3 ಹೊಸ ನಗರಗಳಲ್ಲಿ IPL ಪಂದ್ಯ ಆಯೋಜನೆ?

By Web Desk  |  First Published Nov 9, 2019, 6:39 PM IST

IPL ಟೂರ್ನಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಮುಂದಿನ ಐಪಿಎಲ್ ಟೂರ್ನಿ 3 ಹೊಸ ನಗರಗಳಲ್ಲಿ ಆಯೋಜನೆಯಾಗುತ್ತಿದೆ. ಪಂದ್ಯ ನಡುಯೆವು ಹೊಸ ನಗರಗಳ ಮಾಹಿತಿ ಇಲ್ಲಿದೆ.


ಮುಂಬೈ(ನ.09): 2020ರ ಐಪಿಎಲ್ ಟೂರ್ನಿ ಹಲವು ಬದಲಾವಣೆ ಕಾಣುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಮನೋರಂಜನಾ ಕ್ರಿಕೆಟ್‌ಗಿಂತ ವೃತ್ತಿಪರ ಕ್ರಿಕೆಟ್ ಆಗಿ ಬದಲಾಯಿಸಲು ಹಲವು ಕ್ರಮ ಕೈಗೊಂಡಿದ್ದಾರೆ. ಐಪಿಎಲ್ ಟೂರ್ನಿಗೆ ಹೊಸ ತಂಡ ಸೇರ್ಪಡೆಗೆ 2022ರ ವರೆಗೆ ಕಾಯಬೇಕು. ಆದರೆ ಹೊಸ ನಗರಗಳಲ್ಲಿ ಐಪಿಎಲ್ ಪಂದ್ಯ ಆಯೋಜನೆ 2020ರ ಐಪಿಎಲ್ ಟೂರ್ನಿಯಲ್ಲೇ ನಡೆಯಲಿದೆ.

ಇದನ್ನೂ ಓದಿ: IPL ಉದ್ಘಾಟನಾ ಸಮಾರಂಭ; ಕಳೆದ ಬಾರಿ ಪುಲ್ವಾಮಾ, ಈಗ ಮತ್ತೊಂದು ಕಾರಣಕ್ಕೆ ರದ್ದು?

Latest Videos

undefined

ಸದ್ಯ ಐಪಿಎಲ್ ಟೂರ್ನಿ ಪಂದ್ಯಗಳು 8 ಫ್ರಾಂಚೈಸಿಗಳ ನಗರದಲ್ಲಿ ನಡೆಯುತ್ತವೆ. ಮುಂದಿನ ಐಪಿಎಲ್ ಟೂರ್ನಿಯನ್ನು 3 ಹೊಸ ನಗರಗಳಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಲಕ್ನೋ, ಗುವ್ಹಾಟಿ ಹಾಗೂ ತಿರುವಂತಪುರದಲ್ಲೂ ಐಪಿಎಲ್ ಪಂದ್ಯ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ:ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಫ್ರಾಂಚೈಸಿ ಮನವಿ ಮೇರೆಗೆ ಬಿಸಿಸಿಐ ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಲಕ್ನೋ ನಗರವನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ನ   ಸೆಕೆಂಡ್ ಹೋಮ್ ಗ್ರೌಂಡ್ ಮಾಡಲು ಮನವಿ ಮಾಡಿದೆ. ರಾಜಸ್ಥಾನ ರಾಯಲ್ಸ್ ಅಹಮ್ಮದಾಬಾದ್ ಬದಲು ಗುವ್ಹಾಟಿಗೆ ಸ್ಥಳಾಂತರಿಸಲು ಸೂಚಿಸಿದೆ. 
 

click me!