
ಕೋಲ್ಕತಾ(ಏ.23): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ 2023 ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸಿಎಸ್‌ಕೆ ನೀಡಿದ್ದ 236 ರನ್ ಬೃಹತ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಕೆಕೆಆರ್, 186ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 49 ರನ್ ಗೆಲುವು ದಾಖಲಿಸಿದ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಬೃಹತ್ ಟಾರ್ಗೆಟ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಪ್ರತಿ ಎಸೆತದಲ್ಲಿ ಬೌಂಡರಿ ಸಿಕ್ಸರ್ ಸಿಡಿಸುವ ಅನಿವಾರ್ಯ ಎದುರಾಗಿತ್ತು. ಹೀಗಾಗಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗ ಕೆಕೆಆರ್ ವಿಕೆಟ್ ಕಳೆದುಕೊಂಡಿತು. ಸುನಿಲ್ ನರೈನ್ 3 ಎಸೆತ ಎದುರಿಸಿ ಡಕೌಟ್ ಆದರು. ಎನ್ ಜಗದೀಶನ್ ಕೇವಲ 1 ರನ್ ಸಿಡಿಸಿ ನಿರಾಸೆ ಮೂಡಿಸಿದರು.
IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!
ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಹೋರಾಟದಿಂದ ಕೆಕೆಆರ್ ಚೇತರಿಸಿಕೊಂಡಿತು. ಆದರೆ ಅಯ್ಯರ್ 20 ರನ್ ಸಿಡಿಸಿ ನಿರ್ಗಮಿಸಿದರೆ, ರಾಣಾ 27 ರನ್ ಸಿಡಿಸಿ ಔಟಾದರು. 70 ರನ್‌ಗಳಿಗೆ ಕೆಕೆಆರ್ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಜೇಸನ್ ರಾಯ್ ಹಾಗೂ ರಿಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಕೆಕೆಆರ್ ತಂಡದಲ್ಲಿ ಹೊಸ ಚೈತನ್ಯ ನೀಡಿತು. ಜೇಸನ್ ರಾಯ್ ಕೇವಲ 19 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ರಾಯ್ 26 ಎಸೆತದಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿ ಮೂಲಕ 61 ರನ್ ಸಿಡಿಸಿ ಔಟಾದರು.
ಕೆಕೆಆರ್ ಗೆಲುವಿಗೆ ಅಂತಿಮ 30 ಎಸೆದಲ್ಲಿ 99 ರನ್ ಅವಶ್ಯಕತೆ ಇತ್ತು. ರಿಂಕು ಸಿಂಗ್ ಹೋರಾಟ ಮುಂದುವರಿಸಿದರೆ, ಇತ್ತ ಆ್ಯಂಡ್ರೆ ರೆಸಲ್ 9 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು. ರಿಂಕು ಸಿಂಗ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಉಮೇಶ್ ಯಾದವ್ 4 ರನ್ ಸಿಡಿಸಿ ಔಟಾದರು. ಅಂತಿಮ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 56 ರನ್ ಬೇಕಿತ್ತು. ಕೊನೆಯ ಓವರ್‌ನಲ್ಲಿ ರಿಂಕು ಸಿಕ್ಸರ್ ಒಂದು ಸಿಕ್ಸರ್ ಸಿಡಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು. ರಿಂಕು ಸಿಂಗ್ ಅಜೇಯ 53 ರನ್ ಸಿಡಿಸಿದರು. ಇದರೊಂದಿಗೆ ಸಿಎಸ್‌ಕೆ 49 ರನ್ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.
IPL 2023 ಆಟಕ್ಕುಂಟು ರನ್ನಿಲ್ಲ, ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಫುಲ್ ಟ್ರೋಲ್!
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ರುತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೇ 73 ರನ್ ಜೊತೆಯಾಟ ನೀಡಿತು. ರುತುರಾಜ್ 20 ಎಸೆತದಲ್ಲಿ 2 ಬೌಂಡರಿ 3 ಸಿಕ್ಸರ್ ಮೂಲಕ 35 ರನ್ ಸಿಡಿಸಿದರು.ಕಾನ್ವೇ 40 ಎಸೆತದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 56 ರನ್ ಸಿಡಿಸಿದರು.
ಅಜಿಂಕ್ಯ ರಹಾನೆ ಸ್ಫೋಟಕ ಬ್ಯಾಟಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್ ವೇಗ ಹೆಚ್ಚಿಸಿತು. ಬರೋಬ್ಬರಿ 200ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ರಹಾನೆ ಬ್ಯಾಟಿಂಗ್ ಮಾಡಿದರು. ಶಿವಂ ದುಬೆ 21 ಎಸೆತದಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 50ರನ್ ಸಿಡಿಸಿದರು.ರವೀಂದ್ರ ಜಡೇಜಾ 8 ಎಸೆತದಲ್ಲಿ 18 ರನ್ ಕಾಣಿಕೆ ನೀಡಿದರು. ಅಜಿಂಕ್ಯ ರಹಾನೆ 29 ಎಸೆತದಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಅಜೇಯ 71 ರನ್ ಸಿಡಿಸಿದರು. ಇದರೊಂದಿಗೆ ಸಿಎಸ್‌ಕೆ 4 ವಿಕೆಟ್ ನಷ್ಟಕ್ಕೆ 235ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.