ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

By Suvarna News  |  First Published Dec 21, 2019, 6:13 PM IST

ವಿಸ್ಡನ್ ದಶಕದ ಏಕದಿನ ತಂಡ ಪ್ರಕಟವಾಗಿದ್ದು ಭಾರತದ ಮೂವರು ಸ್ಥಾನ ಪಡೆದಿದ್ದಾರೆ. 2010ರಿಂದೀಚೆಗೆ ಅದ್ಭುತ ಪ್ರದರ್ಶನ ತೋರಿದ ಆಟಗಾರರ ತಂಡ ಪ್ರಕಟಗೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ಡಿ.21]: ಈ ವರ್ಷ ಹಾಗೆಯೇ 2020ರ ದಶಕ ಮುಗಿಯಲು ಇನ್ನು ಕೆಲವೇ ದಿನಗಳು ಉಳಿದಿವೆ. ಕಳೆದ 10 ವರ್ಷಗಳಲ್ಲಿ ಹಲವಾರು ಅವಿಸ್ಮರಣೀಯ ಕ್ರಿಕೆಟ್ ಕ್ಷಣಗಳಿಗೆ ಸಾಕ್ಷಿಯಾಗಿದ್ದೇವೆ. ಈ ದಶಕದಲ್ಲಿ ಹಲವಾರು ಕ್ರಿಕೆಟಿಗರು ಸ್ಫೋಟಕ ಬ್ಯಾಟ್ಸ್’ಮನ್’ಗಳಾಗಿ ಬೆಳೆದು ನಿಂತರೆ, ಇನ್ನು ಕೆಲವರು ಚಾಣಾಕ್ಷ ಬೌಲರ್’ಗಳಾಗಿ ಹೊರಹೊಮ್ಮಿದ್ದಾರೆ.

ಬುಮ್ರಾ, ಸ್ಮೃತಿಗೆ ಒಲಿದ ವಿಸ್ಡನ್‌ ಕ್ರಿಕೆಟ್‌ ಪ್ರಶಸ್ತಿ

Tap to resize

Latest Videos

undefined

ಈ ದಶಕದಲ್ಲೇ ಮೂರು ಐಸಿಸಿ ಏಕದಿನ ವಿಶ್ವಕಪ್ ನಡೆದಿದ್ದು, 2011ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 2015ರಲ್ಲಿ ಆಸ್ಟ್ರೇಲಿಯಾ ಹಾಗೂ 2019ರಲ್ಲಿ ಆತಿಥೇಯ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು. ಇನ್ನು ಈ ದಶಕದಲ್ಲಿ ಮೈಲುಗಲ್ಲು ಸ್ಥಾಪಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಯನ್ನು ವಿಸ್ಡನ್ ಕ್ರಿಕೆಟ್ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಬ್ಯಾಟ್ಸ್’ಮನ್’ಗಳು ಸ್ಥಾನ ಪಡೆದಿದ್ದಾರೆ. ವಿಸ್ಡನ್ ಆಯ್ಕೆಮಾಡಿದ ಈ ದಶಕದ

ಏಕದಿನ ತಂಡ ಹೀಗಿದೆ ನೋಡಿ...

🚨ODI team of the decade🚨

It wasn't easy, but after an intense debate, our panel settled on the following names.

What's your take?https://t.co/ITE0y4JnHy

— Wisden (@WisdenCricket)

