COVID-19 ಅಂತರ ಕಾಯ್ದುಕೊಳ್ಳಲು ದಿನಸಿ ಮಾಲೀಕ ವಿನೂತನ ಐಡಿಯಾಗೆ ಶಶಿ ತರೂರ್ ಫಿದಾ !

By Suvarna News  |  First Published Mar 26, 2020, 8:46 PM IST

ಕೊರೋನಾ ವೈರಸ್ ಹರಡದಂತೆ ತಡೆಯಲು ಇರವು ಒಂದೇ ಮಾರ್ಗ ಮನೆಯಿಂದ ಹೊರಬರದೆ ಸ್ವಯಂ ದಿಗ್ಬಂಧನಲ್ಲಿರುವುದು. ಇನ್ನು ಅಗತ್ಯ ವಸ್ತುಗಳ ಖರೀದಿಗೆ ಹೊರಬಂದರೂ ಅಂತರ ಕಾಯ್ದುಕೊಳ್ಳುವುದು ಅತೀ ಅಗತ್ಯ. ದಿನಸಿ ಅಂಗಡಿ, ತರಕಾರಿ ಅಂಗಡಿಗಳ ಬಳಿ ಇದೀಗ ಜನಸಂದಣಿ ಹೆಚ್ಚಾಗುತ್ತಿರುವುದು ಕೂಡ ಆತಂತಕ್ಕೆ ಕಾರಣವಾಗಿದೆ. ಇದಕ್ಕೆ ದಿನಸಿ ಅಂಗಡಿ ಮಾಲೀಕನ ಐಡಿಯಾಗೆ ಎಂಪಿ ಶಶಿ ತರೂರ್ ಫಿದಾ ಆಗಿದ್ದಾರೆ.


ಕೇರಳ(ಮಾ.26): ಸಂಪೂರ್ಣ ಭಾರತ ಲಾಕ್‌ಡೌನ್. ಕೊರೋನಾ ವೈರಸ್ ಹತೋಟಿಗೆ ತರಲು ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇಲ್ಲ. ಇದೀಗ ಜನರು ಮನೆಯೊಳಗ ಬಂಧಿಯಾಗಿದ್ದಾರೆ. ಭಾರತದ ಲಾಕ್‌ಡೌನ್ 2ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು 19 ದಿನಗಳು ಭಾರತ ಲಾಕ್‌ಡೌನ್ ಆಗಿರಲಿದೆ. ಆದರೆದಿನಸಿ, ತರಕಾರಿ, ಹಾಲು, ನೀರು ಸೇರಿದಂತೆ  ಅಗತ್ಯ ವಸ್ತುಗಳು ಲಭ್ಯವಿದೆ. ಜನರು ಆಹಾರ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

Latest Videos

ಕೊರೋನಾ ವೈರಸ್ ತಡೆಯಲ ಅಂತರ ಕಾಯ್ದುಕೊಳ್ಳುವುದು ಅತೀ ಅಗತ್ಯ. ಅಗತ್ಯ ವಸ್ತುಗಳ ಖರೀದಿಗೆ ಆಗಮಿಸುವ ಗ್ರಾಹಕರಿಂದ ಇದೀಗ ಅಂಗಡಿ ಮಾಲೀಕರು ಭಯಗೊಂಡಿದ್ದಾರೆ. ಅಂಗಡಿ ತೆರೆದು ಸಾಹಸ ಮಾಡಿ, ತಮಗೆಲ್ಲಿ ಕೊರೋನಾ ಹರಡುತ್ತೋ ಅನ್ನೋ ಭಯದಿಂದ ಬದುಕುತ್ತಿದ್ದಾರೆ. ಗ್ರಾಹಕರಿಂದ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕೇರಳದ ದಿನಸಿ ಅಂಗಡಿ ಮಾಲೀಕ ಹೊಸ ಐಡಿಯಾ ಮಾಡಿದ್ದಾನೆ. 

ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ್ದ ವ್ಯಕ್ತಿಗೆ ಕೊರೋನಾ ಸೋಂಕು!

ಗ್ರಾಹಕರಿಗೆ ವಸ್ತುಗಳನ್ನು ನೀಡಲು ಕನಿಷ್ಟ 1 ಮೀಟರ್ ಅಂತರ ಕಾಯ್ದುಕೊಳ್ಳಲು ಮಾಲೀಕ ಹೊಸ ಪ್ರಯೋಗ ಮಾಡಿದ್ದಾನೆ. ಪೈಪ್ ಅಳವಡಿಸಿ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಈ ಪೈಪ್ ಮೂಲಕ ಹಾಕಿದರೆ ಇತ್ತ ಗ್ರಾಹಕರು ಚೀಲ ಹಿಡಿದು ತೆಗೆದುಕೊಳ್ಳಬೇಕು. ಈ ಐಡಿಯಾಗೆ ಕೇರಳ ಎಂಪಿ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಮಾಲೀಕನ ಫೋಟೋ ಪೋಸ್ಟ್ ಮಾಡಿದ್ದಾರೆ.

 

How to maintain physical distance between shopkeeper & customer while buying essential supplies -- the Kerala way! pic.twitter.com/H1djrcFDSO

— Shashi Tharoor (@ShashiTharoor)

ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ದಿನಸಿ ಮಾಲೀಕನ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಎಲ್ಲರೂ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟರ್ ಮೂಲಕ ಮಾಲೀಕನ ಐಡಿಯಾವನ್ನು ಕೊಂಡಾಡಿದ್ದಾರೆ. ಇಷ್ಟೇ ಅಲ್ಲ ಇತರ ದಿನಸಿ ಅಂಗಡಿ ಮಾಲೀಕರು ಈ ಐಡಿಯಾ ಅಳವಡಿಸಿಕೊಳ್ಳಿ ಅನ್ನೋ ಸಂದೇಶವನ್ನು ನೀಡುತ್ತಿದ್ದಾರೆ. 

click me!