ಮುಂದಿನ 10 ವರ್ಷದಲ್ಲಿ 3 ಬಾರಿ ಫೈನಲ್‌ ಆಡಲಿದೆ ಆರ್‌ಸಿಬಿ, ಒಮ್ಮೆ ಚಾಂಪಿಯನ್‌, ಪ್ರೆಡಿಕ್ಟ್‌ ಮಾಡಿದ AI

By Santosh Naik  |  First Published Apr 10, 2024, 4:15 PM IST

ದಿನಗಳು ಕಳೆದ ಹಾಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ದೈನಂದಿನ ಜೀವನಕ್ಕೆ ಲಗ್ಗೆ ಇಡುತ್ತಿದೆ. ಇದರ ನಡುವೆ ಅಪ್ಪಟ ಕ್ರಿಕೆಟ್‌ ಅಭಿಮಾನಿಗಳು ಮುಂದಿನ 10 ವರ್ಷಗಳಲ್ಲಿ ಐಪಿಎಲ್‌ ಚಾಂಪಿಯನ್‌ ಯಾರಾಗ್ತಾರೆ ಎನ್ನುವ ಪ್ರಶ್ನೆಗೆ ಎಐ ಉತ್ತರ ನೀಡಿರುವುದು ವೈರಲ್‌ ಆಗಿದೆ.
 


ಬೆಂಗಳೂರು (ಏ.10): ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಈಗಾಗಲೇ 23 ಪಂದ್ಯಗಳು ಮುಕ್ತಾಯ ಕಂಡಿವೆ. ಇಲ್ಲಿಯವರೆಗಿನ ಫಲಿತಾಂಶವನ್ನ ನೋಡಿದ್ರೆ ಆರ್‌ಸಿಬಿ, ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ಹಂತಕ್ಕೇರಲು ಹರಸಾಹಸ ಮಾಡಬೇಕಿದ್ದರೆ, ರಾಜಸ್ಥಾನ ರಾಯಲ್ಸ್‌ ಹಾದಿ ತುಂಬಾ ಸರಳವಿದ್ದಂತೆ ಕಾಣುತ್ತಿದೆ. ಆದರೆ, ಇದು ಐಪಿಎಲ್‌. ಇಲ್ಲಿ ಏನು ಬೇಕಾದ್ರೂ ಆಗಬಹುದು. ಈ ಹಂತದಲ್ಲಿ ಪಾಯಿಂಟ್‌ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಐಪಿಎಲ್‌ ಟ್ರೋಫಿ ಗೆಲ್ಲಬಹುದು. ಅಂಥದ್ದೊಂದು ಮ್ಯಾಜಿಕ್‌ಅನ್ನು ನಾವು ಐಪಿಎಲ್‌ನಲ್ಲಿ ಮಾತ್ರವೇ ಕಾಣಬಹುದು. ಆದರೆ, ಇಲ್ಲಿಯವರೆಗಿನ ಐಪಿಎಲ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ ನಿರಾಸೆಯೇ ಕಾದಿದೆ. ಆಡಿರುವ ಐದು ಪಂದ್ಯಗಳ ಪೈಕಿ ಬರೀ ಒಂದರಲ್ಲಿ ಗೆಲುವು ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟದ ವೈಖರಿಯ ಬಗ್ಗೆಯೇ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ. ಇದರ ನಡುವೆ ಆರ್‌ಸಿಬಿಯ ಅಭಿಮಾನಿಗಳು ಖುಷಿ ನೀಡುವ ವಿಚಾರವನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೀಡಿದೆ. ಹೌದು ಎಐ ಮುಂದಿನ 10 ವರ್ಷಗಳ ಐಪಿಎಲ್‌ ಚಾಂಪಿಯನ್ಸ್‌ಅನ್ನು ಪ್ರೆಡಿಕ್ಟ್‌ ಮಾಡಿದ್ದು, ಆರ್‌ಸಿಬಿ ಈ ಅವಧಿಯಲ್ಲಿ 3 ಬಾರಿ ಫೈನಲ್‌ ಆಡಲದ್ದು, ಒಮ್ಮೆ ಟ್ರೋಫಿ ಗೆಲ್ಲಲಿದೆ ಎಂದು ತಿಳಿಸಿದೆ.

