ವಿಶ್ವಕಪ್ ಗೆಲ್ಲಲು ಮ್ಯಾಚ್‌ಗೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸೆಕ್ಸ್‌ ಮಾಡಲು ಸಲಹೆ ನೀಡಿದ್ದ ಕೋಚ್!

By Naveen KodaseFirst Published Sep 12, 2024, 12:41 PM IST
Highlights

2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆಗ ತಂಡದಲ್ಲಿದ್ದ ಸಹಾಯಕ ಕೋಚ್ ಆಟಗಾರರಿಗೆ ವಿಚಿತ್ರ ಸಲಹೆ ನೀಡಿದ್ದಾಗಿ ವಿವರಿಸಿದ್ದಾರೆ. 

ಬೆಂಗಳೂರು: ವಿಶ್ವಕಪ್‌ನಂತಹ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಟಗಾರರು ಸೆಕ್ಸ್‌ನಲ್ಲಿ ತೊಡಗುವಂತೆ ಕೋಚ್‌ಗಳೇ ಸಲಹೆ ನೀಡುತ್ತಾರೆ. ಇದನ್ನು ಕೇಳುವುದಕ್ಕೆ ನಿಮಗೆ ಎಷ್ಟು ವಿಚಿತ್ರ ಅನಿಸಬಹುದು ಅಲ್ಲವೇ?. ಆದರೆ ಇಂತಹದ್ದೊಂದು ವಿಚಿತ್ರ ಹಾಗೂ ಆಸಕ್ತಿದಾಯಕ ಘಟನೆ ಟೀಂ ಇಂಡಿಯಾದ ಜತೆಗೂ ನಡೆದಿದೆ. ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದನ್ನು ಹೇಳಿರುವುದು ಬೇರೆ ಯಾರೋ ಅಲ್ಲ, ಟೀಂ ಇಂಡಿಯಾ ಆಟಗಾರ ಜತೆಗಿದ್ದ ಓರ್ವ ಕೋಚ್ ಬಹಿರಂಗ ಪಡೆಸಿದ್ದು. ಹೌದು, ಟೀಂ ಇಂಡಿಯಾ ಮಾಜಿ ಸಹಾಯಕ ಕೋಚ್‌ ಒಬ್ಬರು ಆಟಗಾರರಿಗೆ ಮ್ಯಾಚ್‌ಗಿಂತ ಮೊದಲು ಸೆಕ್ಸ್‌ ಮಾಡುವಂತೆ ಸಲಹೆ ನೀಡುತ್ತಿದ್ದರು ಎನ್ನುವ ಆಸಕ್ತಿದಾಯಕ ವಿಚಾರವನ್ನು ವಿವರಿಸಿದ್ದಾರೆ.

ಪ್ಯಾಡಿ ಆಪ್ಟನ್ ಬಾಯ್ಬಿಟ್ಟ ಸತ್ಯ:

Latest Videos

2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ನೆರೆಯ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಆ ಸಂದರ್ಭದಲ್ಲಿ ಪ್ಯಾಡಿ ಆಪ್ಟನ್, ಟೀಂ ಇಂಡಿಯಾ ಮೆಂಟಲ್ ಕಂಡೀಷನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಏಕದಿನ ವಿಶ್ವಕಪ್‌ನಿಂದ ಭಾರತ ಸರ್ಕಾರಕ್ಕೆ ಹರಿದು ಬಂತು ಹಣದ ಹೊಳೆ, ಪ್ರವಾಸೋದಮ್ಯಕ್ಕೆ ಬಂಪರ್‌ ಲಾಟರಿ!

ಪ್ಯಾಡಿ ಆಪ್ಟನ್ ತಮ್ಮ, 'ದಿ ಬೇರ್‌ಫೂಟ್ ಕೋಚ್' ಎನ್ನುವ ಪುಸ್ತಕದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ ಎಂದು ವರದಿಯಾಗಿದೆ. 2011ರ ಏಕದಿನ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ತಾವು ಪ್ರತಿ ಮ್ಯಾಚ್‌ಗೂ ಮುನ್ನ ಭಾರತೀಯ ಆಟಗಾರರಿಗೆ ಸೆಕ್ಸ್ ಮಾಡಲು ಸಲಹೆ ನೀಡಿದ್ದಾಗಿ ವಿವರಿಸಿದ್ದಾರೆ. ತಮ್ಮ ಈ ಸಲಹೆಯಿಂದ ಹೆಡ್‌ ಕೋಚ್ ಗ್ಯಾರಿ ಕರ್ಸ್ಟನ್‌ ತಮ್ಮ ಮೇಲೆ ಬೇಸರ ಮಾಡಿಕೊಂಡಿದ್ದರು. ಕೊನೆಗೆ ತಾವು ಗ್ಯಾರಿ ಕರ್ಸ್ಟನ್‌ ಬಳಿ ಕ್ಷಮೆ ಕೂಡಾ ಕೇಳಬೇಕಾಗಿ ಬಂತು ಎಂದು ಎಂದು ಪ್ಯಾಡಿ ಆಪ್ಟನ್ ಹೇಳಿದ್ದಾರೆ. 

ತಮ್ಮ ಮಾತಿನ ಅರ್ಥ ಯಾವುದೇ ದೊಡ್ಡ ಮ್ಯಾಚ್ ಆಡುವ ಮುನ್ನ ಆಟಗಾರರು ಸೆಕ್ಸ್‌ನಲ್ಲಿ ತೊಡಗಿಕೊಂಡರೆ ಅದೊಂದು ರೀತಿ ಪವರ್‌ ಬೂಸ್ಟರ್‌ ರೀತಿ ಕೆಲಸ ಮಾಡುತ್ತದೆ ಎನ್ನುವುದಾಗಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಪ್ಯಾಡಿ ಆಪ್ಟನ್ ಮಾಡಿದ್ದರು.

28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದಿದ್ದ ಭಾರತ:

ಭಾರತ ಕ್ರಿಕೆಟ್ ತಂಡವು 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಇದಾದ ಬಳಿಕ ಪದೇ ಪದೇ ಏಕದಿನ ವಿಶ್ವಕಪ್ ಗೆಲ್ಲುವ ಹಾದಿಯಲ್ಲಿ ಮುಗ್ಗರಿಸುತ್ತಿತ್ತು. ಇನ್ನು 2011ರಲ್ಲಿ ಭಾರತ-ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಬಲಾಢ್ಯ ತಂಡಗಳನ್ನೆಲ್ಲಾ ಮಣಿಸಿ ಫೈನಲ್ ಪ್ರವೇಶಿಸಿತ್ತು.

ಭಾರತದ ಸಾರ್ವಕಾಲಿಕ ಶ್ರೇಷ್ಠ ಒನ್‌ಡೇ ಟೀಂ ಆಯ್ಕೆ ಮಾಡಿದ ಗೌತಮ್ ಗಂಭೀರ್: ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಟೂರ್ನಿಯುದ್ದಕ್ಕೂ ಅಮೋಘ ಆಲ್ರೌಂಡ್ ಪ್ರದರ್ಶನ ತೋರಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

click me!