ಹಳೆಯ ಖದರ್ಗೆ ಮರಳಿದ ಶಾಹೀನ್ ಅಫ್ರಿದಿ..!
2021ರ T20 ವಿಶ್ವಕಪ್ನಲ್ಲಿ ಮಿಂಚಿದ್ದ ಎಡಗೈ ವೇಗಿ..!
ಬೆಂಗಳೂರು(ಜು.04) ಏಕದಿನ ವಿಶ್ವಕಪ್ ಸಮರ ಆರಂಭಕ್ಕೆ ಇನ್ನು ಮೂರು ತಿಂಗಳು ಬಾಕಿಯಿದೆ. ಆದ್ರೆ, ಈಗಿನಿಂದಲೇ ವಲ್ಡ್ಕಪ್ ಫೀವರ್ ಶುರುವಾಗಿದೆ. ಅದರಲ್ಲೂ ಬದ್ಧವೈರಿಗಳಾದ ಭಾರತ- ಪಾಕಿಸ್ತಾನ ಮ್ಯಾಚ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ.
ಅಕ್ಟೋಬರ್ 15 ರಂದು ಇಂಡೋ- ಪಾಕ್ ವಾರ್ ನಡೆಯಲಿದೆ. ಹೈವೋಲ್ಟೇಜ್ ಫೈಟ್ಗೆ ಅಹಮದಾಬಾದ್ನ ನಮೋ ಸ್ಟೇಡಿಯಂ ಸಾಕ್ಷಿಯಾಗಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ವಿಶ್ವಕಪ್ ರಣರಂಗದಲ್ಲಿ ಗೆಲುವಿನ ಬಾವುಟ ಹಾರಿಸಲು ಈಗಿನಿಂದಲೇ ರಣತಂತ್ರ ರೂಪಿಸ್ತಿವೆ. ಆದ್ರೆ, ಟೀಂ ಇಂಡಿಯಾ ಬ್ಯಾಟರ್ಗಳಿಗೆ, ಪಾಕ್ನ ಈ ಬೌಲರ್ನ ಹೇಗೆ ಎದುರಿಸೋದು ಅನ್ನೋದೆ ದೊಡ್ಡ ಚಿಂತೆಯಾಗಿದೆ.
undefined
ಹಳೆಯ ಖದರ್ಗೆ ಮರಳಿದ ಶಾಹೀನ್ ಅಫ್ರಿದಿ..!
ಯೆಸ್, ಇಂಜುರಿಯಿಂದಾಗಿ ಕಳೆದ ವರ್ಷ ಶಾಹೀನ್ ಅಫ್ರಿದಿ ಏಷ್ಯಾಕಪ್ ಆಡಿರಲಿಲ್ಲ. T20 ವಿಶ್ವಕಪ್ ಆಡಿದ್ರು, ಇಂಪ್ಯಾಕ್ಟ್ಫುಲ್ ಪ್ರದರ್ಶನ ನೀಡಿರಲಿಲ್ಲ. ಆದ್ರೀಗ, ಈ ಎಡಗೈ ವೇಗಿ ಮತ್ತೆ ಫಾರ್ಮ್ಗೆ ಬಂದಿದ್ದಾನೆ. ಇಂಗ್ಲೆಂಡ್ T20 ಬ್ಲಾಸ್ಟ್ ಲೀಗ್ನಲ್ಲಿ ನಾಟಿಂಗ್ಹ್ಯಾಮ್ಶೈರ್ ಪರ ಖತರ್ನಾಕ್ ಬೌಲಿಂಗ್ನಿಂದ ಮಿಂಚ್ತಿದ್ದಾನೆ. ವಾರ್ವಿಕ್ಶೈರ್ ವಿರುದ್ದದ ಪಂದ್ಯದಲ್ಲಿ ಅಫ್ರಿದಿ, ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ 4 ವಿಕೆಟ್ ಬೇಟೆಯಾಡಿದ್ದಾನೆ. ಆ ಮೂಲಕ T20 ಕ್ರಿಕೆಟ್ನ ಮೊದಲ ಓವರ್ನಲ್ಲೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆ ಬರೆದಿದ್ದಾನೆ.
BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!
ಮೊದಲಿಗೆ ಅಲೆಕ್ಸ್ನ ಡೆವಿಸ್ನ LBW ಬಲೆಗೆ ಬೀಳಿಸಿದ ಅಫ್ರಿದಿ, ನಂತರ ಕ್ರಿಸ್ ಬೆಂಜಮಿನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಡ್ಯಾನ್ಸ್ ಮೌಸ್ಲಿ ಕ್ಯಾಚ್ ನೀಡಿ ಔಟಾದ್ರೆ, ಎಡ್ ಬರ್ನಾರ್ಡ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ದಾರಿ ಹಿಡಿದ್ರು.
2021ರ T20 ವಿಶ್ವಕಪ್ನಲ್ಲಿ ಮಿಂಚಿದ್ದ ಎಡಗೈ ವೇಗಿ..!
T20 ವಿಶ್ವಕಪ್ನಲ್ಲಿ ಇಂಜುರಿ ಮಧ್ಯೆಯೇ ಶಾಹೀನ್ ಬೌಲಿಂಗ್ ಮಾಡಿದ್ರು. ಇದ್ರಿಂದ ತಮ್ಮ ಖದರ್ಗೆ ತಕ್ಕಂತೆ ಅಬ್ಬರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, 2021ರ ಟಿ20 ವಿಶ್ವಕಪ್ನಲ್ಲಿ ಶಾಹೀನ್ ಅಫ್ರಿದಿ, ಭಾರತದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ವಿಲನ್ ಆಗಿದ್ರು. ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಆಫ್ರೀದಿ ಬೌಲಿಂಗ್ನಲ್ಲಿ ಆಡಲಾಗದೆ ವಿಕೆಟ್ ಒಪ್ಪಿಸಿದ್ರು.
ಮೊದಲೇ ಭಾರತೀಯ ಬ್ಯಾಟರ್ಸ್ ಎಡಗೈ ವೇಗಿಗಳ ವಿರುದ್ಧ ಆಡಲು ಪರದಾಡ್ತಾರೆ. ಅಂತದ್ರಲ್ಲಿ, ಶಾಹೀನ್ ಅಫ್ರಿದಿಯ ಈ ಫಾರ್ಮ್ ನೋಡಿದ್ರೆ, ಮುಂಬರೋ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಭಾರತದ ಬ್ಯಾಟರ್ಸ್ಗೆ ಕಂಟಕ ತಪ್ಪಿದ್ದಲ್ಲ.