ಬೌಲರ್‌ಗಳು ವಿಕೆಟ್ ಪಡೆದಾಗ ತರಹೇವಾರಿ ಸಂಭ್ರಮಿಸುವುದನ್ನು ನೋಡಿರುತ್ತೇವೆ. ಆದರೆ ಆಫ್ಘಾನ್‌ನ ಈ ಬೌಲರ್ ರೀತಿ ಮಾಡಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಬೌಲರ್ ಸಂಭ್ರಮ ಹೇಗಿತ್ತು ಅಂತ ನೀವೇ ನೋಡಿ...
ಆಸ್ಪ್ರೇಲಿಯಾ(ಡಿ.27): ಇತ್ತೀಚಿನ ದಿನಗಳಲ್ಲಿ ಬೌಲರ್‌ಗಳು ವಿಕೆಟ್ ಪಡೆದಾಗ ವಿಭಿನ್ನವಾಗಿ ಸಂಭ್ರಮಿಸಿ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ವಿಂಡೀಸ್‌ನ ಶೆಲ್ಡನ್ ಕಾಟ್ರೆಲ್, ದ.ಆಫ್ರಿಕಾದ ಇಮ್ರಾನ್ ತಾಹಿರ್‌ರಂತಹ ಬೌಲರ್‌ಗಳ
ಸಂಭ್ರಮಾಚರಣೆ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.
ಆಫ್ಘಾನಿಸ್ತಾನದ ಯುವ ಸ್ಪಿನ್ನರ್ ಖೈಸ್ ಅಹ್ಮದ್, ವಿಭಿನ್ನ ಸಂಭ್ರಮಾಚರಣೆ ನಡೆಸುವ ಬೌಲರ್‌ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಆಸ್ಪ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಹೊಬಾರ್ಟ್ ಹರಿಕೇನ್ಸ್ ತಂಡದ ಪರ ಆಡುತ್ತಿರುವ ಖೈಸ್, ಶುಕ್ರವಾರ ನಡೆದ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದಾಗ ಪಲ್ಟಿಹೊಡೆದು ಎಲ್ಲರ ಗಮನ ಸೆಳೆದರು.
undefined
ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!
ಈ ರೀತಿ ಪಲ್ಟಿಹೊಡೆಯಲು ಹಲವು ದಿನಗಳಿಂದ ಅಭ್ಯಾಸ ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಖೈಸ್ ತಮ್ಮ 4 ಓವರ್’ಗಳಲ್ಲಿ ಕೇವಲ 3ರ ಸರಾಸರಿಯಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಹೀಗಿತ್ತು ನೋಡಿ ಆ ಕ್ಷಣ:
He's done it! Qais Ahmad has flipped and it's as brilliant as we could have ever expected 😍😍😍 pic.twitter.com/srb1dy1jzh
— KFC Big Bash League (@BBL)