ವಿಚ್ಛೇದನ ಸುದ್ದಿಗೆ ಬ್ರೇಕ್: ಜೊತೆಯಾಗಿ ಟಿವಿ ಶೋ ನಡೆಸಲು ಮುಂದಾದ ಮಿರ್ಜಾ, ಮಲಿಕ್

By Anusha Kb  |  First Published Nov 13, 2022, 7:34 PM IST

ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ವಿಚ್ಛೇದನ  ಊಹಾಪೋಹಾಕ್ಕೆ ಬ್ರೇಕ್ ಹಾಕುವಂತೆ  ಹೊಸ ವಿಚಾರವೊಂದು ಹೊರ ಬಂದಿದೆ. ಅದೇನೆಂದರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಜೊತೆಯಾಗಿ ಟಿವಿ ಶೋವೊಂದನ್ನು ನಡೆಸಿಕೊಡಲಿದ್ದಾರಂತೆ..!


ವಾರಗಳಿಂದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ದಂಪತಿ ಮಧ್ಯೆ ಎಲ್ಲವೂ ಸರಿ ಇಲ್ಲ, ಇಬ್ಬರ ಮಧ್ಯೆ ವಿರಸ ಮೂಡಿದೆ. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕ್ರಿಯೆಯ ನಂತರ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬಂದಿದ್ದವು. ಈ ವಿಚಾರ ಸಾನಿಯಾ, ಶೋಯೆಬ್ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಊಹಾಪೋಹಾಗಳಿಗೆ ಬ್ರೇಕ್ ಹಾಕುವಂತೆ ಈ ಮಧ್ಯೆ ಹೊಸ ವಿಚಾರವೊಂದು ಹೊರ ಬಂದಿದೆ. ಅದೇನೆಂದರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಜೊತೆಯಾಗಿ ಟಿವಿ ಶೋವೊಂದನ್ನು ನಡೆಸಿಕೊಡಲಿದ್ದಾರಂತೆ..!

ಹೌದು ಪಾಕಿಸ್ತಾನದ ಟಿವಿ ಮಾಧ್ಯಮವೊಂದಕ್ಕೆ ಈ ದಂಪತಿ ಜೊತೆಯಾಗಿ ಟಿವಿ ಶೋ ನಡೆಸಿಕೊಡಲಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಓಟಿಟಿ ಪ್ಲಾಟ್‌ಫಾರ್ಮ್ ಎನಿಸಿದ ಉರ್ದುಫ್ಲಿಕ್ಸ್‌ಗೆ ಈ ಕ್ರೀಡಾಜೋಡಿ ಜೊತೆಯಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ವತ: ಉರ್ದುಫ್ಲಿಕ್ಸ್ (Urduflix) ಸಂಸ್ಥೆ ಈ ವಿಚಾರವನ್ನು ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ. ಈ ಶೋಗೆ ದ ಮಿರ್ಜಾ ಮಲಿಕ್ ಶೋ (The Mirza Malik Show) ಎಂದು ಹೆಸರಿಡಲಾಗಿದೆ. ಉರ್ದುಫ್ಲಿಕ್ಸ್ ಇನ್ಸ್ಟಾ ಪೋಸ್ಟ್‌ನಲ್ಲಿ ಶೋಯೆಬ್ ಕೈ ಕಟ್ಟಿ ನಿಂತಿದ್ದರೆ, ಶೋಯೆಬ್ ಹೆಗಲ ಮೇಲೆ ಸಾನಿಯಾ ಮಿರ್ಜಾ ಕೈ ಇಟ್ಟಿದ್ದಾರೆ. ಆದಷ್ಟು ಶೀಘ್ರದಲ್ಲೇ ದ ಮಿರ್ಜ್ ಮಲಿಕ್ ಶೋ ಕೇವಲ ಉರ್ದುಫ್ಲಿಕ್ಸ್‌ನಲ್ಲಿ ಮಾತ್ರ ಎಂದು ಈ ಪೋಟೋ ಪೋಸ್ಟ್ ಮಾಡಿ ಬರೆಯಲಾಗಿದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by UrduFlix (@urduflixofficial)

 

ಈ ಕಾರಣದಿಂದಾಗಿ ಈ ಕ್ರೀಡಾಲೋಕದ ಫೇವರಿಟ್ ಜೋಡಿ ಸಾನಿಯಾ ಮಿರ್ಜಾ (Sania Mirza) ಹಾಗೂ ಶೋಯೇಬ್ ಮಲಿಕ್ ವಿಚ್ಛೇದನ ಊಹಾಪೋಹಾಕ್ಕೆ ಬ್ರೇಕ್ ಬಿದ್ದಂತಾಗಿದೆ. ಈ ಶೋ ಬಗ್ಗೆ ಅನೇಕ ಸಾಮಾಜಿಕ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದು, ಶೋ ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಮತ್ತೆ ಕೆಲವರು ಅವರು ಜೊತೆಯಾಗಿ ಇದ್ದಾರೆ ಎಂಬುದನ್ನು ಕೇಳಿ ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಳೆಯದೆಲ್ಲವನ್ನು ಮರೆತು ಜೊತೆಯಾಗಿ ಇರಿ. ನೀವಿಬ್ಬರು ಜೊತೆ ಇದ್ದಾರೆ ಚೆಂದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಾನಿಯಾ ಮಿರ್ಜಾ-ಮಲಿಕ್‌ ದಾಂಪತ್ಯ ಅಂತ್ಯ: ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?

