ಟೆಸ್ಟ್ ಕ್ರಿಕೆಟ್ ಅನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಐಸಿಸಿ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಬಲಿಷ್ಠ ತಂಡಗಳ ನಡುವೆ ಹೆಚ್ಚಿನ ಸರಣಿಗಳನ್ನು ಆಯೋಜಿಸಲು ಟೆಸ್ಟ್ ಸರಣಿಗಳನ್ನು ಎರಡು ದರ್ಜೆಗಳಾಗಿ ವಿಂಗಡಿಸುವ ಚಿಂತನೆ ನಡೆಸುತ್ತಿದೆ. ಈ ಯೋಜನೆಯು 2027ರ ನಂತರ ಜಾರಿಗೆ ಬರಬಹುದು.
ದುಬೈ: ಟೆಸ್ಟ್ ಕ್ರಿಕೆಟ್ ಅನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸುವ ನಿಟ್ಟಿನಲ್ಲಿ ಐಸಿಸಿ ಹೊಸ ಯೋಜನೆಗೆ ಸಿದ್ಧವಾಗಿದೆ. ಬಲಿಷ್ಠ ತಂಡಗಳ ನಡುವೆ ಹೆಚ್ಚಿನ ಸರಣಿ ಆಯೋಜಿಸಲು ಟೆಸ್ಟ್ ಸರಣಿಗಳನ್ನೇ 2 ದರ್ಜೆಗಳನ್ನಾಗಿ ವಿಂಗಡಿಸಲು ಚಿಂತನೆ ನಡೆಸುತ್ತಿದೆ.
ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಈ ತಿಂಗಳ ಕೊನೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ, ಕ್ರಿಕೆಟ್ ಇಂಗ್ಲೆಂಡ್ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಟೆಸ್ಟ್ ಕ್ರಿಕೆಟ್ ಹೊಸ ಶೈಲಿ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಸದ್ಯದ ಪ್ರಸ್ತಾವದ ಪ್ರಕಾರ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದ.ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾಗಳನ್ನು ಮೊದಲ ದರ್ಜೆ ಎಂದು ಪರಿಗಣಿಸಲಾಗುತ್ತದೆ.
ಈ ದರ್ಜೆಯ ತಂಡಗಳೇ ಪರಸ್ಪರ ಸರಣಿ ಆಡಲಿವೆ. ವೆಸ್ಟ್ಇಂಡೀಸ್, ಜಿಂಬಾಬ್ವೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಐರ್ಲೆಂಡ್ 2ನೇ ದರ್ಜೆಯಲ್ಲಿರಲಿವೆ. ಆ ತಂಡಗಳು ಮೊದಲ ದರ್ಜೆಯ ತಂಡಗಳ ನಡುವೆ ಸರಣಿ ಆಡುವ ಅವಕಾಶವಿರುವುದಿಲ್ಲ. ಈ ಶೈಲಿ 2027ರ ಬಳಿಕವಷ್ಟೇ ಜಾರಿಗೊಳ್ಳುವ ಸಾಧ್ಯತೆಯಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಮುಂದಿದೆ 6 ಬೆಟ್ಟದಷ್ಟು ಸವಾಲು!
ಆದರೆ ಬಲಿಷ್ಠ ತಂಡಗಳ ಜೊತೆ ಆಡುವ ಅವಕಾಶ ಸಿಗುವುದಿಲ್ಲ ಹಾಗೂ ಆದಾಯ ಕಡಿತಗೊಳ್ಳುವ ಭೀತಿಯಿಂದ ಈ ಯೋಜನೆಗೆ ಬಾಂಗ್ಲಾ, ಜಿಂಬಾಬ್ವೆ ಸೇರಿ ಕೆಲ ದೇಶಗಳು ವಿರೋಧ ವ್ಯಕ್ತಪಡಿಸಿವೆ.
18 ವರ್ಷದ ಬಳಿಕ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಬಂದ ವಿಂಡೀಸ್ ತಂಡ!
ಕರಾಚಿ: 18 ವರ್ಷಗಳ ನಂತರ ವೆಸ್ಟ್‌ಇಂಡೀಸ್ ತಂಡವು ಟೆಸ್ಟ್ ಸರಣಿಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. 2006ರಲ್ಲಿ ವಿಂಡೀಸ್ ತಂಡ ಕೊನೆಯದಾಗಿ ಟೆಸ್ಟ್ ಸರಣಿ ಆಡಲು ಪಾಕಿಸ್ತಾನಕ್ಕೆ ಆಗಮಿಸಿತ್ತು. ಜ.10ರಿಂದ ವಿಂಡೀಸ್ ತಂಡ ಪಾಕಿಸ್ತಾನದ ಶಾಹೀನ್ಸ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವಾಡಲಿದೆ. ಬಳಿಕ ಮುಲ್ತಾನ್‌ನಲ್ಲಿ ಜ.17ರಿಂದ ಪಾಕ್-ವಿಂಡೀಸ್ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಜ.25ರಿಂದ ಎರಡನೇ ಟೆಸ್ಟ್ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆಯ್ಕೆ ಗೊಂದಲದಲ್ಲೇ ಮುಗಿದ ಆಸೀಸ್ ಪ್ರವಾಸ; ಇನ್ನು 6 ತಿಂಗಳಲ್ಲೇ ಬಲಿಷ್ಠ ತಂಡ ಕಟ್ಟುವ ಸವಾಲು
ಟೆಸ್ಟ್: ಪಾಕ್ ವಿರುದ್ಧ 10 ವಿಕೆಟ್‌ನಿಂದ ಗೆದ್ದ ಆಫ್ರಿಕಾ
ಕೇಪ್‌ಟೌನ್: ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 10 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈ ವಶಡಪಡಿಸಿಕೊಂಡಿದೆ. ದ.ಆಫ್ರಿಕಾದ 615 ರನ್‌ಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 194 ರನ್‌ಗೆ ಆಲೌಟಾಗಿದ್ದ ಪಾಕ್, ಫಾಲೋ ಆನ್‌ಗೆ ತುತ್ತಾಗಿತ್ತು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪಾಕ್, 478 ರನ್ ಸಿಡಿಸಿ ಇನ್ನಿಂಗ್ಸ್ ಸೋಲಿನಿಂದ ತಪ್ಪಿಸಿಕೊಂಡಿತು. ಶಾನ್ ಮಸೂದ್ 145, ಸಲ್ಮಾನ್ 48, ರಿಜ್ವಾನ್ 41 ರನ್ ಗಳಿಸಿದರು. ಗೆಲುವಿಗೆ 58 ರನ್ ಗುರಿ ಪಡೆದ ದ.ಆಫ್ರಿಕಾ 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ಸೇರಿತು. ಇದು ದ.ಆಫ್ರಿಕಾಕ್ಕೆ ಸತತ 7ನೇ ಟೆಸ್ಟ್ ಗೆಲುವು.