ಆರಂಭಿಕರಾಗಿ ರೋಹಿತ್ ಶರ್ಮಾ- ಡೇವಿಡ್ ವಾರ್ನರ್:
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ 2013ರಿಂದೀಚೆಗೆ ಖಾಯಂ ಓಪನ್ನರ್ ಆಗಿ ಹೊರಹೊಮ್ಮಿದ್ದಾರೆ. ರೋಹಿತ್ ಶರ್ಮಾ ಆರಂಭಿಕನಾಗಿ ಈ ದಶಕದಲ್ಲಿ 179 ಏಕದಿನ ಪಂದ್ಯಗಳಲ್ಲಿ 8186 ರನ್ ಬಾರಿಸಿದ್ದಾರೆ. ಅಲ್ಲದೇ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಸಹಿತ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ಆಸೀಸ್ ಓಪನ್ನರ್ ಡೇವಿಡ್ ವಾರ್ನರ್ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ತನ್ನದೇ ಆದ ಖದರ್ ಸೃಷ್ಟಿಸಿದ್ದಾರೆ. ಆರಂಭಿಕನಾಗಿ ವಾರ್ನರ್ 109 ಏಕದಿನ ಪಂದ್ಯಗಳಲ್ಲಿ 4884 ರನ್ ಸಿಡಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ-ಎಬಿಡಿ-ಬಟ್ಲರ್:
ಆಧುನಿಕ ಕ್ರಿಕೆಟ್’ನ ಸೂಪರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕಳೆದೊಂದು ದಶಕದಿಂದಲೂ ನಂ.3 ಕ್ರಮಾಂಕದ ಬೆಸ್ಟ್ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 226 ಏಕದಿನ ಪಂದ್ಯಗಳನ್ನಾಡಿ 11040 ರನ್ ಬಾರಿಸಿದ್ದಾರೆ. ಆ ಬಳಿಕ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಥಾನ ಪಡೆದಿದ್ದಾರೆ. ಎಬಿಡಿ 135 ಪಂದ್ಯಗಳಲ್ಲಿ 6485 ರನ್ ಬಾರಿಸಿದ್ದಾರೆ. ಇನ್ನು ಅಚ್ಚರಿ ಎಂಬಂತೆ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜೋಸ್ ಬಟ್ಲರ್ 5ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಬಟ್ಲರ್ ಈ ದಶಕದಲ್ಲಿ 142 ಪಂದ್ಯಗಳನ್ನಾಡಿ 3843 ರನ್ ಬಾರಿಸಿದ್ದಾರೆ.

ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ:
ಗ್ರೇಟ್ ಮ್ಯಾಚ್ ಫಿನೀಶರ್, ಚಾಣಾಕ್ಷ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ವಿಸ್ಡನ್ ದಶಕದ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಧೋನಿ 190 ಏಕದಿನ ಪಂದ್ಯಗಳಿಂದ 5640 ರನ್ ಬಾರಿಸಿದ್ದಾರೆ. ಇನ್ನು ವಿಕೆಟ್ ಕೀಪಿಂಗ್’ನಲ್ಲಿ 170 ಕ್ಯಾಚ್ ಹಾಗೂ 72 ಸ್ಟಂಪಿಂಗ್ಸ್ ಮಾಡಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಶಕೀಬ್ ಅಲ್ ಹಸನ್ ಸ್ಥಾನ ಪಡೆದಿದ್ದಾರೆ. ಶಕೀಬ್ 4276 ರನ್ ಹಾಗೂ 177 ವಿಕೆಟ್ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ, ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಹಾಗೂ ಮಿಚೆಲ್ ಸ್ಟಾರ್ಕ್ ಹಾಗೂ ಡೇಲ್ ಸ್ಟೇನ್ ಸ್ಥಾನ ಪಡೆದಿದ್ದಾರೆ. ಮಾಲಿಂಗ 162 ಪಂದ್ಯಗಳಿಂದ 248 ವಿಕೆಟ್ ಪಡೆದರೆ, ಸ್ಟಾರ್ಕ್ 85 ಪಂದ್ಯಗಳಿಂದ 172 ಪಂದ್ಯಗಳನ್ನಾಡಿದ್ದಾರೆ. ಇನ್ನು ಬೋಲ್ಟ್ 89 ಪಂದ್ಯಗಳಿಂದ 164 ವಿಕೆಟ್ ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಈ ಅವಧಿಯಲ್ಲಿ 90 ಏಕದಿನ ಪಂದ್ಯಗಳನ್ನಾಡಿ 145 ವಿಕೆಟ್ ಪಡೆದಿದ್ದಾರೆ.

ಈ ದಶಕದ ವಿಸ್ಡನ್ ಪುರುಷರ ತಂಡ ಹೀಗಿದೆ:
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜೋಸ್ ಬಟ್ಲರ್, ಎಂ.ಎಸ್. ಧೋನಿ, ಶಕೀಬ್ ಅಲ್ ಹಸನ್, ಲಸಿತ್ ಮಾಲಿಂಗ, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಹಾಗೂ ಡೇಲ್ ಸ್ಟೇನ್.
 

click me!