ಸಾನಿಯಾ ಹಾಗೂ ಶೋಯೆಬ್‌ ಮಲೀಕ್‌ 2010ರ ಏಪ್ರಿಲ್‌ 12 ರಂದು ಹೈದರಾಬಾದ್‌ನಲ್ಲಿ (Hyderabad) ವಿವಾಹವಾಗಿದ್ದರು. ಏಪ್ರಿಲ್‌ 15 ರಂದು ಲಾಹೋರ್‌ನಲ್ಲಿ (Lahore) ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಕೂಡ ನಡೆದಿತ್ತು. ವಿವಾಹದ ನಂತರ ದುಬೈನಲ್ಲಿ ನೆಲೆಸಿದ್ದರು. 2018ರಲ್ಲಿ ದಂಪತಿ ಮೊದಲ ಮಗು ಇಜಾನ್ ಮಿರ್ಜಾ ಮಲಿಕ್‌ನನ್ನು ಬರಮಾಡಿಕೊಂಡಿದ್ದರು. ಈ ಮಧ್ಯೆ ದಂಪತಿಯ ಮಧ್ಯೆ ಎಲ್ಲವೂ ಸರಿ ಇಲ್ಲ. ಹೀಗಾಗಿ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಸಾನಿಯಾ ತಾನು ಹಾಗೂ ಪುತ್ರ ಮಾತ್ರ ಇರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಕಷ್ಟದ ದಿನಗಳಿಂದ ಆಚೆ ಬರಲು ಸಹಕರಿಸಿದ ಸಂದರ್ಭ ಎಂದು ಬರೆದುಕೊಂಡಿದ್ದರು. 

ಸಾನಿಯಾ-ಶೋಯೆಬ್‌ ವಿಚ್ಛೇದನಕ್ಕೆ ಕಾರಣವಾದಳಾ ಮಾಡೆಲ್‌ ಆಯೆಷಾ?

ಸಾನಿಯಾ (Sania Mirza) ಹಾಗೂ ಶೋಯೆಬ್ ಮಧ್ಯೆ ಬಿರುಕು ಮೂಡಲು ಪಾಕಿಸ್ತಾನ ಮೂಲದ ನಟಿಯ ಜೊತೆ ಶೋಯೆಬ್ ಮಲಿಕ್ ಸುತ್ತಾಡುತ್ತಿರುವುದೇ ಕಾರಣ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. 2021ರ ನವೆಂಬರ್‌ನಲ್ಲಿ ಶೋಯೆಬ್‌ ಮಲೀಕ್‌ ಹಾಗೂ ಆಯೆಷಾ ಖಮರ್‌ ನಡುವಿನ ಫೋಟೋಶೂಟ್‌ನ ಚಿತ್ರಗಳು ವೈರಲ್‌ ಆಗಿದ್ದವು. ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನ ಸುದ್ದಿ ಬಹಿರಂಗವಾದ ಬಳಿಕ ಶೋಯೆಬ್‌ ಮಲೀಕ್‌ (Shoaib Malik) ಅವರ ಫೋಟೋಶೂಟ್‌ ಚಿತ್ರಗಳು ಹೆಚ್ಚಾಗಿ ಪ್ರಸಾರವಾಗಿವೆ. ಆಯೇಷಾ ಕಮರ್‌ ಪಾಕಿಸ್ತಾನದ ಪ್ರಸಿದ್ಧ ನಟಿ ಮತ್ತು ಯೂಟ್ಯೂಬರ್ ಆಗಿದ್ದು, ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದ್ದಾರೆ. 

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆಯೆಷಾ ಒಮರ್ ಯಾರು ಗೊತ್ತಾ..?

ಮಲಿಕ್ ಜೊತೆ ಹಲವು ನಿಯತಕಾಲಿಕೆಗಳಿಗೆ ಫೋಟೋಶೂಟ್ ಮಾಡಿದ್ದಾರೆ. ಈ ಚಿತ್ರಗಳನ್ನು ನೋಡಿದ ನಂತರ ನಿಮ್ಮ ಪತ್ನಿ ಏನು ಹೇಳಿದರು ಎಂದು ಶೋಯೆಬ್ ಅವರನ್ನು ಕೇಳಿದಾಗ ನಾನು ಕ್ರಿಕೆಟಿಗ, ಮಾಡೆಲಿಂಗ್ ನನ್ನ ಕ್ಷೇತ್ರವಲ್ಲ ಎಂದು ಫೋಟೋಶೂಟ್ ಬಗ್ಗೆ ಶೋಯೆಬ್ ಹೇಳಿದ್ದರು. ಆಯೇಷಾ ನನಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಸಾನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಲಿಕ್ ಹಿಂದೊಮ್ಮೆ ಹೇಳಿದ್ದರು. 2022ರ ಅಕ್ಟೋಬರ್‌ನಲ್ಲಿ ಒಕೆ ಪಾಕಿಸ್ತಾನ್‌ ಎನ್ನುವ ಮ್ಯಾಗಝೀನ್‌ಗೆ ಇಬ್ಬರೂ ಬೋಲ್ಡ್‌ ಆಗಿ ಪೋಟೋ ಶೂಟ್‌ ಮಾಡಿಸಿದ್ದರು.

ವಿಚ್ಛೇದನದ ಬಗ್ಗೆ ಮತ್ತಷ್ಟು ಶಂಕೆ ಹುಟ್ಟಿಸುವ ಪೋಸ್ಟ್‌ ಹಾಕಿದ ಸಾನಿಯಾ ಮಿರ್ಜಾ

click me!