ಪಾಕಿಸ್ತಾನದಲ್ಲೇ ಲೀಗ್ ಟೂರ್ನಿ ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಇದರ ಬೆನ್ನಲ್ಲೇ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಲಾಹೋರ್(ನ.09): ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆಯೋಜನೆಗೆ ಕ್ರಿಕೆಟ್ ಮಂಡಳಿ ತಯಾರಿ ನಡೆಸುತ್ತಿದೆ. ತವರಿನಲ್ಲಿ ಶ್ರೀಲಂಕಾ ವಿರುದ್ದದ ಟಿ20 ಪಂದ್ಯ ಯಶಸ್ವಿಯಾಗಿ ಆಯೋಜಿಸಿರುವ ಪಾಕಿಸ್ತಾನ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನೂ ತವರಿನಲ್ಲೇ ಆಯೋಜಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಪಾಕ್ ಸೂಪರ್ ಲೀಗ್ ಟೂರ್ನಿಯಿಂದ ಸೌತ್ ಆಫ್ರಿಕಾ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ಟಿ20 ಲೀಗ್; ಹೊಸ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್!
2019ರಲ್ಲಿ ಎಬಿ ಡಿವಿಲಿಯರ್ಸ್ ಲಾಹೋರ್ ಖಲಂದರ್ಸ್ ಪರ ಆಡಿದ್ದರು. ಆದರೆ ಈ ಬಾರಿಯ ಟೂರ್ನಿಯ ಡ್ರಾಫ್ಟ್‌ನಿಂದಲೇ ತಮ್ಮ ಹೆಸರನ್ನು ತೆಗೆಸಿದ್ದಾರೆ. ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸಲು ಮುಂದಾಗಿರುವ ಕಾರಣ ಎಬಿಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಇದನ್ನೂ ಓದಿ: ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!
ಬೆನ್ನು ನೋವಿನ ಕಾರಣ ಪಾಕಿಸ್ತಾನ ಪ್ರವಾಸ ಮಾಡುತ್ತಿಲ್ಲ ಎಂದು ಎಬಿಡಿ ಹೇಳಿದ್ದಾರೆ. ಐಪಿಎಲ್ ಟೂರ್ನಿ ಮಾತ್ರ ಆಡಲು ನಿರ್ಧರಿಸಿರುವ ಎಬಿ ಡಿವಿಲಿಯರ್ಸ್ ಇತರ ಟೂರ್ನಿಗಳಿಂದ ಹಿಂದೆ ಸರಿಯುತ್ತಿದ್ದಾರೆ. ಮೂಲಕ ಐಪಿಎಲ್‌ಗೆ ಹೆಚ್ಚಿನ ವಿಶ್ರಾಂತಿ ಪಡೆದು ಕಣಕ್ಕಿಳಿಯುವ ಸಾಧ್ಯತೆ ಇದೆ.