2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಆಯೋಜನೆಯಿಂದ ಭಾರತದ ಆರ್ಥಿಕತೆಗೆ ₹11,637 ಕೋಟಿ ಸೇರ್ಪಡೆ ಪ್ರವಾಸೋದ್ಯಮದಿಂದಲೇ 77234 ಕೋಟಿ: ವರದಿ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ
ದುಬೈ: 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ನಲ್ಲಿ ಸೋತು ಟ್ರೋಫಿ ತಪ್ಪಿಸಿಕೊಂಡಿರಬಹುದು. ಕೋಟ್ಯಂತರ ಅಭಿಮಾನಿಗಳು ಭಾರತಕ್ಕೆ ಕಪ್ ಸಿಗದಿದ್ದಕ್ಕೆ ನೊಂದಿರಬಹುದು. ಆದರೆ ವಿಶ್ವಕಪ್ ಆಯೋಜನೆಯಿಂದ ಭಾರತದ ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದಂತೂ ನಿಜ.
ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಿತ್ತು. ಇದರಿಂದ ಭಾರತದ ಆರ್ಥಿಕತೆಗೆ 1.39 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 11637 ಕೋಟಿ ರು.) ಹರಿದುಬಂದಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
undefined
ಅಂಡರ್-19 ವನಿತೆಯರಿಗೂ ಇನ್ನು ಮುಂದೆ ಏಷ್ಯಾಕಪ್: ಜಯ್ ಶಾ ಮಹತ್ವದ ಘೋಷಣೆ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಐಸಿಸಿ ಸಿಇಒ ಜೆಫ್ ಅಲಾರ್‌ಡೈಸ್, 'ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯು ಕ್ರಿಕೆಟ್‌ನ ಗಮನಾರ್ಹ ಆರ್ಥಿಕ ಶಕ್ತಿಯನ್ನು ಪ್ರದರ್ಶಿಸಿದೆ. ವಿಶ್ವಕಪ್ ಆಯೋಜನೆಯಿಂದ ಭಾರತದ ಆರ್ಥಿಕತೆಗೆ 1.39 ಮಿಲಿಯನ್ ಅಮೆರಿಕನ್ ಡಾಲರ್ (11,637 ಕೋಟಿ ರುಪಾಯಿ) ಆರ್ಥಿಕ ಲಾಭವನ್ನು ಉಂಟು ಮಾಡಿದೆ' ಹೇಳಿದ್ದಾರೆ. ಭಾರತದ ವಿವಿಧ ನಗರಗಳ ಪ್ರವಾಸೋದ್ಯಮದ ಮೇಲೂ ಏಕದಿನ ವಿಶ್ವಕಪ್ ಪ್ರಭಾವ ಬೀರಿದೆ. ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮತ್ತು ವಿದೇಶಿ ಪ್ರೇಕ್ಷಕರು ಆಗಮಿಸಿದ್ದಾರೆ. ಹೀಗಾಗಿ ವಸತಿ, ಪ್ರಯಾಣ, ಸಾರಿಗೆ, ಆಹಾರ ಮತ್ತು ಪಾನೀಯ ಉತ್ಪನ್ನಗಳ ಮಾರಾಟ ಮೂಲಕ 861.4 ಮಿಲಿ ಯನ್ ಅಮೆರಿಕನ್ ಡಾಲರ್ (ಅಂದಾಜು 7,234 ಕೋಟಿ) ಆದಾಯ ಗಳಿಸಿದೆ' ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ವರದಿಯಲ್ಲಿರುವ ಅಂಕಿ ಅಂಶಗಳು ಆದಾಯವೇ ಅಥವಾ ಒಟ್ಟಾರೆ ಆಗಿರುವ ವಹಿವಾಟಿನ ಮೊತ್ತವೇ ಎಂಬುದನ್ನು ಐಸಿಸಿ ಸ್ಪಷ್ಟಪಡಿಸಿಲ್ಲ.