ಮೈಕ್ರೋಸಾಫ್ಟ್‌ ಬಿಂಗ್‌ ಕೋಪೈಲಟ್‌ ಎಐ ಮಾಡೆಲ್‌ ಬಳಸಿಕೊಂಡು ಮುಂದಿನ 10 ವರ್ಷದ ಐಪಿಎಲ್‌ನ ಚಾಂಪಿಯನ್‌ ಹಾಗೂ ರನ್ನರ್‌ಅಪ್‌ ಯಾರು ಅನ್ನೋದನ್ನ ಅಂದಾಜು ಮಾಡಲಾಗಿದೆ. ಅದರಂತೆ ಹಾಲಿ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೇರಲಿದ್ದು, ಸನ್‌ರೈಸರ್ಸ್‌ ವಿರುದ್ಧ ಸೋಲು ಕಾಣಲಿದೆ ಎಂದು ಪ್ರೆಡಿಕ್ಟ್‌ ಮಾಡಿದೆ. ಅದರಂತೆ  2025ರಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಫೈನಲ್‌ ನಡೆಯಲಿದ್ದು ಮುಂಬೈ ಚಾಂಪಿಯನ್‌ ಆಗಲಿದೆ.  2026ರಲ್ಲಿ ಆರ್‌ಸಿಬಿ 2ನೇ ಬಾರಿಗೆ ಫೈನಲ್‌ನಲ್ಲಿ ಆಡಲಿದ್ದು, ಬದ್ಧವೈರಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲು ಕಾಣಲಿದೆಯಂತೆ.

2027ರಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ ಮುಖಾಮುಖಿಯಾಗಲಿದ್ದು, ರಾಜಸ್ಥಾನ ಟ್ರೋಫಿ ಜಯಿಸಲಿದೆ.  2028ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಮತ್ತೊಮ್ಮೆ ಟ್ರೋಫಿ ಜಯಿಸಲಿದ್ದು, ಗುಜರಾತ್‌ ಟೈಟಾನ್ಸ್‌ ತಂಡವನ್ನು ಫೈನಲ್‌ನಲ್ಲಿ ಮಣಿಸಲಿದೆ. 2029ರಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಮುಂಬೈ ಚಾಂಪಿಯನ್ ಎನಿಸಿಕೊಳ್ಳಲಿದೆ.  2030ರಲ್ಲಿ ಕೆಕೆಆರ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಫೈನಲ್‌ ಮುಖಾಮುಖಿಯಾಗಲಿದ್ದು, ಕೆಕೆಆರ್‌ ಚಾಪಿಯನ್‌ ಆಗಲಿದೆ.

Tap to resize

Latest Videos

2031ರಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಫೈನಲ್‌ನಲ್ಲಿ ಎದುರಾಗಲಿದ್ದು, ಚೆನ್ನೈ ಚಾಂಪಿಯನ್‌ ಆಗಲಿದೆ. 2032ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ಫೈನಲ್‌ ಆಡಲಿದ್ದು ಮುಂಬೈ ಗೆಲುವು ಕಾಣಲಿದೆ. ಇನ್ನು ಆರ್‌ಸಿಬಿಐ ಚೊಚ್ಚಲ ಐಪಿಎಲ್‌ ಗೆಲುವು 2033ರಲ್ಲಿ ಬರಲಿದ್ದು, ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ಟ್ರೋಫಿ ಜಯಿಸಲಿದೆ. ಮರು ವರ್ಷ ಅಂದರೆ, 2034ರಲ್ಲಿ ಗುಜರಾತ್‌ ಟೈಟಾನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಎದುರಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಚೊಚ್ಚಲ ಐಪಿಎಲ್‌ ಗೆಲುವು ಕಾಣಲಿದೆ.

