ಚರ್ಚೆಗೆ ಗ್ರಾಸವಾದ ಜಾನಿ ಬೇರ್‌ಸ್ಟೋವ್ ವಿವಾದಾತ್ಮಕ ಔಟ್
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ನಡೆದ ಘಟನೆ
ಕ್ರೀಡಾಸ್ಪೂರ್ತಿಗೆ ಮತ್ತೊಂದು ಹೆಸರು ಮಹೇಂದ್ರ ಸಿಂಗ್ ಧೋನಿ
ಬೆಂಗಳೂರು(ಜು.04): ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿ ಆಟಕ್ಕಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗ್ತಿದೆ. ಅದರಲ್ಲೂ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ವಿಚಿತ್ರ ರೀತಿಯಲ್ಲಿ ಔಟಾದ್ರು. ಇದೇ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್ ಆಗಿದೆ. ಇಂಗ್ಲೆಂಡ್ ಅಭಿಮಾನಿಗಳಂತೂ ಆಸ್ಟ್ರೇಲಿಯಾ ತಂಡದ ವಿರುದ್ಧ ಕೆಂಡಕಾರುತ್ತಿದ್ದಾರೆ. ಆಸೀಸ್ ಮೋಸದಾಟದ ಮೂಲಕ ಪಂದ್ಯ ಗೆದ್ದಿದೆ ಅಂತ ಆರೋಪಿಸ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನಂದ್ರೆ, ಇಂಗ್ಲೆಂಡ್ 2ನೇ ಇನ್ನಿಂಗ್ಸ್ 52ನೇ ಓವರ್ನಲ್ಲಿ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ, ಜಾನಿ ಬೇರ್‌ಸ್ಟೋವ್ ಬ್ಯಾಟಿಂಗ್ ಮಾಡ್ತಿದ್ರು. ಈ ವೇಳೆ ಗ್ರೀನ್ ಎಸೆದ ಬೌನ್ಸರ್ನಿಂದ ಬೇರ್ ಸ್ಟೋವ್ ತಪ್ಪಿಸಿಕೊಳ್ತಾರೆ. ಬಾಲ್ ಸೀದಾ ಕೀಪರ್ ಅಲೆಕ್ಸ್ ಕೇರಿ ಕೈ ಸೇರುತ್ತೆ. ಆದ್ರೆ, ಬಾಲ್ ಡೆಡ್ ಆಗದೇ ಇದ್ದರೂ, ಬೇರ್‌ಸ್ಟೋವ್ ಕ್ರೀಸ್ ಬಿಟ್ಟು ಮುಂದೆ ಬರ್ತಾರೆ. ಸಾಮಾನ್ಯವಾಗಿ ಬಾಲ್ ಲೀವ್ ಮಾಡಿದ್ಮೇಲೆ, ಯಾವುದೇ ಬ್ಯಾಟ್ಸ್ಮನ್ ಕ್ರೀಸಲ್ಲಿ ಬ್ಯಾಟ್ ಇಟ್ಟೋ ಇಲ್ಲ ಅಂದ್ರೆ, ಲೆಗ್ ಅಂಪೈರ್ಗೆ ಸನ್ನೆ ಮಾಡಿಯೋ ಕ್ರೀಸ್ ಬಿಡ್ತಾರೆ. ಆದ್ರೆ, ಬೇರ್‌ಸ್ಟೋವ್ ಇದ್ಯಾವುದನ್ನ ಮಾಡಲ್ಲ. ಇದರಿಂದ ಅಲೆಕ್ಸ್ ಕೇರಿ ರನೌಟ್ ಮಾಡಿ ಅಪೀಲ್ ಮಾಡ್ತಾರೆ. ಆನ್ಫೀಲ್ಡ್ ಅಂಪೈರ್ಸ್ ಥರ್ಡ್ ಅಂಪೈರ್ಗೆ ರೆಫರ್ ಮಾಡ್ತಾರೆ.
