6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!

Published : Jun 17, 2022, 10:05 AM IST
6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!

ಸಾರಾಂಶ

* ಭಾರತ ತಂಡದಲ್ಲಿ ನಾಯಕತ್ವಕ್ಕಾಗಿ ಸಾಕಷ್ಟು ಪೈಪೋಟಿ * ಕಳೆದ 6 ತಿಂಗಳಲ್ಲಿ ಐವರು ಆಟಗಾರರು ನಾಯಕರಾಗಿ ಕಣಕ್ಕೆ * ಟೀಂ ಇಂಡಿಯಾದಲ್ಲಿ ನಾಯಕತ್ವಕ್ಕಿಲ್ಲ ಕೊರತೆ

ನವದೆಹಲಿ(ಜೂ.17): ಐರ್ಲೆಂಡ್‌ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕನಾಗಿ ಆಯ್ಕೆಯಾಗುವುದರೊಂದಿಗೆ 2022ರಲ್ಲಿ ಟೀಂ ಇಂಡಿಯಾವನ್ನು (Team India) ಮುನ್ನಡೆಸಲಿರುವ 5ನೇ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ವರ್ಷ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ (Rohit Sharma), ಕೆ.ಎಲ್‌.ರಾಹುಲ್‌ (KL Rahul) ಹಾಗೂ ರಿಷಭ್ ಪಂತ್‌ (Rishabh Pant) ಭಾರತ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಜನವರಿಯಲ್ಲಿ ನಡೆದಿದ್ದ ದ.ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ಗೆ ಕೊಹ್ಲಿ ನಾಯಕತ್ವ ವಹಿಸಿದ್ದರೆ, ಏಕದಿನ ಸರಣಿಯಲ್ಲಿ ಕನ್ನಡಿಗ ರಾಹುಲ್‌ ತಂಡ ಮುನ್ನಡೆಸಿದ್ದರು. ಬಳಿಕ ವೆಸ್ಟ್‌ಇಂಡೀಸ್‌ ಏಕದಿನ, ಟಿ20 ಸರಣಿ, ಶ್ರೀಲಂಕಾ ವಿರುದ್ಧದ ಟೆಸ್ಟ್‌, ಏಕದಿನ ಸರಣಿಯಲ್ಲಿ ರೋಹಿತ್‌ ತಂಡಕ್ಕೆ ನಾಯಕರಾಗಿದ್ದರು. ಸದ್ಯ ನಡೆಯುತ್ತಿರುವ ದ.ಆಫ್ರಿಕಾ ಟಿ20 ಸರಣಿಯಲ್ಲಿ ತಂಡವನ್ನು ರಿಷಬ್‌ ಪಂತ್‌ ಮುನ್ನಡೆಸುತ್ತಿದ್ದಾರೆ.

ಇಂಗ್ಲೆಂಡ್‌ಗೆ ತೆರಳಿದ ಭಾರತ ಟೆಸ್ಟ್‌ ತಂಡ

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಜುಲೈ 1ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಆಟಗಾರರು ಗುರುವಾರ ಇಂಗ್ಲೆಂಡ್‌ಗೆ ತೆರಳಿದರು. ನಾಯಕ ರೋಹಿತ್ ಶರ್ಮಾ‌, ವಿರಾಟ್‌ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಸೇರಿದಂತೆ ಎಲ್ಲಾ ಆಟಗಾರರು ಕೋವಿಡ್‌ ಪರೀಕ್ಷೆ ಬಳಿಕ ಇಂಗ್ಲೆಂಡ್‌ಗೆ ತೆರಳಿದರು. ಇದರ ಫೋಟೋಗಳನ್ನು ಬಿಸಿಸಿಐ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಆದರೆ ಸದ್ಯ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುತ್ತಿರುವ ರಿಷಭ್ ಪಂತ್‌, ಶ್ರೇಯಸ್‌ ಅಯ್ಯರ್ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಸರಣಿ ಜೂನ್‌ 19ರ ಬಳಿಕ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

