ಕೊರೋನಾ ಸೋಂಕಿತನಿಗೆ ಏಡ್ಸ್ ಮದ್ದು ಬಳಸಿದ ಕೇರಳ; ಗುಣಮುಖರಾದ ಬ್ರಿಟಿಷ್ ಪ್ರಜೆ!

By Suvarna News  |  First Published Mar 26, 2020, 5:13 PM IST

ಕೊರೋನಾ ಸೋಂಕಿತರ ದೇಹದಲ್ಲಿ ರೋಗನಿರೋಧ ಶಕ್ತಿ ಹೆಚ್ಚಿದ್ದಲ್ಲಿ ಗುಣಮುಖರಾಗುತ್ತಾರೆ. ಇಲ್ಲದಿದ್ದಲ್ಲಿ ಸಾವೇ ಗತಿ. ಕಾರಣ ಕೊರೋನಾ ವೈರಸ್‌ಗೆ ಸೂಕ್ತ ಲಸಿಕೆ ಲಭ್ಯವಿಲ್ಲ. ಇದೀಗ ಕೇರಳ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದೆ. 


ಕೊಚ್ಚಿ(ಮಾ.26): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ದೊಡ್ಡ ಚಿಂತೆಯಾಗಿದ್ದರೆ, ಸೋಂಕಿತರ ಚಿಕಿತ್ಸೆ ಬಹದೊಡ್ಡ ಸಮಸ್ಯೆಯಾಗಿದೆ. ಕೊರೋನಾ ವೈರಸ್‌ಗೆ ಸೂಕ್ತ ಲಸಿಕೆ, ಮದ್ದು ಲಭ್ಯವಿಲ್ಲ. ಸೋಂಕಿತರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಹೀಗಾಗಿ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿರುವ ಕೊರೋನಾ ವೈರಸ್‌ಗೆ ಕೇರಳದಲ್ಲಿ ಏಡ್ಸ್ ಮದ್ದು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ.

ಕೊರೋನಾ ಆತಂಕ: ಫೇಸ್‌ಬುಕ್‌ನಲ್ಲಿ ಫೇಕ್‌ ಸುದ್ದಿ ಹರಿಬಿಟ್ಟವನ ವಿರುದ್ಧ ಕೇಸ್‌!

Latest Videos

undefined

ಕೇರಳ ಪ್ರವಾಸದಲ್ಲಿದ್ದ ಬ್ರಿಟೀಷ್ ಪ್ರಜೆಗೆ ಮಾರ್ಚ್ 15 ರಂದು ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಬ್ರಿಟೀಷ್ ಪ್ರಜೆ ಜೊತೆ ಇನ್ನು 17 ಮಂದಿ ಕೇರಳ ಪ್ರವಾಸಕ್ಕೆ ಆಗಮಿಸಿದ್ದರು. ಕೊರೋನಾ ಸೋಂಕು ಖಚಿತವಾಗುತ್ತಿದ್ದಂತೆ ಕೇರಳ ಎಲ್ಲರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಸೋಂಕಿತನನ್ನು ಎರ್ನಾಂಕುಲಂ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿದ ಕೇರಳ ಸರ್ಕಾರ ಚಿಕಿತ್ಸೆ ಆರಂಭಿಸಿತು. 

ಕೊರೋನಾ ಆತಂಕ: ಫೇಸ್‌ಬುಕ್‌ನಲ್ಲಿ ಫೇಕ್‌ ಸುದ್ದಿ ಹರಿಬಿಟ್ಟವನ ವಿರುದ್ಧ ಕೇಸ್‌!

ಕೊರೋನಾ ಸೋಂಕಿತರಿಗೆ ಏಡ್ಸ್(HIV) ಡ್ರಗ್ಸ್ ನೀಡಬುಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿತ್ತು. ಇನ್ನು ICMR(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ) ಕೂಡ ಕೊರೋನಾ ಸೋಂಕಿತರಿಗೆ ಏಡ್ಸ್(HIV) ಡ್ರಗ್ಸ್ ನೀಡಲು ಅನುಮತಿ ನೀಡಿತ್ತು. ಎರ್ನಾಕುಲಂ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಥೋಮಸ್ ಮ್ಯಾಥ್ಯೂ ಮುಂದಾಳತ್ವದಲ್ಲಿ ವೈದ್ಯರ ತಂಡ ಸೋಂಕಿತ ಬ್ರಿಟೀಷ್ ಪ್ರಜೆಯ ಅನುಮತಿ ಪಡದು ರಿಟೋನಾವೈರ್ ಹಾಗೂ ಲೊಪಿನಾವೈರ್(HIV ಆ್ಯಂಟಿವೈರಲ್ ಡ್ರಗ್ಸ್) ನೀಡಿದ್ದಾರೆ.

ವ್ಯಾಪಿಸುತ್ತಲೇ ಇದೆ ಕೊರೋನಾ, ಮತ್ತೆ ನಾಲ್ವರಿಗೆ ಸೋಂಕು: ಒಟ್ಟು 55ಕ್ಕೇರಿಕೆ

ಸತತ 7 ದಿನ ನಿಗದಿತ ಪ್ರಮಾಣದಲ್ಲಿ ಕೊರೋನಾ ಸೋಂಕಿತನಿಗೆ HIV ಡ್ರಗ್ಸ್ ನೀಡಲಾಗಿದೆ. ಮಾರ್ಚ್ 20ಕ್ಕೆ ಬ್ರಿಟಿಷ್ ಪ್ರಜೆ ಬಹುತೇಕ ಚೇತರಿಸಿಕೊಂಡಿದ್ದಾರೆ. ಇನ್ನು ಮಾರ್ಚ್ 23 ರಂದು ಬ್ರಿಟಿಷ್ ಪ್ರಜೆಯನ್ನು 2ನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನೆಗೆಟೀವ್ ರಿಪೋರ್ಟ್ ಬಂದಿದೆ.  ಈ ಮೂಲಕ ಕೇರಳ ವೈದ್ಯರು ಏಡ್ಸ್ ಮದ್ದಿನಿಂದ ಕೊರೋನಾ ಸೋಂಕಿತನನ್ನು ಗುಣಮುಖ ಪಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಕೊರೋನಾ ವೈರಸ್ ತುಗುಲಿದ ವ್ಯಕ್ತಿಗೆ ಏಡ್ಸ್ ಮದ್ದು ಪ್ರಯೋಗಿಸಲಾಗಿದೆ. ಇಷ್ಟೇ ಇಲ್ಲ ಇದರಲ್ಲಿ ಕೇರಳ ವೈದ್ಯರು ಯಶಸ್ವಿಯಾಗಿದ್ದಾರೆ. ಬ್ರಿಟೀಷ್ ಪ್ರಜೆ ಪತ್ನಿಯನ್ನೂ ಪ್ರತ್ಯೇಕವಾಗಿರಿಸಿಸಲಾಗಿತ್ತು. ಇದೀಗ ಪತ್ನಿ ಪರೀಕ್ಷೆ ವರದಿ ಕೂಡ ನೆಗಟೀವ್ ಆಗಿದೆ. ಇದೀಗ ಜಿಲ್ಲಾಧಿಕಾರಿ ಕೆ ಸುಹಾಸ್ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ HIV ಡ್ರಗ್ಸ್ ಲಭ್ಯವಿರುವಂತೆ ಮಾಡಿದ್ದಾರೆ. 

click me!