undefined
ಬೇರ್‌ಸ್ಟೋವ್ ರನ್ಗಾಗಿ ಓಡದೇ ಇದ್ದದರಿಂದ, ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡ್ತಾರೆ ಅಂತ ಇಂಗ್ಲೆಂಡ್ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ, ಬಾಲ್ ಡೆಡ್ ಆಗದೇ ಇದ್ರು, ಬೇರ್ಸ್ಟೋ ಕ್ರೀಸ್ ಬಿಟ್ಟಿದ್ದರಿಂದ ಅಂಪೈರ್ ಸ್ಟಂಪ್ ಔಟೆಂದು ಪರಿಗಣಿಸಿ, ಔಟ್ ಅಂತ ತೀರ್ಪು ನೀಡಿದ್ರು.
Jonny Bairstow’s dismissal… thoughts? 👍👎 pic.twitter.com/x5Uv3Qg3Kc
— Wisden (@WisdenCricket)Ashes 2023: ಆಸಿಸ್ ಸ್ಪಿನ್ನರ್ ಲಯನ್ ಕೆಚ್ಚೆದೆಯ ಹೋರಾಟಕ್ಕೆ ಕ್ರಿಕೆಟ್ ಜಗತ್ತು ಫಿದಾ..!
ಯೆಸ್, ರೂಲ್ಸ್ ಪ್ರಕಾರ ಆಸ್ಟ್ರೇಲಿಯಾ ಮಾಡಿದ್ದು ಸರಿ. ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕ್ರೀಡಾಸ್ಫೂರ್ತಿ ವಿರುದ್ಧವಾಗಿ ಆಸಿಸ್ ನಡೆದುಕೊಂಡಿದೆ. ಇದರಿಂದ ಇಂಗ್ಲೆಂಡ್ ಫ್ಯಾನ್ಸ್, ಹಾಲಿ ಮತ್ತು ಮಾಜಿ ಆಟಗಾರರು ಆಸಿಸ್ ತಂಡದ ಕ್ರೀಡಾಸ್ಫೂರ್ತಿಯನ್ನ ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿಯ ಕ್ರೀಡಾಸ್ಫೂರ್ತಿಯನ್ನ ಹಾಡಿ ಹೊಗಳ್ತಿದ್ದಾರೆ.
ಪ್ಯಾಟ್ ಕಮಿನ್ಸ್ ಧೋನಿನ ನೋಡಿ ಕಲಿಯಿರಿ..!
ಯೆಸ್, ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2011ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ಸರಣಿಯ 2ನೇ ಟೆಸ್ಟ್ನಲ್ಲಿ ಮೂರನೇ ದಿನ ಒಂದು ಹೈಡ್ರಾಮಾ ನಡೆಯುತ್ತೆ. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ, ಇಯಾನ್ ಬೆಲ್, ಸ್ಕ್ವೇರ್ ಲೆಗ್ನಲ್ಲಿ ಶಾಟ್ ಬಾರಿಸ್ತಾರೆ. ಆದ್ರೆ, ಬೌಂಡರಿ ಲೈನ್ ಬಳಿ ಪ್ರವೀಣ್ ಕುಮಾರ್ ಡೈವ್ ಮೂಲಕ ಬಾಲ್ನ ತಡೆಯುತ್ತಾರೆ.
ಸೆಕ್ಯೂರಿಟಿ ಗಾರ್ಡ್‌ಗೆ ಲಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್ ಧೋನಿ..! ಹಳೆ ವಿಡಿಯೋ ವೈರಲ್..!
