ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಸೋಲು ಕಂಡ ಬಳಿಕ, ಶೋಯೆಬ್ ಅಖ್ತರ್ ಹೃದಯ ಭಗ್ನವಾದ ಇಮೋಜಿ ಬಳಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಮಾಡಿರುವ ಟ್ವೀಟ್ ಈಗ ಟ್ವೀಟಿಗರ ಗಮನಸೆಳೆದಿದೆ.
ಬೆಂಗಳೂರು (ನ.13): ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 5 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಫಲಿತಾಂಶ ಪಾಕಿಸ್ತಾನ ತಂಡದ ಹಾಲಿ ಆಟಗಾರರೊಂದಿಗೆ ಮಾಜಿ ಆಟಗಾರರಿಗೂ ಅಚ್ಚರಿ ತಂದಿದೆ. ತಂಡದ ಪ್ರದರ್ಶನದಿಂದ ಹೃದಯ ಭಗ್ನವಾದ ಅನುಭವವಾದಂತಾಗಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನ ಕಂಡ ಸರ್ವಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಶೋಯೆಬ್ ಅಖ್ತರ್ ಕೂಡ ಪಾಕಿಸ್ತಾನ ತಂಡ ಮೆಲ್ಬೋರ್ನ್‌ನಲ್ಲಿ ಸೋಲು ಕಂಡ ಬಳಿಕ, ಭಗ್ನವಾದ ಹೃದಯದ ಇಮೋಜಿ ಬಳಸಿ ಟ್ವೀಟ್ ಮಾಡಿದ್ದರು. ಅಖ್ತರ್ ಅರ್ ಈ ಟ್ವೀಟ್‌ಗೆ ಕೋಟ್ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ, 'ಇದಕ್ಕೆ ಕರ್ಮ ಎನ್ನುತ್ತಾರೆ..' ಎಂದು ಬರೆದುಕೊಂಡಿದ್ದರು. ಮೊಹಮದ್ ಶಮಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಭಾಗವಾಗಿದ್ದರು. ಶಮಿ ಅವರ ಈ ಟ್ವೀಟ್ ಮತ್ತೊಮ್ಮೆ ಟ್ವಿಟರ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ವಾರ್‌ಗೆ ಕಾರಣವಾಗಿದೆ. ಪಾಕಿಸ್ತಾನದ ಅಭಿಮಾನಿಗಳು ಹಾಗೂ ಭಾರತದ ಕ್ರಿಕೆಟ್ ಅಭಿಮಾನಿಗಳು ಇದರ ವಿಚಾರವಾಗಿ ವಾಕ್ಸಮರ ಆರಂಭಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಹೋರಾಟವನ್ನು ಮಣಿಸುವಲ್ಲಿ ಯಶಸ್ವಿಯಾದ ಜೋಸ್ ಬಟ್ಲರ್ ಟೀಮ್ 2ನೇ ಬಾರಿಗೆ ಟಿ2 ವಿಶ್ವಕಪ್ ಗೆದ್ದುಕೊಂಡಿತು.
