ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಖಚಿತ. ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ.
ಕಟಕ್(ಡಿ.21): ಐಪಿಎಲ್ ಹರಾಜಿನ ಬಳಿಕ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮತ್ತೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯತ್ತ ನೆಟ್ಟಿದೆ. ಇಂಡೋ-ವಿಂಡೀಸ್ ಏಕದಿನ ಸರಣಿ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಡಿ.22ರಂದು ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!
ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಇದೀಗ 3ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ತುದಿಗಾಲಲ್ಲಿ ನಿಂತಿದೆ. ನಿರ್ಣಾಯಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ. ಕಾರಣ ಆರಂಭಿಕ 2 ಏಕದಿನ ಪಂದ್ಯ ಆಡಿದ್ದ ವೇಗಿ ದೀಪಕ್ ಚಹಾರ್ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ದೀಪಕ್ ಚಹಾರ್ ಬದಲು ಹೊಸದಾಗಿ ತಂಡ ಸೇರಿಕೊಂಡ ನವದೀಪ್ ಸೈನಿ ಆಯ್ಕೆಯಾಗೋ ಸಾಧ್ಯತೆ ಇದೆ.
ಇದನ್ನೂ ಓದಿ: 2ನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಸಮಬಲ!.
ಒಡಿಶಾದ ಕಟಕ್ ಪಿಚ್ ಸ್ಪಿನ್ನರ್‌ಗೆ ಸಹಾಕಾರಿಯಾಗಿರುವುದರಿಂದ ವಿರಾಟ್ ಕೊಹ್ಲಿ 2ನೇ ಬದಲಾವಣೆ ಮಾಡುವ ಸಾಧ್ಯತೆ ಇದೆ. ಶಾರ್ದೂಲ್ ಠಾಕೂರ್ ಬದಲು ಯಜುವೇಂದ್ರ ಚಹಾಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾದಲ್ಲಿ ಕುಲ್ದೀಪ್ ಹಾಗೂ ಯಜುವೇಂದ್ರ ಚಹಾಲ್ ಮೋಡಿ ಮಾಡಲಿದ್ದಾರೆ.
ಭಾರತ ಸಂಭವನೀಯ ತಂಡ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಯಜುವೇಂದ್ರ ಚಹಾಲ್
ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