ಭಾರತ ಕ್ರಿಕೆಟ್‌ ತಂಡದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಕ್ಕೀಡಾದ ಟೀಂ ಇಂಡಿಯಾ ಆಟಗಾರರು, ಇಂಗ್ಲೆಂಡ್‌ ವಿರುದ್ಧ ಆರಂಭಗೊಳ್ಳಬೇಕಿದ್ದ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಡಲು ಹಿಂದೇಟು ಹಾಕಿದ ಬೆನ್ನಲ್ಲೇ ಕೊನೆಯ ಟೆಸ್ಟ್ ಪಂದ್ಯವನ್ನು ದಿಢೀರ್ ಕಾರಣದಿಂದಾಗಿ ರದ್ದುಪಡಿಸಲಾಗಿತ್ತು. 5 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1ರ ಮುನ್ನಡೆ ಹೊಂದಿದೆ.

ರಾಹುಲ್‌ ಜರ್ಮನಿಗೆ: ಸ್ನಾಯುಸೆಳೆತಕ್ಕೆ ಒಳಗಾಗಿರುವ ಕೆ.ಎಲ್‌.ರಾಹುಲ್‌ ಚಿಕಿತ್ಸೆಗಾಗಿ ಶೀಘ್ರದಲ್ಲೇ ಜರ್ಮನಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ಅವರು ಗೈರು ಆಗುವುದು ಬಹುತೇಕ ಖಚಿತ.

ಟಿ20 ರ‍್ಯಾಂಕಿಂಗ್‌‌: 68 ಸ್ಥಾನ ಮೇಲೇರಿದ ಇಶಾನ್‌ ಕಿಶನ್

ದುಬೈ: ಅಭೂತಪೂರ್ವ ಲಯದಲ್ಲಿರುವ ಭಾರತದ ಯುವ ಬ್ಯಾಟರ್‌ ಇಶಾನ್‌ ಕಿಶನ್‌ ಅವರು ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ಅಗ್ರ-10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನೂತನವಾಗಿ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ ಇಶಾನ್‌ ಬರೋಬ್ಬರಿ 68 ಸ್ಥಾನ ಮೇಲಕ್ಕೇರಿದ್ದು, ಸದ್ಯ 7ನೇ ಸ್ಥಾನದಲ್ಲಿದ್ದಾರೆ. ಇಶಾನ್‌ ಅಗ್ರ-10ರಲ್ಲಿರುವ ಏಕೈಕ ಭಾರತೀಯ ಬ್ಯಾಟರ್‌ ಆಗಿದ್ದು, ಕನ್ನಡಿಗ ಕೆ.ಎಲ್‌.ರಾಹುಲ್‌ 14ನೇ, ರೋಹಿತ್‌ ಶರ್ಮಾ 16, ಶ್ರೇಯಸ್‌ ಅಯ್ಯರ್‌ 17ನೇ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ 2 ಸ್ಥಾನ ಕುಸಿದು 21ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ 11ನೇ ಸ್ಥಾನಕ್ಕೇರಿದ್ದು, ಚಹಲ್‌ 4 ಸ್ಥಾನ ಮೇಲೇರಿ 26ನೇ ಸ್ಥಾನ ಪಡೆದಿದ್ದಾರೆ.

ಈತನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದ್ದು ಖುಷಿಯಾಯ್ತು ಎಂದ ಮಾಜಿ ಕ್ರಿಕೆಟಿಗರು..!

ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ ಅಗ್ರಸ್ಥಾನಕ್ಕೇರಿದ್ದು, ರೋಹಿತ್‌ ಹಾಗೂ ಕೊಹ್ಲಿ ಕ್ರಮವಾಗಿ 7, 10ನೇ ಸ್ಥಾನದಲ್ಲಿದ್ದಾರೆ. ಆರ್‌.ಅಶ್ವಿನ್‌ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಜಸ್‌ಪ್ರೀತ್‌ ಬುಮ್ರಾ 3ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ, ಅಶ್ವಿನ್‌ ಅಗ್ರ 2 ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಏಕದಿನ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದು, ರೋಹಿತ್‌ 4ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್‌ ಆಜಂ ಹಾಗೂ ಇಮಾಮ್‌ ಉಲ್‌ ಹಕ್‌ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!