ಇನ್ನು ವಿಶ್ವಕಪ್ ವೀಕ್ಷಕರ ಸಂಖ್ಯೆಯನ್ನು ಐಸಿಸಿ ಬಹಿರಂಗಪಡಿಸಿದೆ. ದಾಖಲೆಯ 12.5 ಲಕ್ಷ ಮಂದಿ ಕ್ರೀಡಾಂಗಣಗಳಿಗೆ ಆಗಮಿಸಿ ಪಂದ್ಯ ವೀಕ್ಷಿಸಿದ್ದಾರೆ. ಇದರಲ್ಲಿ ಶೇ.75ರಷ್ಟು ಮಂದಿ ಮೊದಲ ಬಾರಿ ಏಕದಿನ ವಿಶಕಪ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವಕಪ್ ಪಂದ್ಯ ವೀಕ್ಷಿಸಿದ ವಿದೇಶಿಗರ ಪೈಕಿ ಶೇ.19ರಷ್ಟು ಮಂದಿ ಮೊದಲ ಬಾರಿ ಭಾರತಕ್ಕೆ ಆಗಮಿಸಿದ್ದಾರೆ. ಶೇ.55ರಷ್ಟು ಮಂದಿ ನಿರಂತರವಾಗಿ ಭಾರತಕ್ಕೆ ಬರುತ್ತಿದ್ದವರು ಎಂಬುದನ್ನೂ ಉಲ್ಲೇಖಿಸಲಾಗಿದೆ.
ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ: ಎರಡು ಯುವ ವೇಗಿಗಳಿಗೆ ಸ್ಥಾನ
ಪ್ರವಾಸಿ ತಾಣಗಳಿಗೆ 72361 ಕೋಟಿ ಲಾಭ
ವಿಶ್ವಕಪ್ ವೇಳೆ ಅಂತಾರಾಷ್ಟ್ರೀಯ ಪ್ರೇಕ್ಷಕರು ಭಾರತದ ವಿವಿಧ ನಗರಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಇದರಿಂದಾಗಿ ಆರ್ಥಿಕತೆಯ ಮೇಲೆ 281.2 ಮಿಲಿಯನ್ ಡಾಲರ್ (ಅಂದಾಜು 22,361 ಕೋಟಿ ರುಪಾಯಿ) ಆರ್ಥಿಕ ಪ್ರಭಾವ ಉಂಟುಮಾಡಿದೆ. ಈ ಪೈಕಿ ಶೇ.68ರಷ್ಟು ವಿದೇಶಿ ಪ್ರಯಾಣಿಕರು, ಭವಿಷ್ಯದಲ್ಲಿ ಭಾರತವನ್ನು ಪ್ರವಾಸಿ ತಾಣವಾಗಿ ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ' ಎಂದು ಐಸಿಸಿ ವರದಿಯಲ್ಲಿದೆ.
48,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಏಕದಿನ ವಿಶ್ವಕಪ್‌ನಿಂದ 48,000ಕ್ಕೂ ಹೆಚ್ಚು ಪೂರ್ಣ ಮತ್ತು ಅರೆಕಾಲಿಕ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಐಸಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ವಿಶ್ವಕಪ್ ಸಾವಿರಾರು ಉದ್ಯೋಗ ಗಳನ್ನು ಸೃಷ್ಟಿಸಿದೆ ಮತ್ತು ಭಾರತವನ್ನು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿದೆ. ಐಸಿಸಿ ವಿಶ್ವಕಪ್ ಅಭಿಮಾನಿಗಳನ್ನು ಉತ್ಸಾಹದಿಂದ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ ಆತಿಥೇಯ ರಾಷ್ಟ್ರಗಳ ಆರ್ಥಿಕತೆಗಳಿಗೆ ಗಮನಾರ್ಹ ಕೊಡುಗೆ ನೀಡುತ್ತವೆ ಎಂಬುದನ್ನು ಸಾಬೀತು ಪಡಿಸುತ್ತದೆ' ಎಂದು ಐಸಿಸಿ ತಿಳಿಸಿದೆ.