ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತ, 34ರ ಹರೆಯದ ಯುವಕ ನಿಧನ!

By Suvarna NewsFirst Published Oct 25, 2022, 7:23 PM IST
Highlights

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ರೋಚಕತೆ, ತೀವ್ರತೆ ಎಷ್ಟಿತ್ತು ಅನ್ನೋದು ಬಿಡಿಸಿ ಹೇಳುವುದೇ ಕಷ್ಟ. ವೀಕ್ ಹಾರ್ಟ್ ಇದ್ದವರು ಈ ಪಂದ್ಯದ ಹೈಲೈಟ್ಸ್ ನೋಡಿದರೂ ಕಷ್ಟ. ಇದೀಗ ತಡವಾಗಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಿದ ಯುವ ಸ್ಥಳದಲ್ಲೇ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ

ಅಸ್ಸಾಂ(ಅ.25):  ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ. ಪ್ರತಿ ಎಸೆತವೂ ಎಲ್ಲರ ಎದೆಬಡಿತ ಹೆಚ್ಚಿಸುತ್ತಿತ್ತು. ಒಂದೊಂದು ರನ್ ಸಿಡಿಸಿದಾಗ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಟೀಂ ಇಂಡಿಯಾ ಚೇಸಿಂಗ್ ವೇಳೆಯ ಅಂತಿಮ ಮೂರು ಓವರ್ ವೀಕ್ ಹಾರ್ಟ್ ಇರುವ ಮಂದಿಗೆ ಸೂಕ್ತವಲ್ಲ. ಕಾರಣ ಅಷ್ಟರ ಮಟ್ಟಿಗೆ ಒತ್ತಡ, ಆತಂಕವನ್ನು ನಿಭಾಯಿಸುವುದು ಕಷ್ಟ. ಹೀಗೆ ಈ ರೋಚಕ ಪಂದ್ಯ ವೀಕ್ಷಿಸುತ್ತಿದ್ದ 34ರ ಹರೆಯದ ಅಸ್ಸಾಂ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.

ಅಸ್ಸಾಂನ ಶಿವಸಾಗರ ಜಿಲ್ಲೆಯ ಬಿಟು ಗೊಗೋಯ್ ಅನ್ನೋ 34 ಹರೆಯದ ವ್ಯಕ್ತಿ ತನ್ನ ಸ್ನೇಹಿತರ ಜೊತೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಿದ್ದಾನೆ. ಶಿವಸಾಗರದ ಸಿನಿಮಾ ಮಂದಿರದಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಲೈವ್ ಪ್ರಸಾರ ಮಾಡಲಾಗಿತ್ತು. ಈ ಸಿನಿಮಾ ಮಂದಿರಕ್ಕೆ ತೆರಳಿ ಪಂದ್ಯ ವೀಕ್ಷಿಸಿದ್ದಾನೆ. ಕಿಕ್ಕಿರಿದು ತುಂಬಿದ ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆ ನಡುವೆ ಅತೀ ಒತ್ತಡದ ಪಂದ್ಯ ವೀಕ್ಷಿಸಿಲಾಗಿದೆ.

Latest Videos

IND vs PAK ಕೊಹ್ಲಿ ಬ್ಯಾಟಿಂಗ್‌ನಿಂದ ಸ್ಥಗಿತಗೊಂಡಿತ್ತು UPI ಟ್ರಾನ್ಸಾಕ್ಷನ್, ಶಾಪಿಂಗ್, ಕುತೂಹಲ ಮಾಹಿತಿ ಬಹಿರಂಗ!

ಪಾಕಿಸ್ತಾನ ಬ್ಯಾಟಿಂಗ್ ಮುಗಿದು ಟೀಂ ಇಂಡಿಯಾ ಚೇಸಿಂಗ್ ವೇಳೆ ಒತ್ತಡಗಳು ಹೆಚ್ಚಾಗಿದೆ. ಕಾರಣ ಆರಂಭದಲ್ಲೇ ನಾಲ್ಕು ವಿಕೆಟ್ ಪತನ, ಬಳಿಕ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಅಭಿಮಾನಿಗಳ ಆತಂಕ ಹೆಚ್ಚಿಸಿದ್ದು ಸುಳ್ಳಲಲ್ಲ. ಇತ್ತ ಬಿಟು ಗೊಗೋಯ್ ಕೂಡ ಟೀಂ ಇಂಡಿಯಾ ಚೇಸಿಂಗ್ ಅಂತಿಮ ಘಟ್ಟ ತಲುಪುತ್ತಿದ್ದಂತೆ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆ. 

ತಕ್ಷಣವೇ ಬಿಟು ಗೋಗೋಯ್‌ನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ವೈದ್ಯರು ಬಿಟು ಗೊಗೋಯ್ ಹೃದಯಾಘಾತದಿಂದ ನಿಧನರಾಗಿರುವುದಾಗಿ ಖಚಿತಪಡಿಸಿದ್ದಾರೆ. ಅತೀವ ಶಬ್ಧ ಹಾಗೂ ಅತೀಯಾದ ಒತ್ತಡದಿಂದ ಹೃದಯಾಘಾತ ಸಂಭವಿಸಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಿಟು ಗೊಗೋಯ್ ಯಾವುದೇ ಆರೋಗ್ಯ ಸಮಸ್ಯೆ ಎದುರಿಸಿರಲಿಲ್ಲ. ಇಷ್ಟೇ ಅಲ್ಲ ಯಾವುದೇ ದುರಭ್ಯಾಸಗಳು ಇರಲಿಲ್ಲ.

Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್ ಕೊಹ್ಲಿಗೆ ಸೆಲ್ಯೂಟ್, ವಿಡಿಯೋ ವೈರಲ್ ..!

ಕರ್ಕಶ ಶಬ್ದ, ಹೆಚ್ಚು ಗಾಳಿಯಾಡದ ಪ್ರದೇಶದಲ್ಲಿ ಒತ್ತಡ, ಆತಂಕದ ಸಂದರ್ಭ ಎದುರಿಸುವುದು ಹಾಗೂ ನಿಭಾಯಿಸುವುದು ಸೂಕ್ತವಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿನಿಮಾ ಚಿತ್ರಮಂದಿರದಲ್ಲಿ ಇಂಡೋ ಪಾಕ್ ಪಂದ್ಯ ಪ್ರಸಾರ ಮಾಡಲು ಅನುಮತಿ ಪಡೆದಿರುವ ಕರುತು ಅನುಮಾನಗಳು ವ್ಯಕ್ತವಾಗಿದೆ. ಇದೀಗ ಚಿತ್ರಮಂದಿರದ ಮಾಲೀಕರ ವಿರುದ್ದವೂ ತನಿಖೆ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ದದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 160 ರನ್ ಚೇಸ್ ಮಾಡಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತದಲ್ಲಿ ಅಜೇಯ 82 ರನ್ ಸಿಡಿಸಿದರು. ಅಂತಿ ಎಸೆತದಲ್ಲಿ ಆರ್ ಅಶ್ವಿನ್ ಗೆಲವಿನ ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ ಅತ್ಯಂತ ರೋಚಕ ರೀತಿಯಲ್ಲಿ ಪಂದ್ಯ ಗೆದ್ದುಕೊಂಡಿತು.
 

click me!