ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ನಂತಹ ಭ್ರಷ್ಟಾಚಾರ ನಡೆಯಬಹುದು ಎಂದು ಮನಗಂಡಿದ್ದ ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್ ಕುಂಬ್ಳೆ 2010-11ರ ಆವೃತ್ತಿ ನಂತರ ಕೆಪಿಎಲ್ ಟೂರ್ನಿಯನ್ನು ನಿಲ್ಲಿಸಿದ್ದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ನ.09]: 2009ರಲ್ಲಿ ಕೆಪಿಎಲ್ ಟೂರ್ನಿ ಆರಂಭಗೊಂಡಿತು. ಟೂರ್ನಿ ಆರಂಭವಾಗುವ ಸಮಯದಲ್ಲಿ ಕುಂಬ್ಳೆ ಹಾಗೂ ಶ್ರೀನಾಥ್ ಕೆಎಸ್‌ಸಿಎ ನಿರ್ಧಾರವನ್ನು ವಿರೋಧಿಸಿದ್ದರು. ಕಾರ್ಪೋರೇಟ್ ಮಾದರಿಯಲ್ಲಿ ಟಿ20 ಟೂರ್ನಿ ಆಯೋಜಿಸುವ ಅವಶ್ಯಕತೆ ಏನು ಎಂದು ರಾಜ್ಯದ ಇಬ್ಬರು ದಿಗ್ಗಜ ಕ್ರಿಕೆಟಿಗರು ಪ್ರಶ್ನಿಸಿದ್ದರು.
ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!
undefined
ಬಿಸಿಸಿಐನಿಂದ ಬರುವ ಹಣದಲ್ಲೇ ಕೆಎಸ್‌ಸಿಎ, ಟಿ20 ಟೂರ್ನಿಯನ್ನು ಆಯೋಜಿಸಬಹುದು. ಅನಗತ್ಯವಾಗಿ ಕ್ರಿಕೆಟ್ ಬಗ್ಗೆ ಪ್ರೀತಿ, ಕಾಳಜಿ ಇಲ್ಲದ ವ್ಯಕ್ತಿಗಳಿಗೆ ರಾಜ್ಯ ಕ್ರಿಕೆಟ್ ಆಡಳಿತದೊಳಗೆ ಹಿಂದಿನ ಬಾಗಿಲ ಪ್ರವೇಶ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಐಪಿಎಲ್ನಲ್ಲಿ ಆಡಿದ್ದ ಕುಂಬ್ಳೆಗೆ ಹಣದ ಹೊಳೆ ಹರಿಸುವ ಟಿ20 ಲೀಗ್‌ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವಿತ್ತು.’
KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್
‘ಕೆಪಿಎಲ್ ಆರಂಭಿಸುವುದರಿಂದ ಯುವ ಆಟಗಾರರು ಟಿ20 ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತಗೊಳ್ಳುತ್ತಾರೆ. ಆಟಗಾರರನ್ನು ಮೊದಲು ಸಾಂಪ್ರದಾಯಿಕ ಟೆಸ್ಟ್ ಹಾಗೂ ಏಕದಿನ ಮಾದರಿಗೆ ಕರೆತಂದು ಬಳಿಕ ಟಿ20ಗೆ ಪರಿಚಯಿಸಬೇಕು. 17 ವಯಸ್ಸಿನಲ್ಲೇ ವೃತ್ತಿಪರ ಟಿ20 ಟೂರ್ನಿ ಆಡಿಸುವುದು ಸರಿಯಲ್ಲ. ಅಂತಹ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸಿದರೆ ಅದರ ನಿರ್ವಹಣೆ ಬಹಳ ಕಷ್ಟ’ ಎಂದು ಶ್ರೀನಾಥ್ 2009ರಲ್ಲಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.
2010ರಲ್ಲಿ ಅನಿಲ್ ಕುಂಬ್ಳೆ ಕೆಎಸ್‌ಸಿಎ ಅಧ್ಯಕ್ಷರಾಗಿ ಚುನಾಯಿತರಾದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು. 2010-11ರ ಆವೃತ್ತಿ ನಂತರ ಕುಂಬ್ಳೆ ಹಾಗೂ ಶ್ರೀನಾಥ್ ಕೆಪಿಎಲ್ ಟೂರ್ನಿಯನ್ನು ನಿಲ್ಲಿಸಿದರು. ಬಳಿಕ 2014ರಲ್ಲಿ ಕುಂಬ್ಳೆ, ಶ್ರೀನಾಥ್ ಅಧಿಕಾರದಿಂದ ಹಿಂದೆ ಸರಿದ ಬಳಿಕ 2014ರಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಬ್ರಿಜೇಶ್ ಪಟೇಲ್, ಪುನಃ ಕೆಪಿಎಲ್ ಆರಂಭಿಸಿದರು.
ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