ಆಫ್ಘನ್‌ ಕ್ರಿಕೆಟ್ ತಂಡದ ಟೆಸ್ಟ್‌ ಮಾನ್ಯತೆ ಶೀಘ್ರ ರದ್ದು?

By Suvarna NewsFirst Published Sep 14, 2021, 10:15 AM IST
Highlights

* ಆಫ್ಘಾನಿಸ್ತಾನ ಟೆಸ್ಟ್‌ ತಂಡದ ಮಾನ್ಯತೆ ರದ್ದಾಗುವ ಸಾಧ್ಯತೆ

* ತಾಲಿಬಾನಿಗಳ ಉಪಟಳದಿಂದ ಟೆಸ್ಟ್‌ ಕ್ರಿಕೆಟ್‌ಗೆ ಹೊಡೆತ

* ಮಹಿಳಾ ಕ್ರಿಕೆಟ್‌ ಮೇಲೆ ತಾಲಿಬಾನಿಗಳ ನಿಷೇಧ

ದುಬೈ(ಸೆ.14): ಮಹಿಳಾ ಕ್ರೀಡೆಗೆ ನಿಷೇಧ ಹೇರುವುದಾಗಿ ತಾಲಿಬಾನ್‌ ಘೋಷಿಸಿರುವ ಬೆನ್ನಲ್ಲೇ ಅಪ್ಘಾನಿಸ್ತಾನ ಕ್ರಿಕೆಟ್‌ ತಂಡ ಟೆಸ್ಟ್‌ ಮಾನ್ಯತೆಯನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ. 

ಐಸಿಸಿಯ ನಿಯಮದ ಪ್ರಕಾರ ಟೆಸ್ಟ್‌ ಮಾನ್ಯತೆ ಹೊಂದಿರುವ ಕ್ರಿಕೆಟ್‌ ರಾಷ್ಟ್ರಗಳು ಮಹಿಳಾ ತಂಡವನ್ನೂ ಹೊಂದಿರಬೇಕು. ಹೀಗಾಗಿ, ತಾಲಿಬಾನ್‌ ಅಕ್ರಮಿತ ಅಪ್ಘಾನಿಸ್ತಾನವು ಮಹಿಳಾ ಕ್ರಿಕೆಟ್‌ ತಂಡವನ್ನು ನಿಷೇಧಿಸಿದರೆ, ಪುರುಷರ ತಂಡಕ್ಕೂ ನಷ್ಟವಾಗಲಿದೆ. 2017ರಲ್ಲಿ ಟೆಸ್ಟ್‌ ಮಾನ್ಯತೆ ಪಡೆದಿದ್ದ ಆಫ್ಘನ್‌ ತಂಡ ಈವರೆಗೂ 6 ಟೆಸ್ಟ್‌ಗಳನ್ನು ಆಡಿದೆ.

ಕ್ರಿಕೆಟ್ ಆಡುವಾಗ ಮಹಿಳೆಯರ ಮುಖ ಹಾಗೂ ಶರೀರ ಎಲ್ಲರಿಗೂ ಕಾಣುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಅನುಮತಿಯಿಲ್ಲ. ಅವರ ಫೋಟೋ ಹಾಗೂ ವಿಡಿಯೋಗಳನ್ನು ಬೇರೆಯವರು ನೋಡುತ್ತಾರೆ. ಇದಕ್ಕೆ ಇಸ್ಲಾಂ ಹಾಗೂ ಇಸ್ಲಾಮಿಕ್ ಎಮಿರೇಟ್ಸ್‌ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಾಸಿಕ್ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. 

ಮಹಿಳೆಯರ ಕ್ರೀಡೆಗೆ ತಾಲಿಬಾನ್‌ ನಿಷೇಧ; ಸವಾಲೆಸೆದ ಆಸ್ಟ್ರೇಲಿಯಾ..!

ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಆಫ್ಘಾನ್‌ ಕ್ರಿಕೆಟ್ ಮಂಡಳಿಯ ಮೇಲೆ ಒತ್ತಡವನ್ನು ಹೇರಿತ್ತು. ಒಂದು ವೇಳೆ ತಾಲಿಬಾನ್‌ ಮಹಿಳಾ ಕ್ರಿಕೆಟ್ ತಂಡದ ಮೇಲೆ ನಿಷೇಧ ಹೇರಿದರೆ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವೆ ನವೆಂಬರ್ 27ರಂದು ಹೋಬಾರ್ಟ್‌ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯವನ್ನು ರದ್ದು ಪಡಿಸುವ ಎಚ್ಚರಿಕೆಯನ್ನು ನೀಡಿದೆ.

click me!