ಬೊರಿವಲಿ ಕಾ ಡಾನ್ ಎಂದ ಫ್ಯಾನ್ಸ್‌ಗೆ ರೋಹಿತ್ ಪ್ರತಿಕ್ರಿಯೆ!

By Suvarna News  |  First Published Dec 22, 2019, 3:29 PM IST

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು ರೋಹಿತ್ ಶರ್ಮಾಗೆ  ಚಿಯರ್ ಅಪ್ ಮಾಡಿದ್ದಾರೆ. ಅಭಿಮಾನಿಗಳಿಗೆ ರೋಹಿತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 


ಕಟಕ್(ಡಿ.22): ಭಾರತ ಹಾಗೂ ವೆಸ್ಟ್ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಪಂದ್ಯ ಸರಣಿ ಯಾರಿಗೆ ಅನ್ನೋದನ್ನು ನಿರ್ಧರಿಸಲಿದೆ. ಈ ಮಹತ್ವದ ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು, ಸ್ಫೋಟಕ ಆರಂಭಿಕ ರೋಹಿತ್ ಶರ್ಮಾಗೆ ಬೊರಿವಲಿ ಕಾ ಡಾನ್ ಎಂದು ಕೂಗಿದ್ದಾರೆ. ಇದಕ್ಕೆ ರೋಹಿತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

Tap to resize

Latest Videos

undefined

ಪಂದ್ಯ ಆರಂಭಕ್ಕೂ ಮುನ್ನ ಪೆವಿಲಿಯನ್‌ನಿಂದ ಹೊರಬಂದ ರೋಹಿತ್ ಶರ್ಮಾನನ್ನು ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಕೂಗಿದರು. ಎಲ್ಲರು ರೋಹಿತ್ ರೋಹಿತ್ ಕೂಗೋ ಮೂಲಕ ಚಿಯರ್ ಅಪ್ ಮಾಡಿದರು. ಈ ವೇಳೆ ಒರ್ವ ಅಭಿಮಾನಿ ಬೊರಿವಲಿ ಕಾ ಡಾನ್ ಎಂದು ಕೂಗಿದರು. ತಕ್ಷಣ ರೋಹಿತ್ ನಗು ಮುಖದಿಂದ ಕೈ ಎತ್ತಿ ಸರಿ ಎಂದು ಸನ್ನೆ ಮಾಡಿದ್ದಾರೆ.

 

Rohit's reaction to "Borivali ka Don kon .. Rohit Rohit " is just priceless . Wankhede just adores Rohit . He is one of our own ❤️❤️ pic.twitter.com/MnPGn9KIuw

— Mihir ⭐️⭐️⭐️⭐️⭐️⭐️ (@ImMihir05)

ಇದನ್ನೂ ಓದಿ: ಗ್ಯಾಲರಿಯಲ್ಲಿ ಕುಳಿತಿದ್ದ ಮಗಳ ಗಮನಸೆಳೆಯಲು ರೋಹಿತ್ ಕಸರತ್ತು!

ಫ್ಯಾನ್ಸ್ ಚಿಯರ್ ಅಪ್ ಹಾಗೂ ರೋಹಿತ್ ಶರ್ಮಾ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ. ರೋಹಿತ್ ಶರ್ಮಾ ಮುಂಬೈನ ಬೊರಿವಲಿಯಲ್ಲಿ ಬೆಳೆದ ಪ್ರತಿಭೆ. ಹೀಗಾಗಿ ರೋಹಿತ್‌ಗೆ ಅಭಿಮಾನಿಗಳು ಬೊರಿವಲಿ ಕಾ ಡಾನ್ ಎಂದು ಕರೆದಿದ್ದಾರೆ. ಅತ್ಯುತ್ತ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ, ವಿಶ್ವದ ಅತ್ಯುತ್ತಮ ಆರಂಭಿಕ ಅನ್ನೋ ಹೆಗ್ಗಳಿಕಗೂ ಪಾತ್ರರಾಗಿದ್ದಾರೆ.

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!