ಕ್ರಿಕೆಟರ್ ಸುನೀಲ್‌ ನರೈನ್ ಎರಡನೇ ಮದುವೆ... ಈ ಸಿಲ್ಲಿ ರೀಸನ್‌ಗೆ ಡಿವೋರ್ಸ್ ಕೊಟ್ರಾ?

ಅದೇ ರೀತಿ ಇನ್ನೊಂದು ಎಐ ಕೂಡ ಮುಂದಿನ 20 ವರ್ಷಗಳ ಐಪಿಎಲ್‌ ಚಾಂಪಿಯನ್‌ಗಳ ಪಟ್ಟಿಯನ್ನು ತಿಳಿಸಿದೆ. ಅದರ ಪ್ರಕಾರ, ಮುಂದಿನ 20 ವರ್ಷದಲ್ಲಿ 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಲಿದೆ. ಅದರ ವಿವರ ಇಲ್ಲಿದೆ. ಆದರೆ, ಈ ಎಐ ಪ್ರೆಡಿಕ್ಷನ್‌ ಎಷ್ಟು ತಮಾಷೆಯಾಗಿದೆಯೆಂದರೆ, ಐಪಿಎಲ್‌ನ ಎಲ್ಲಾ ತಂಡಗಳನ್ನು ಮುಂದಿನ 20 ವರ್ಷಗಳಲ್ಲಿ ತಲಾ 2 ಬಾರಿ ಚಾಂಪಿಯನ್‌ ಮಾಡಿದೆ.

IPL 2024: ಆರ್ಶ್‌ದೀಪ್‌ ಸಿಂಗ್‌ ಬೌಲಿಂಗ್‌ ಮ್ಯಾಜಿಕ್‌, ಸನ್‌ ಸಖತ್‌ ಬ್ಯಾಟಿಂಗ್‌

2024: ಗುಜರಾತ್‌ ಟೈಟಾನ್ಸ್‌
2025: ಚೆನ್ನೈ ಸೂಪರ್‌ ಕಿಂಗ್ಸ್‌
2026: ಮುಂಬೈ ಇಂಡಿಯನ್ಸ್‌
2027: ಸನ್‌ರೈಸರ್ಸ್‌ ಹೈದರಾಬಾದ್‌
2028: ಪಂಜಾಬ್‌ ಕಿಂಗ್ಸ್‌
2029: ಆರ್‌ಸಿಬಿ
2030: ಡೆಲ್ಲಿ ಕ್ಯಾಪಿಟಲ್ಸ್‌
2031: ಕೆಕೆಆರ್‌
2032: ರಾಜಸ್ಥಾನ ರಾಯಲ್ಸ್‌
2033: ಲಕ್ನೋ ಸೂಪರ್‌ ಜೈಂಟ್ಸ್‌
2034: ಗುಜರಾತ್‌ ಟೈಟಾನ್ಸ್‌
2035: ಮುಂಬೈ ಇಂಡಿಯನ್ಸ್‌
2036: ಸನ್‌ರೈಸರ್ಸ್‌ ಹೈದರಾಬಾದ್‌
2037: ಚೆನ್ನೈ ಸೂಪರ್‌ ಕಿಂಗ್ಸ್‌
2038: ಆರ್‌ಸಿಬಿ
2039: ಡೆಲ್ಲಿ ಕ್ಯಾಪಿಟಲ್ಸ್‌
2040: ಪಂಜಾಬ್‌ ಕಿಂಗ್ಸ್‌
2041: ಕೆಕೆಆರ್‌
2042: ರಾಜಸ್ಥಾನ ರಾಯಲ್ಸ್‌
2043: ಲಕ್ನೋ ಸೂಪರ್‌ ಜೈಂಟ್ಸ್‌.

click me!