Sorry brother
It’s call karma 💔💔💔 https://t.co/DpaIliRYkd
ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದ್ದರೂ, ಇಂಗ್ಲೆಂಡ್ ತಂಡಕ್ಕೆ ಸವಾಲಾಗುವಂಥ ಮೊತ್ತವನ್ನು ದಾಖಲು ಮಾಡಿರಲಿಲ್ಲ. ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ದಾಖಲಾಗುತ್ತಿದ್ದರೆ, ಅಖ್ತರ್ ಅವರ ಪೋಸ್ಟ್ ಕುರಿತು ಶಮಿ ಅವರ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಖ್ತರ್ ಅವರ ಹೃದಯ ಭಗ್ನವಾದ ಇಮೋಜಿಗೆ ಪ್ರತಿಕ್ರಿಯೆ ನೀಡಿದ್ದ ಶಮಿ, 'ಕ್ಷಮಿಸಿ ಸಹೋದರ, ಇದಕ್ಕೆ ಕರ್ಮ ಎನ್ನತ್ತಾರೆ' ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕ್ ಅಭಿಮಾನಿಯೊಬ್ಬ, 'ಮೊದಲಿಗೆ ಇರ್ಫಾನ್ ಪಠಾಣ್ ಮತ್ತು ಈಗ ನೀವು? ಯಾವುದಕ್ಕೆ ನೀವು ಕರ್ಮ ಎನ್ನುತ್ತಿದ್ದೀರಿ? ನೀವು 152-0 ಮತ್ತು 170-0 ಸ್ಕೋರ್‌ಲೈನ್‌ಅನ್ನು ಮರೆತಿದ್ದೀರಾ? ಪಾಕಿಸ್ತಾನದ ಆಟಗಾರರು ಮತ್ತು ಮುಸ್ಲಿಮರನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಮೂಲಕ ಈ ಮುಸ್ಲಿಂ ಭಾರತೀಯ ಆಟಗಾರರು ಏನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲವೇ? ದಬ್ಬಾಳಿಕೆ ಮತ್ತು ನಿಂದನೆಯನ್ನು ಹೊರತುಪಡಿಸಿ ಭಾರತವು ಮುಸ್ಲಿಂ ಜನರಿಗೆ ಏನು ನೀಡಿದೆ?' ಎಂದು ಇರಾಮ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾನೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ನೊಬ್ಬ ವ್ಯಕ್ತಿ, 'ಫೈನಲ್ ಮ್ಯಾಚ್ ಆಡಬೇಕು ಎಂದು ಯಾರು ಕನಸು ಕಾಣುತ್ತಿದ್ದರೋ, ಅವರು ನಮ್ಮ ಫೈನಲ್ ಪಂದ್ಯವನ್ನು ತಮ್ಮ 130 ಕೋಟಿ ಜನರೊಂದಿಗೆ ವೀಕ್ಷಿಸಿದ್ದಾರೆ' ಎಂದು ಟಾಂಗ್ ನೀಡಿದ್ದಾರೆ.
undefined
T20 World Cup: ಚಾಂಪಿಯನ್ ಇಂಗ್ಲೆಂಡ್ ಟೀಮ್‌ಗೆ ಸಿಕ್ಕ ಬಹುಮಾನ ಎಷ್ಟು?
ಭಾರತದ ಅಭಿಮಾನಿಯೊಬ್ಬ, 'ಅಖ್ತರ್‌ಗೆ ಸರಿಯಾಗಿ ಯಾರ್ಕರ್ ಹಾಕಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕ್ ಅಭಿಮಾನಿಯೊಬ್ಬ, ಇದೇ ಯಾರ್ಕರ್‌ಅನ್ನು ಅಲೆಕ್ಸ್ ಹ್ಯಾಲ್ಸ್‌ಗೆ ಸೆಮಿಫೈನಲ್‌ನಲ್ಲಿ ಹಾಕಿದ್ದರೆ, 10 ವಿಕೆಟ್ ಸೋಲು ಎದುರಾಗುತ್ತಿರಲಿಲ್ಲ ಎಂದು ಬರೆದಿದ್ದಾರೆ.
ಇಂಗ್ಲೆಂಡ್‌ಗೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟೋಕ್ಸ್, ಪಾಕಿಸ್ತಾನಕ್ಕೆ 'ಸ್ಟ್ರೋಕ್'..!
'ಪಾಕಿಸ್ತಾನಿಗಳು ಅಳುವುದು ನನ್ನ ಸಂತೋಷದ ಮೂಲ. ಅವರ ಕಣ್ಣೀರು ನನ್ನ ದೇಹಕ್ಕೆ ಗ್ಲೂಕೋಸ್ ಆಗಿ ಕೆಲಸ ಮಾಡುತ್ತದೆ, ಅವರ ಕಿರುಚಾಟ ನನ್ನ ಕಿವಿಗೆ ಶಾಂತಿಯನ್ನು ತರುತ್ತದೆ. ಅವರು ಸೋಲುವುದನ್ನು ನೋಡುವುದು ನಾನು ನೋಡಬಹುದಾದ ಅತ್ಯುತ್ತಮ ದೃಶ್ಯ' ಎಂದು ಭಾರತದ ಅಭಿಮಾನಿ ಅಖ್ತರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.