ಆದ್ರೆ, ಇಯಾನ್ ಬೆಲ್ ಬೌಂಡರಿ ಹೋಗಿದೆ ಅಂತ ಭಾವಿಸ್ತಾರೆ. ಇದರಿಂದ 3 ರನ್ ಓಡಿ, 4ನೇ ರನ್ ತೆಗೆಯುವಾಗ ಕ್ರೀಸ್ ತಲುಪದೇ ಟೀ ಬ್ರೇಕ್ಗಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕ್ತಾರೆ. ಆದ್ರೆ, ಧೋನಿ ಸ್ಟಂಪ್ ಬೆಲ್ಸ್ ಎಗರಿಸಿ ಔಟ್ಗಾಗಿ ಮನವಿ ಮಾಡ್ತಾರೆ. ಆನ್ಫೀಲ್ಡ್ ಅಂಪೈರ್ಸ್ ಥರ್ಡ್ ಅಂಪೈರ್ಗೆ ರೆಫರ್ ಮಾಡ್ತಾರೆ. ಥರ್ಡ್ ಅಂಪೈರ್ ಔಟ್ ಅಂತ ತೀರ್ಪು ನೀಡ್ತಾರೆ. ಇಯಾನ್ ಬೆಲ್ ನಿರಾಸೆಯಿಂದ ಪೆವಿಲಿಯನ್ ಸೇರ್ತಾರೆ.
MS Dhoni called Ian Bell back and asked him to carry on batting even after he was dismissed run out at Trent Bridge in 2011 ♥️pic.twitter.com/2Vx3o60uCg
— Farid Khan (@_FaridKhan)ಟೀ ಬ್ರೇಕ್ನಲ್ಲಿ ಇಂಗ್ಲೆಂಡ್ ಕೋಚ್ ಆ್ಯಂಡಿ ಫ್ಲವರ್ ಮತ್ತು ಆ್ಯಂಡ್ರು ಸ್ಟ್ರಾಸ್ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ತೆರಳುತ್ತಾರೆ. ಇಯಾನ್ ಬೆಲ್ ಔಟ್ ಮನವಿಯನ್ನ ವಾಪಸ್ ಪಡೆಯುವಂತೆ ಧೋನಿಯನ್ನ ಕೇಳಿಕೊಳ್ಳುತ್ತಾರೆ. ಇಂಗ್ಲೆಂಡ್ ಮನವಿಗೆ ಒಪ್ಪಿ ಧೋನಿ ತಮ್ಮ ಮನವಿಯನ್ನ ವಾಪಸ್ ಪಡೆದುಕೊಳ್ತಾರೆ. ನಂತರ ಇಯಾನ್ ಬೆಲ್ ಮತ್ತೆ ಕ್ರೀಸ್ಗಿಳಿಯುತ್ತಾರೆ. ಧೋನಿಯ ಕ್ರೀಡಾಸ್ಫೂರ್ತಿಗೆ ಫ್ಯಾನ್ಸ್ ಫಿದಾ ಆಗ್ತಾರೆ. ಐಸಿಸಿ ಧೋನಿಗೆ ಸ್ಪಿರಿಟ್ ಆಫ್ ದಿ ಕ್ರಿಕೆಟರ್ ಅವಾರ್ಡ್ ನೀಡಿ ಗೌರವಿಸುತ್ತೆ.
ಒಟ್ಟಿನಲ್ಲಿ ನಮಗೆ ಗೆಲ್ಲೋದಷ್ಟೇ ಮುಖ್ಯ. ಕ್ರೀಡಾಸ್ಫೂರ್ತಿ ಲೆಕ್ಕಕ್ಕಿಲ್ಲ ಅನ್ನೋ ಆಸಿಸ್ ಕ್ಯಾಪ್ಟನ್ ಒಂದು ಕಡೆಯಾದ್ರೆ, ತಂಡ ಸೋಲಿನ ಸುಳಿಗೆ ಸಿಲುಕಿದ್ರು ಕ್ರೀಡಾಸ್ಫೂರ್ತಿ ಮೆರೆದಿದ್ದ ಧೋನಿ ಮತ್ತೊಂದು ಕಡೆ.