಲಾಗಿದೆ. ಆದ್ರೆ, 37ನೇ ವಯಸ್ಸಿನಲ್ಲೂ IPL​ನಲ್ಲಿ ಧವನ್ ಮಿಂಚ್ತಿದ್ದಾರೆ. 
 
ಇನ್ನು ಕಾಲ ಮಿಂಚಿಲ್ಲ, ಏಷ್ಯನ್ ಗೇಮ್ಸ್​ಗೆ ಯುವ ಆಟಗಾರನಿಗೆ ನಾಯಕನ ಪಟ್ಟ ಕಟ್ಟಿ, ಏಕದಿನ ವಿಶ್ವಕಪ್ ತಂಡದಲ್ಲಿ ಧವನ್​ಗೆ ಸ್ಥಾನ ನೀಡಬೇಕು. ವಿಶ್ವಕಪ್ ಟೂರ್ನಿಯಲ್ಲಿ ಧವನ್​ಗೆ ಸೆಂಡ್​ ಆಫ್ ನೀಡಬೇಕು. ಆದ್ರೆ, ಬಿಸಿಸಿಐಗೆ ಇಂತದೊಂದು ಮನಸ್ಸು ಮಾಡುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

click me!